Advertisement

ಯುವಕರು ರಾಷ್ಟ್ರದ, ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು: ದತ್ತಾತ್ರೇಯ ಹೊಸಬಾಳೆ

02:24 PM Oct 23, 2021 | Team Udayavani |

ಮೈಸೂರು: ಯುವಕರು ಸಮಾಜದ, ರಾಷ್ಟ್ರದ ಋಣ ತೀರಿಸುವ ಕೆಲಸ ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ತಿಳಿಸಿದರು.

Advertisement

ಶನಿವಾರ ಮೈಸೂರಿನ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಮ.ವೆಂಕಟರಾಮು ಅಭಿನಂದನಾ ಸಮಿತಿ ಹಾಗೂ ಪ್ರಲಕ್ಷ ಚಾರಿಟಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಮ.ವೆಂಕಟರಾಮು ಅವರಿ ಅಭಿನಂದನೆ ಹಾಗೂ ಸಾಮರಸ್ಯದ ಸಹೃದಯಿ ಮ.ವೆಂಕಟರಾಮು ಗ್ರಂಥ ಬಿಡುಗಡೆ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಆಶಯ ನುಡಿಗಳನ್ನಾಡಿದ ಅವರು, ಇಂದಿನ ಹಾಗೂ ಮುಂದಿನ ಯುವಪೀಳಿಗೆಯವರು ರಾಮಕೃಷ್ಣ ಸ್ವಾಮಿ, ಮ.ವೆಂಕಟರಾಮು ರಂತಹ ಹಿರಿಯರ ಸಾಮಾಜಿಕ ಮೌಲ್ಯಗಳು, ಧ್ಯೇಯ, ಆದರ್ಶಗಳನ್ನು ಓದಿ, ತಮ್ಮ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಂಡು, ಹಿರಿಯರು ಹಾಕಿಕೊಟ್ಟಿರುವ ಆದರ್ಶ ಮಾರ್ಗ ದಲ್ಲಿ ನಡೆಯಬೇಕು. ರಾಷ್ಟ್ರದ, ಸಮಾಜದ ಸೇವೆಯನ್ನು ಮಾಡುವ ಮೂಲಕ ಋಣ ತೀರಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಬೇರೆಯವರಿಗೆ ಯಾವುದೇ ರೀತಿಯ ನೋವು ಕೊಡದೆ, ಸಮಾಜ ಕಂಟಕರಿಗೆ, ದುಷ್ಟರಿಗೆ ತಲೆ ಭಾಗದೆ ಧೈರ್ಯದಿಂದ, ಸ್ವಾಭಿಮಾನದಿಂದ ನಿಲ್ಲಬೇಕು. ಹಿರಿಯರ ಮಾರ್ಗದರ್ಶನದಲ್ಲಿ ಧರ್ಮಪಾಲನೆ ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ:ಕೋವಿಡ್ -19: ಭಾರತದಲ್ಲಿ ಎರಡು ವರ್ಷಗಳಷ್ಟು ಜೀವಿತಾವಧಿ ಕಡಿಮೆ ಮಾಡಿದೆಯೇ..?

ಜೀವನ ಮೌಲ್ಯ ಪದ್ಧತಿ, ಶ್ರೇಷ್ಠ ಸಾಮಾಜಿಕ ಪರಂಪರೆ ಗೌರವಿಸುವ ಇಂತಹ ಕಾರ್ಯ ಕ್ರಮಗಳು ನಡೆಯಬೇಕು. ವ್ಯಕ್ತಿಯ ಗುಣಗಾನಕ್ಕಾಗಿ ಅಲ್ಲ, ಸಂಘದ ಕಾರ್ಯ ಕರ್ತರಾಗಿ, ಸಂಘ ನೀಡಿದ ವಿವಿಧ ಜವಾಬ್ದಾರಿ ಗಳನ್ನು ಯೋಗ್ಯವಾಗಿ ನಿರ್ವಹಿಸಿ, ಎಲ್ಲಾ ವರ್ಗಗಳನ್ನು ಜೋಡಿಸಿ ಕೊಂಡು, ಸಂಘವನ್ನು ಕಟ್ಟಿ, ಸಂಘದ ಬಗ್ಗೆ ಅಜ್ಞಾನ ಹೊಂದಿ, ಸಂಘವನ್ನು ವಿರೋಧಿಸುತ್ತಿರುವ ಜನರಿಗೆ ಸಂಘ ಏನೆಂದು ತೋರಿಸುವ ಮೂಲಕ ಸೇತುವೆಯಾಗಿ ಕೆಲಸ ನಿರ್ವಹಣೆ ಮಾಡಿರುವ ಮ.ವೆಂಕಟರಾಮು ಅವರ ಆದರ್ಶ ವನ್ನು, ಜೀವನ ಮೌಲ್ಯ ಗಳು, ಧ್ಯೇಯವನ್ನು ಎಲ್ಲರೂ ಅಳವಡಿಸಿ ಕೊಳ್ಳಬೇಕಾಗಿದೆ ಎಂದು ತಿಳಿಸಿದರು.

Advertisement

ಕಾರ್ಯ ಕ್ರಮದಲ್ಲಿ ಆರ್ ಎಸ್ಎಸ್ ನ ಹಿರಿಯ ಪ್ರಚಾರಕರಾದ ಸು.ರಾಮಣ್ಣ. ಸುತ್ತೂರು ಶ್ರೀ, ಉದ್ಯಮಿ ಜಗನ್ನಾಥ್, ಮ.ವೆಂಕಟರಾಮು, ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಮಾಜಿ ವಿಧಾನ ಪರಿಷತ್ ಸದಸ್ಯ, ವಾಮನರಾವ್ ಬಾಪಟ್ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next