Advertisement

ಹಿಂದುತ್ವ ಎನ್ನುವುದು ಧರ್ಮವಲ್ಲ ಅದು ಜೀವನ ವಿಧಾನ: ಮೋಹನ್ ಭಾಗವತ್

02:30 PM Sep 26, 2022 | Team Udayavani |

ನವದೆಹಲಿ: ”ಭಾರತೀಯ ಮತ್ತು ಹಿಂದೂಗಳು ಸಮಾನಾರ್ಥಕ ಭೌಗೋಳಿಕ-ಸಾಂಸ್ಕೃತಿಕ ಗುರುತು. ನಾವೆಲ್ಲರೂ ಹಿಂದೂಗಳು ಎಂದು ಆರ್ ಎಸ್ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಸೋಮವಾರ ಹೇಳಿದ್ದಾರೆ.

Advertisement

ಗುಡ್ಡಗಾಡು ರಾಜ್ಯ ಮೇಘಾಲಯಕ್ಕೆ ಎರಡು ದಿನಗಳ ಭೇಟಿಯ ಮೊದಲ ದಿನ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ಭಾರತದ ಸರ್ವತೋಮುಖ ಅಭಿವೃದ್ಧಿ ಮತ್ತು ಸಮಾಜವನ್ನು ಸಂಘಟಿಸುವುದು ಸಂಘದ ಧ್ಯೇಯವಾಗಿದೆ. ವೈಯಕ್ತಿಕ ಹಿತಾಸಕ್ತಿಗಳನ್ನು ತ್ಯಾಗ ಮಾಡುವ ಮೂಲಕ ದೇಶಕ್ಕಾಗಿ ತ್ಯಾಗ ಮಾಡುವುದನ್ನು ಆರ್‌ಎಸ್‌ಎಸ್ ಕಲಿಸುತ್ತದೆ ಎಂದರು.

ಇದನ್ನೂ ಓದಿ : ಮೈಸೂರಿನಲ್ಲೇ ತಯಾರಾದ ರೇಷ್ಮೆ ಸೀರೆಯುಟ್ಟು ದಸರೆಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

”ಹಿಮಾಲಯದ ದಕ್ಷಿಣ, ಹಿಂದೂ ಮಹಾಸಾಗರದ ಉತ್ತರ ಮತ್ತು ಸಿಂಧೂ ನದಿಯ ದಡದ ನಿವಾಸಿಗಳನ್ನು ಸಾಂಪ್ರದಾಯಿಕವಾಗಿ ಹಿಂದೂಗಳು ಎಂದು ಕರೆಯಲಾಗುತ್ತದೆ. ಮೊಘಲರು ಮತ್ತು ಕ್ರಿಶ್ಚಿಯನ್ನರಿಗಿಂತ ಮುಂಚೆಯೇ ಹಿಂದೂಗಳು ಅಸ್ತಿತ್ವದಲ್ಲಿದ್ದರು. ವಾಸ್ತವವಾಗಿ ಹಿಂದುತ್ವ ಎನ್ನುವುದು ಧರ್ಮವಲ್ಲ ಅದು ಜೀವನ ವಿಧಾನ” ಎಂದರು.

ಭಾರತಮಾತೆಯ ಮಗ ಹಿಂದೂ
”ಹಿಂದೂ ಎಂಬ ಪದವು ಭಾರತಮಾತೆಯ ಪುತ್ರರಾದ ಭಾರತೀಯ ಪೂರ್ವಜರ ವಂಶಸ್ಥರು ಮತ್ತು ಭಾರತೀಯ ಸಂಸ್ಕೃತಿಯ ಪ್ರಕಾರ ಬದುಕುವವ ಎಲ್ಲರನ್ನೂ ಒಳಗೊಂಡಿದೆ. ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ ಹಿಂದೂಗಳು . ಹಿಂದೂ ಆಗಲು ಧರ್ಮ ಬದಲಾಯಿಸುವ ಅಗತ್ಯವಿಲ್ಲ. ಭಾರತವು ಪಾಶ್ಚಿಮಾತ್ಯ ಪರಿಕಲ್ಪನೆಯ ದೇಶವಲ್ಲ” ಎಂದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next