Advertisement

ಆರ್‌ಎಸ್‌ಎಸ್‌ ವಿರೋಧಿಗಳು ಸಮಾಜಕ್ಕೆ ಹೊರೆ

05:37 PM Oct 11, 2021 | Team Udayavani |

ಹಾಸನ: ಆರ್‌ಎಸ್‌ಎಸ್‌ ವಿರುದ್ಧ ಮಾತನಾಡುವವರು ಹಿಂದೂ ಸಮಾಜಕ್ಕೆ ಹೊರೆ ಎಂದು ರಾಷ್ಟ್ರೀಯ ಸ್ವಯಂ ಸೇವಕರ ಸಂಘದ (ಆರ್‌ಎಸ್‌ಎಸ್‌) ತುಮಕೂರು ವಿಭಾಗದ ಪ್ರಚಾರಕ ಅಕ್ಷಯ್‌ ಬೌದ್ಧಿಕ್‌ ಆಕ್ರೋಶ ವ್ಯಕ್ತಪಡಿಸಿದರು.

Advertisement

ನವರಾತ್ರಿ ಸಂದರ್ಭದಲ್ಲಿ ಪ್ರತಿ ವರ್ಷ ನಡೆಸುವ ಆರ್‌ಎಸ್‌ಎಸ್‌ ಪಥಸಂಚಲನದಂತೆ ಈ ವರ್ಷವೂ ನಡೆದ ಪಥಸಂಚಲನದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರ್‌ಎಸ್‌ಎಸ್‌ ಬಗ್ಗೆ ಯಾರೂ ಹಗುರವಾಗಿ ಮಾತನಾಡಬಾರದು. ಹಿಂದೂಗಳನ್ನು ಸಂಘಟನೆ ಮಾಡುವ ಉದ್ದೇಶದಿಂದ ಆರ್‌ ಎಸ್‌ಎಸ್‌ ಸ್ಥಾಪನೆಯಾಗಿದೆ.

ಹಿಂದೂಗಳು ಸಂಘಟಿತರಾದರೆ ದೇಶ ಶಾಂತವಾಗಿರುತ್ತದೆ ಎಂದರು. ಹೊಳೆನರಸೀಪುರದ ನಾಯಕರು ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವಾಗ ಜಾಗೃತರಾಗಿ ಮಾತನಾಡಬೇಕು. ಮುಂದಿನ ದಿನಗಳಲ್ಲಿ ಹೊಳೆನರಸೀಪುರದವರು ಆರ್‌ಎಸ್‌ಎಸ್‌ ಸಂಘಟನೆಗೆ ಬರುವುದಾದರೆ ಖಂಡಿತ ಸೇರಿಸಿಕೊಳ್ಳುತ್ತೇವೆ ಎಂದು ಆರ್‌ಎಸ್‌ಎಸ್‌ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾಡಿದ್ದ ಟೀಕೆಗೆ ಹೆಸರು ಹೇಳದೆ ತಿರುಗೇಟು ನೀಡಿದರು.

ಆರ್‌ಎಸ್‌ಎಸ್‌ ಬಗ್ಗೆ ಜೆಡಿಎಸ್‌ ಮುಖಂಡರು ಎಷ್ಟೇ ಅಪಪ್ರಚಾರ, ಟೀಕೆ ಮಾಡಿದರೂ ಅದು ಆರ್‌ ಎಸ್‌ಎಸ್‌ಗೆà ಲಾಭ ಎಂದ ಅವರು, ರಾಜಕೀಯಕ್ಕಾಗಿ ಆರ್‌ಎಸ್‌ಎಸ್‌ ಬಗ್ಗೆ ಟೀಕೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ ಅವರು, ದೇಶಾದ್ಯಂತ ಆರ್‌ಎಸ್‌ ಎಸ್‌ 1,63,500 ಶಾಖೆಗಳನ್ನು ಹೊಂದಿದ್ದು, ಹಿಂದೂಗಳು, ಹಿಂದೂಸ್ತಾನದ ಹಿತರಕ್ಷಣೆಗಾಗಿ ಹೋರಾಟ ಮಾಡುತ್ತಿದೆ ಎಂದರು.

ಆರ್‌ಎಸ್‌ಎಸ್‌ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್‌ ಮತ್ತು ಐಪಿಎಸ್‌ ಸೇರಿದಂತೆ ಅಖೀಲ ಭಾರತ ಸೇವೆಗೆ ಆಯ್ಕೆಯಾಗಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು, ಎಲ್ಲ ವರ್ಗದ ಜನರು ಆರ್‌ಎಸ್‌ಎಸ್‌ ಶಾಖೆಗೆ ಭೇಟಿ ನೀಡುತ್ತಾರೆ ಎಂದರೆ ಆ ಸಂಸ್ಥೆಯ ಮಹತ್ವ ಎಷ್ಟೆಂದು ಅರ್ಥ ಮಾಡಿಕೊಳ್ಳಬೇಕು. ಭಾರತದಲ್ಲಿ ಹುಟ್ಟಿದ ಮುಸ್ಲಿಮರುಹಾಗೂ ಕ್ರಿಶ್ಚಿಯನ್‌ ಕೂಡ ಹಿಂದೂಸ್ತಾನಿಗಳು. ಕ್ರೈಸ್ತ ಮತ್ತು ಇಸ್ಲಾಂಗೆ ಮತಾಂತರವಾಗಿದ್ದ ಹಿಂದುಗಳನ್ನು ಪುನಃ ಹಿಂದೂ ಸಮಾಜಕ್ಕೆ ವಾಪಸ್‌ ಕರೆತರುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

Advertisement

ಇದನ್ನೂ ಓದಿ;- ಹೆದ್ದಾರಿಗಳ ದುರಸ್ತಿ: ಅಧಿಕಾರಿಗಳಿಗೆ ಸಚಿವ ಸಿ.ಸಿ.ಪಾಟೀಲ್ ಗಡುವು

ಮುಸ್ಲಿಮರು ವಿವಿಧ ರಾಷ್ಟ್ರಗಳ ಮೇಲೆ ಅನೇಕ ಬಾರಿ ದಾಳಿ ಮಾಡಿದ್ದಾರೆ. ಭಾರತದ ಮೇಲೂ ದಾಳಿ ಮಾಡಿದ್ದ ಸಂದರ್ಭದಲ್ಲಿ ಹಿಂದೂ ದೊರೆ ಪೃಥ್ವಿರಾಜ್‌ ಚೌಹಾಣ್‌ ಅವರು ಮಹಮದ್‌ ಘೋರಿಯನ್ನು ಯುದ್ಧದಲ್ಲಿಸೋಲಿಸಿ ಕ್ಷಮಾಧಾನ ನೀಡಿದರು. ಹಿಂದೂ ರಾಜರ ಕ್ಷಮಾಪಣೆ ದೊಡ್ಡ ಗುಣ. ಅಂದು ಪೃಥ್ವಿರಾಜ್‌ ಚೌಹಾಣ್‌ ಕ್ಷಮೆ ಕೊಡದಿದ್ದರೆ. ಮುಸ್ಲಿ ಮರು ಭಾರತದಲ್ಲಿ ಸಾಮ್ರಾಜ್ಯ ಸ್ಥಾಪನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಮಹಮದ್‌ ಘೋರಿ ದೇಶದ ಮೇಲೆ 16 ಬಾರಿ ದಾಳಿ ನಡೆಸಿ, 17 ನೇ ಬಾರಿ ಪೃಥ್ವಿ ರಾಜ್‌ ಚೌಹಾಣ್‌ ಜೊತೆ ಒಪ್ಪಂದ ಮಾಡಿಕೊಳ್ಳುವ ನಾಟಕವಾಡಿ ಚೌಹಾಣ್‌ ಮಂತ್ರಿಗೆ ಹಣದ ಆಮಿಷ ತೋರಿಸಿ ವಂಚನೆಯಿಂದ ಯುದ್ಧದಲ್ಲಿ ಜಯಗಳಿಸಿದ್ದನು.

ಹಿಂದೂಗಳ ಸಾಮರಸ್ಯದ ಗುಣದಿಂದಾಗಿ 100 ವರ್ಷಗಳ ಕಾಲ ಮುಸ್ಲಿಮರು ಭಾರತ ದೇಶವನ್ನು ಆಳಿ ಹಿಂದೂಗಳನ್ನು ಮತಾಂತರ ಮಾಡಿದರು. 152ರಲ್ಲಿ ಉಜ್ವೆಕಿಸ್ತಾನದಿಂದ ಬಂದ ಬಾಬರ್‌ ಎರಡುವರ್ಷಗಳ ಕಾಲ ದೇಶ ಅಧ್ಯಯನ ಮಾಡಿ, ದೇಶದಲ್ಲಿನ ಹಿಂದೂ ರಾಜರ ದೌರ್ಬಲ್ಯಗಳನ್ನು ತಿಳಿದುಕೊಂಡು 1528ರಲ್ಲಿ ರಾಮಮಂದಿರ ಧ್ವಂಸ ಮಾಡಿದ್ದನು. ಬ್ರಿಟಿಷರು ವ್ಯಾಪಾರಕ್ಕಾಗಿ ಭಾರತಕ್ಕೆ ಬಂದವರೆ ಹೊರತು ಭಾರತದಲ್ಲಿ ನೆಲೆ ಸ್ಥಾಪಿಸಲು ಬಂದವರಲ್ಲ.

ಆದರೆ ಭಾರತೀಯರ ದೌರ್ಬಲ್ಯಗಳನ್ನುಬಳಸಿಕೊಂಡು ಐದು ದಶಕಗಳ ಕಾಲ ದೇಶವನ್ನಾಳಿ ಭಾರತದ ಸಂಪತ್ತನ್ನು ಕೊಳ್ಳೆ ಹೊಡೆದರು. ಈ ಎಲ್ಲ ಕಾರಣಗಳಿಂದ ಹಿಂದೂಗಳ ಸಂಘಟನೆಗೆ ಆರ್‌ಎಸ್‌ ಎಸ್‌ ಹುಟ್ಟಿಕೊಂಡಿತು ಎಂದು ವಿವರ ನೀಡಿದರು.

ಕಾರ್ಯಕರ್ತರ ಪಥಸಂಚಲನ: ನಗರದ ಮಲೆ ನಾಡು ಎಂಜಿನಿಯರಿಂಗ್‌ ಕಾಲೇಜು ಆವರಣದಿಂದ ಹೊರಟ ಆರ್‌ಎಸ್‌ಎಸ್‌ ಕಾರ್ಯಕರ್ತರ ಪಥ ಸಂಚಲನ ಮೆರವಣಿಗೆಯು ಸಾಲಗಾಮೆ ರಸ್ತೆ, ಕಾರ್ಮಲ್‌ಆಶ್ರಮ, ಶಾಂತಿನಗರ, ಹೇಮಾವತಿ ನಗರ, ಜವೇನಹಳ್ಳಿ ಕೆರೆ, ಸಂಗಮೇಶ್ವರ ದೇವಸ್ಥಾನ ಬನ್ನಿಮಂಟಪ, ಸರಸ್ವತಿ ದೇವಸ್ಥಾನ, ನಗರದ ಮುಖ್ಯ ರಸ್ತೆಯಲ್ಲಿ ಸಾಗಿದ ನಂತರ ಪುನಃ ಮಲೆನಾಡು ಎಂಜಿನಿ ಯರ್‌ ಕಾಲೇಜಿನಆವರಣದಲ್ಲಿ ಸಂಪನ್ನಗೊಂಡಿತು.

ಆರ್‌ಎಸ್‌ಎಸ್‌ ಹಾಸನ ನಗರ ಸಂಚಾಲಕ ನಾಗೇಶ್‌, ಜಿಲ್ಲಾ ಮಾಧ್ಯಮ ಪ್ರಮುಖರಾದ ಮೋಹನ್‌,  ಮಲ್‌, ಹುಲ್ಲಳ್ಳಿ ಸುರೇಶ್‌, ವೇಣು ಗೋಪಾಲ್‌, ರಾಜ ಗೋಪಾಲ್‌ ಇದ್ದರು. ಗಣವೇಶ ಧಾರಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಪಥಸಂಚಲನ ನಡೆಸಿದ ಮಾರ್ಗದುದ್ದಕ್ಕೂ ಮಹಿಳೆ ಯರು ರಂಗೋಲಿ ಬಿಡಿಸಿ, ಮೇಲೆ ಹೂ ಮಳೆಗರೆದು ಸಂಭ್ರಮಿಸಿದರು. ಮಂಜಾ ಗ್ರತಾ ಕ್ರಮವಾಗಿ ಹಾಸನ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್ ಹಾಕಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next