Advertisement

ಪ್ರತಿ ಗ್ರಾಮದಲ್ಲೂ ಆರೆಸ್ಸೆಸ್‌ ಮಹಿಳಾ ಘಟಕ ಆರಂಭ ಅವಶ್ಯ

12:48 PM Aug 08, 2017 | Team Udayavani |

ಹುಬ್ಬಳ್ಳಿ: ಇಂದು ಪ್ರತಿಯೊಂದು ಗ್ರಾಮ, ತಾಲೂಕು ಮಟ್ಟದಲ್ಲಿಯೂ ಆರ್‌ಎಸ್‌ಎಸ್‌ ಮಹಿಳಾ ಘಟಕಗಳನ್ನು ಆರಂಭಿಸುವುದು ಅವಶ್ಯವಾಗಿದೆ ಎಂದು ನಿವೃತ್ತ ಹಿರಿಯ ಕೆಎಎಸ್‌ ಅಧಿಕಾರಿ ಮಹಾಂತೇಶ ಗೊಂಗಡಶೆಟ್ಟಿ ಹೇಳಿದರು. ಗೋಕುಲ ರಸ್ತೆಯ ಗೋಕುಲ ಗಾರ್ಡನ್‌ ನಲ್ಲಿ ಸೋಮವಾರ ಆರ್‌ಎಸ್‌ಎಸ್‌ನಿಂದ ನಡೆದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

1925ರಲ್ಲಿ ಆರಂಭವಾಗಿರುವ ಆರ್‌ಎಸ್‌ಎಸ್‌ ಸಂಘಟನೆ ಇಂದು ಸುದೀರ್ಘ‌ ಹೋರಾಟದ ಫಲವಾಗಿ ಹೆಮ್ಮರವಾಗಿ ಬೆಳೆದಿದೆ. ಭಾರತೀಯತೆ, ರಾಷ್ಟ್ರೀಯತೆ ಮನೋಭಾವ ಹೊಂದಿದ ಪ್ರತಿಯೊಬ್ಬರು ಸಶಕ್ತರಾಗಿದ್ದಾರೆ. ಆಂತರಿಕ ಯುದ್ಧಗಳನ್ನು ಎದುರಿಸಲು ನಾವು ಇನ್ನೂ ಶಕ್ತಿಶಾಲಿಗಳಾಗಬೇಕಿದೆ ಎಂದರು. 

ಚೀನಾ ಹಾಗೂ ಪಾಕಿಸ್ತಾನ ಭಾರತದ ಮೇಲೆ ದಬ್ಟಾಳಿಕೆ ಮಾಡುತ್ತಿವೆ. ಆದರೆ, ಎರಡು ದೇಶಗಳಿಗೆ ಎಚ್ಚರಿಕೆ ನೀಡುವ ಶಕ್ತಿ ಭಾರತಕ್ಕೆ ಇದೆ. ಇಂದು ಭಾರತ ಬಲಿಷ್ಠವಾಗಿ ಬೆಳೆದು ಬಲಾಡ್ಯ ರಾಷ್ಟ್ರಗಳಿಗೆ ಸರಿಸಮನಾಗಿ ನಿಂತಿದೆ. ನಮಗೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಸ್ವಭಾವ ಇರುವುದರಿಂದ ಯಾವುದೇ ಯುದ್ಧಕ್ಕೂ ಮುಂದಾಗುತ್ತಿಲ್ಲ. 

ನಾವೆಲ್ಲ ಒಗ್ಗಟ್ಟಾಗಿ ಇರಬೇಕಾದ ಅಗತ್ಯತೆ ಇದೆ ಎಂದರು. ದಕ್ಷಿಣ ಮಧ್ಯ ಕ್ಷೇತ್ರದ ಸಂಯೋಜಕ ರಘುನಂದನ ಮಾತನಾಡಿ, ರಕ್ಷಾ ಬಂಧನದ ಮೂಲಕ ರಾಷ್ಟ್ರ, ಹಿಂದೂ ಸಮಾಜದ ಸಂಕಲ್ಪದೊಂದಿಗೆ ಆಚರಣೆ ಮಾಡಬೇಕಾಗಿದೆ. ಇಂದು ನಮ್ಮ ಸಂಸ್ಕೃತಿಯ ಮೇಲೆ ದಾಳಿಯಾಗಲು ನಮ್ಮ ನಡವಳಿಕೆಗಳೇ ಪ್ರಮುಖ ಕಾರಣವಾಗಿವೆ.

ಸಂಕುಚಿತ ಭಾವನೆಗಳಿಂದ ದೂರವಿದ್ದು, ಇದು ನಮ್ಮ ಪರಿವಾರವೆಂದು ಆತ್ಮೀಯತೆಯಿಂದ ಕಾಣಬೇಕು ಎಂದರು. ಇಡೀ ಪ್ರಪಂಚವನ್ನೇ ಹಿಂದೂ ಧರ್ಮವನ್ನಾಗಿ ಮಾಡುವ ಗುರಿ ನಮ್ಮೆಲ್ಲರ ಆಶಯವಾಗಬೇಕಿದೆ. ರಕ್ಷಾ ಬಂಧನದ ಹಬ್ಬದ ಮೂಲಕ ರಾಷ್ಟ್ರ ರಕ್ಷಣೆಗಾಗಿ, ಹಿಂದೂ ಸಮಾಜ ರಕ್ಷಣೆಗಾಗಿ ಸಂಕಲ್ಪ ತೊಟ್ಟಿದ್ದೇವೆ.

Advertisement

ಆದರೆ, ಹಿಂದೂ ಸಮಾಜದಲ್ಲಿಯೇ ಜಾತಿ-ಜಾತಿಗಳ ನಡುವೆ ಕಲಹಗಳು ಉಂಟಾಗುತ್ತಿವೆ. ಸಾಮರಸ್ಯ ತರಲು ಸಂಘಟನೆ ಅವಶ್ಯಕವಾಗಿದೆ ಎಂದರು. ಮತಬ್ಯಾಂಕ್‌ನಿಂದಾಗಿ ಹಿಂದೂ ಸಮಾಜವನ್ನು ದುರ್ಬಲಗೊಳಿಸುವ ಕೆಲಸ ನಡೆಯುತ್ತಿದೆ. ದೇಶದಲ್ಲಿ ಸಮಾಜವೇ ಪ್ರಧಾನವಾಗಿದ್ದು, ಸವಾಲುಗಳನ್ನು ಸಮಾಜವೇ ಎದುರಿಸುತ್ತಿದೆ. ಮತಾಂದರ ಲವ್‌ ಜಿಹಾದ್‌ ಗಳ ವಿರುದ್ಧ ಸಿಡಿದೇಳಬೇಕಾಗಿದೆ.

ಭಾರತ  ಮತ್ತೆ ಜಗದ್ಗುರು ಆಗುವ ಎಲ್ಲ ಲಕ್ಷಣಗಳು ಇವೆ. ಎಲ್ಲವನ್ನೂ ಎದುರಿಸುವ ಶಕ್ತಿ ಭಾರತಕ್ಕೆ ಬಂದಿದೆ ಎಂದರು. ಮಹಾನಗರ ಸಂಘ ಚಾಲಕ ಶಿವಾನಂದ ಆವಟಿ, ಮಹಾಪೌರ ಡಿ.ಕೆ. ಚವ್ಹಾಣ, ಉಪಮಹಾಪೌರ ಲಕ್ಷ್ಮಿಬಾಯಿ ಬಿಜವಾಡ, ಮಾಜಿ ಶಾಸಕ ಅಶೋಕ ಕಾಟವೆ, ಪಾಲಿಕೆ ಸದಸ್ಯ ಸುಧೀರ ಸರಾಫ್, ಲಿಂಗರಾಜ ಪಾಟೀಲ, ಸುಭಾಸಸಿಂಗ್‌ ಜಮಾದಾರ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next