ಬೆಂಗಳೂರು: ವಿಜಯದಶಮಿಯ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಬೆಂಗಳೂರು ಮಹಾನಗರ ಘಟಕದ ವತಿಯಿಂದ ನಗರದ ವಿವಿಧೆಡೆ ಪಥಸಂಚಲನ ಹಮ್ಮಿಕೊಳ್ಳಲಾಗಿದೆ.
ಅ.21ರಂದು ಬೆಂಗಳೂರು ದಕ್ಷಿಣ ವಿಭಾಗದ ಬನಶಂಕರಿ, ವಿಜಯನಗರ, ಶಂಕರಪುರ, ಮಾರತ್‌ಹಳ್ಳಿ ಮತ್ತು ಬೆಂಗಳೂರು ಉತ್ತರ ವಿಭಾಗದ ಮಲ್ಲೇಶ್ವರ, ಹಲಸೂರಿನಲ್ಲಿ, ಅ.28ರಂದು ಜಯನಗರ, ಚಂದಾಪುರ, ವತ್ತೂರು ಮತ್ತು ಉತ್ತರ ವಿಭಾಗದ ಯಲಹಂಕ, ಕೆ.ಆರ್.ಪುರ, ದಾಸರಹಳ್ಳಿ ಹಾಗೂ ಬಸವೇಶ್ವರನಗರದಲ್ಲಿ ಪಥಸಂಚಲನ ಆಯೋಜಿಸಲಾಗಿದೆ.
ಅ.21ರಂದು ಬನಶಂಕರಿ ವಲಯದ ಪಥಸಂಚಲನ ಬೆಳಗ್ಗೆ 9ಕ್ಕೆ ಕುಮಾರಸ್ವಾಮಿ ಬಡಾವಣೆಯ ಸಾಗರ್ ಆಸ್ಪತ್ರೆ ಸಮೀಪದಿಂದ ಹೊರಡಲಿದೆ. ವಿಜಯನಗರದ ಪಥಸಂಚಲನ ಶ್ರೀಗಂಧಕಾವಲ್‌ನ ಕುವೆಂಪು ರಂಗಮಂದಿರದಿಂದ ಹಾಗೂ ಶಂಕರಪುರದ ಪಥಸಂಚಲನ ಗಿರಿನಗರದ ಅವಲಹಳ್ಳಿ ಬಸ್‌ನಿಲ್ದಾಣದಿಂದ ಮತ್ತು ಮಾರತ್‌ಹಳ್ಳಿ ಪಥಸಂಚಲನ ಎಸ್‌ಬಿಆರ್ ಪ್ಯಾಲೇಸ್ ಚೌಟ್ರಿಯಿಂದ ಬೆಳಗ್ಗೆ 8.30ಕ್ಕೆ ಹೊರಡಲಿದೆ.
ಜಯನಗರದ ಪಥಸಂಚಲನ ವಿವೇಕನಗರದ ಆಸ್ಟೀನ್ ಟೌನ್ ಮೈದಾನದಿಂದ ಮಧ್ಯಾಹ್ನ 3ಕ್ಕೆ, ಚಂದಾಪುರ ಪಥಸಂಚಲನ ಹರಗಡ್ಡೆ ಬಸ್‌ನಿಲ್ದಾಣದಿಂದ ಬೆಳಗ್ಗೆ 9.30ಕ್ಕೆ ಹೊರಡಲಿದೆ. ವತ್ತೂರು ಪಥಸಂಚಲನ ಎಚ್‌ಎಸ್‌ಆರ್ ಬಡಾವಣೆಯ ಅಭ್ಯಾಂಜನೇಯ ದೇವಸ್ಥಾನದಿಂದ ಬೆಳಗ್ಗೆ 8ಕ್ಕೆ, ಮಲ್ಲೇಶ್ವರ ಪಥಸಂಚಲನ ಪ್ರಕಾಶನಗರದ ಕಾರ್ಪೊರೇಷನ್ ಮೈದಾನದಿಂದ ಬೆಳಗ್ಗೆ 9ಕ್ಕೆ, ಯಲಹಂಕದ ಪಥಸಂಚಲನ ಮಾರುತಿನಗರದ ಮೈದಾನದಿಂದ ಬೆಳಗ್ಗೆ 9ಕ್ಕೆ ಹೊರಡಲಿದೆ.
ಕೆ.ಆರ್.ಪುರದ ಪಥಸಂಚಲನ ಕೆ.ಆರ್.ಪುರ ಸರ್ಕಾರಿ ಕಾಲೇಜು ಮೈದಾನದಿಂದ ಹಾಗೂ ದಾಸರಹಳ್ಳಿ ಪಥಸಂಚಲನ ಚೊಕ್ಕಸಂದ್ರದಿಂದ ಬೆಳಗ್ಗೆ 9ಕ್ಕೆ, ಬಸವೇಶ್ವರನಗರ ಪಥಸಂಚಲನ ರಾಜಾಜಿನಗರ ರಾಮಂದಿರ ಮೈದಾನದಿಂದ ಹಾಗೂ ಹಲಸೂರು ಪಥಸಂಚಲನ ಕಮ್ಮನಹಳ್ಳಿ ಬಿಬಿಎಂಪಿ ಆಟದ ಮೈದಾನದಿಂದ ಬೆಳಗ್ಗೆ 8.30ಕ್ಕೆ ಹೊರಡಲಿದೆ ಎಂದು ವಿಶ್ವಸಂವಾದ ಕೇಂದ್ರ ಪ್ರಕಟಣೆ ತಿಳಿಸಿದೆ.