ಮಂಗಳೂರು : ಬಿ.ಸಿ.ರೋಡ್‌ನಲ್ಲಿ ಆರ್‌ಎಸ್‌ಎಸ್ ಕಾಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಇಬ್ಬರ ಬಂಧನವನ್ನು ಖಚಿತಪಡಿಸಿದ್ದು , ಉಳಿದ ಆರೋಪಿಗಳನ್ನು ಶೀಘ್ರ ಬಂಧಿಸುವುದಾಗಿ ತಿಳಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕ ಒಬ್ಬಾತ ಶರತ್ ಊರಿನವನೇ ಆಗಿದ್ದು, ಬಂಟ್ವಾಳದ ಸಜೀಪ ಮುನ್ನೂರು ಗ್ರಾಮದ ಇಂದಿರಾ ನಗರ ಹಾಲಾಡಿ ನಿವಾಸಿ ಅಬ್ದುಲ್ ಶಾಪಿ (36) ಎಂಬಾತನಾಗಿದ್ದು, ಇನ್ನೋರ್ವ ಚಾಮರಾಜನಗರ ಪಿಎಫ್ಐ ಸಂಘಟನೆಯ ಅಧ್ಯಕ್ಷ ಖಲೀಲ್‌ವುಲ್ಲಾ (30)ಎಂದು ಹರಿಶೇಖರನ್ ತಿಳಿಸಿದ್ದಾರೆ.
ಹರಿಶೇಖರನ್ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ .
ಜುಲೈ 04ರಂದು ಬಿ.ಸಿ.ರೋಡ್ ನಲ್ಲಿ ರಾತ್ರಿ ಶರತ್ ರನ್ನು ಮಾರಕಾಸ್ರ್ತಗಳಿಂದ ಕಡಿಯಲಾಗಿತ್ತು .ಚಿಕಿತ್ಸೆ ಫಲಕಾರಿಯಾಗದೆ ಜುಲೈ 7ರಂದು ಮಂಗಳೂರಿನ ಖಾಸಗಿ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಆ ಬಳಿಕ ದಕ್ಷಿಣ ಕನ್ನಡದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಹಲವು ಅಹಿತಕರ ಘಟನೆಗಳು ನಡೆದು ತಿಂಗಳ ಕಾಲ ನಿಷೇಧಾಜ್ಞೆ ಹೇರಲಾಗಿತ್ತು.