Advertisement

ಆರ್‌ಎಸ್‌ಎಸ್‌-ಬಿಜೆಪಿ ದರ್ಪಕ್ಕೆ ದೇಶ ಬಲಿ: ಡಾ|ಸಾಕೆ

01:11 PM Aug 05, 2017 | |

ಸೇಡಂ: ದೇಶದಲ್ಲಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ದರ್ಪದ ರಾಜಕೀಯದಿಂದ ಇಡೀ ದೇಶ ಬಲಿಯಾಗುತ್ತಿದೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಜಿಲ್ಲಾ ವಿಭಾಗೀಯ ಉಸ್ತುವಾರಿ ಡಾ| ಸಾಕೆ ಶೈಲಜಾನಾಥ ಆರೋಪಿಸಿದರು.

Advertisement

ಪಟ್ಟಣದ ಕೆ.ಎನ್‌.ಝಡ್‌ ಫಂಕ್ಷನ್‌ ಹಾಲ್‌ ನಲ್ಲಿ ಕಾಂಗ್ರೆಸ್‌ ವತಿಯಿಂದ ಆಯೋಜಿಸಿದ್ದ ವಿಧಾನಸಭಾ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ಕೇವಲ ಧರ್ಮದ ಆಧಾರದ ಮೇಲೆ ಜನರನ್ನು ಪರಿವರ್ತಿಸುವ ಬಿಜೆಪಿ ಮತ್ತು ಆರ್‌ ಎಸ್‌ಎಸ್‌ ಹುನ್ನಾರ ಎಂದಿಗೂ ಫಲಿಸದು. ಸಮಾಜದಲ್ಲಿ ಕೋಮುವಾದಿತನ ಸೃಷ್ಟಿಸಿ ದೇಶವನ್ನು ಇಬ್ಟಾಗ ಮಾಡುವ ಮಟ್ಟಿಗೆ ಈ ಸಂಘಟನೆಗಳು ಕೆಲಸ ಮಾಡುತ್ತಿವೆ. ಜಾತಿ- ಜಾತಿಗಳ ನಡುವೆ ಜಗಳ ಸೃಷ್ಟಿಸಿ  ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವುದು ಖಂಡನೀಯ ಎಂದು ಗುಡುಗಿದರು.

ನರೇಂದ್ರ ಮೋದಿ ಸರ್ಕಾರ ಎಷ್ಟೇ ಕಾಂಗ್ರೆಸ್‌ ಪಕ್ಷವನ್ನು ಬಗ್ಗು ಬಡಿಯಲು ಯತ್ನಿಸಿದರೂ ಪಕ್ಷ ಮತ್ತಷ್ಟು ಗಟ್ಟಿಯಾಗುತ್ತದೆ. ಕಾಂಗ್ರೆಸ್‌ ಪಕ್ಷಕ್ಕೆ ಬಿಜೆಪಿಯವರಿಂದ ದೇಶಭಕ್ತಿ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಖಾರವಾಗಿ ನುಡಿದರು. ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ಜನಪರ ಆಡಳಿತ ನೀಡುವ ಮೂಲಕ ಜನರ ಮನಸಲ್ಲಿ ಉಳಿದಿರುವ ಕಾಂಗ್ರೆಸ್‌ ಪಕ್ಷವನ್ನು ಕೇವಲ ಹೆದರಿಸಿ, ಬೆದರಿಸಿ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಈ ರೀತಿಯ ಬೆಳವಣಿಗೆಗಳ ನೆರಳಲ್ಲೇ ಪಕ್ಷವನ್ನು ಮತ್ತಷ್ಟು ಸಂಘಟಿಸಿ, ಬೆಳೆಸುವ ಕೆಲಸವಾಗಬೇಕಿದೆ. ಬಿಜೆಪಿಯವರ ಡೊಂಬರಾಟದ ರಾಜಕೀಯ ಜನರಿಗೆ ತಿಳಿಸಬೇಕಾಗಿದೆ ಎಂದು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಸಂತಕುಮಾರ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಮುಖಂಡ ತಿಪ್ಪಣಪ್ಪ ಕಮಕನೂರ, ಜಿಪಂ ಮಾಜಿ ಸದಸ್ಯ ಡಾ| ವೆಂಕಟರೆಡ್ಡಿ ಪಾಟೀಲ ಕೋಲಕುಂದಾ, ಹಿರಿಯ ಮುಖಂಡ ಸತೀಶರೆಡ್ಡಿ ರಂಜೋಳ
ಮಾತನಾಡಿದರು. ಶಂಭುರೆಡ್ಡಿ ಮದ್ನಿ, ಶ್ರೀನಿವಾಸ ದೇಶಪಾಂಡೆ, ಎಪಿಎಂಸಿ ಅಧ್ಯಕ್ಷ ಗುರುನಾಥರೆಡ್ಡಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ನರೇಂದ್ರರೆಡ್ಡಿ, ಜಿಪಂ ಸದಸ್ಯ ದಾಮೋದರೆಡ್ಡಿ ಪಾಟೀಲ, ಟಿಎಪಿಸಿಎಂ ಅಧ್ಯಕ್ಷ ವೆಂಕಟರಾಮರೆಡ್ಡಿ ಹೈಯಾಳ, ಗಣಪತರಾವ ಚಿಮ್ಮನಚೋಡಕರ್‌, ಕರೆಪ್ಪ ಪಿಲ್ಲಿ, ಜೈಭೀಮ ಊಡಗಿ, ರಾಮಯ್ಯ ಪೂಜಾರಿ, ಬಸಮ್ಮ ಪಾಟೀಲ, ರವಿ ಸಾಹು ತಂಬಾಕೆ, ವಿಶ್ವನಾಥ ಪಾಟೀಲ, ಸಿದ್ದು ಬಾನರ್‌,
ಅಬ್ದುಲ್‌ ಗಫೂರ ಹಾಜರಿದ್ದರು. ಮುಧೋಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವೆಂಕಟರಾಮರೆಡ್ಡಿ ಕಡತಾಲ ಸ್ವಾಗತಿಸಿದರು. ನಗರ ಯೋಜನಾ ಪ್ರಾ ಕಾರದ ಅಧ್ಯಕ್ಷ ನಾಗೇಶ್ವರಾವ ಮಾಲಿಪಾಟೀಲ ನಿರೂಪಿಸಿ, ವಂದಿಸಿದರು. 

ದೇಶದಲ್ಲಿ ಅರಾಜಕತೆ ಸೃಷ್ಟಿ
ರಾಜ್ಯದ ಸಚಿವರೊಬ್ಬರ ಮನೆ ಮೇಲೆ ಹುನ್ನಾರ ನಡೆಸುವ ಮೂಲಕ ದಾಳಿ ನಡೆಸಲು ಉಸ್ತುವಾರಿ ಹೊತ್ತಿರುವ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ತಾವೇ ದೊಡ್ಡ ಅಕ್ರಮದಲ್ಲಿ ತೊಡಗಿರುವುದು ಮಾಧ್ಯಮಗಳಿಗೆ ತಿಳಿಯುತ್ತಿಲ್ಲ. ಅಷ್ಟರ ಮಟ್ಟಿಗೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ.
ಡಾ| ಸಾಕೆ ಶೈಲಜಾನಾಥ, ಎಐಸಿಸಿ ಕಾರ್ಯದರ್ಶಿ

Advertisement
Advertisement

Udayavani is now on Telegram. Click here to join our channel and stay updated with the latest news.

Next