Advertisement

ಕುಂಬಾರ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂ.

01:26 PM Mar 05, 2018 | |

ವಿಜಯಪುರ: ಜಿಲ್ಲೆಯಲ್ಲಿರುವ ಕುಂಬಾರ ಸಮುದಾಯದ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಸ್ಪಂದನೆ ನೀಡುವ ಭರವಸೆ ನೀಡಿರುವ ಮೇಲ್ಮನೆ ಸದಸ್ಯ ಬಸನಗೌಡ ಪಾಟೀಲ ಯತ್ನಾಳ, ಕುಂಬಾರ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ನೀಡುವುದಾಗಿ ಪ್ರಕಟಿಸಿದರು.

Advertisement

ರವಿವಾರ ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ಪ್ರದೇಶ ಕುಂಬಾರರ ಸಂಘದಿಂದ ಆಯೋಜಿಸಿದ್ದ ಕುಂಬಾರ ಸಮಾಜದ ಬೃಹತ್‌ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿರುವ ಕುಂಬಾರ ಸಮಾಜ ಸಂಘಟಿತರಾಗಬೇಕು. ಇದಕ್ಕಾಗಿ ಪ್ರತಿಯೊಬ್ಬರು ಒಗ್ಗೂಡಿದಲ್ಲಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಸರ್ಕಾರದ ಸೌಲಭ್ಯಗಳ ಕುರಿತು ಮನವರಿಕೆ ಮಾಡಿಕೊಂಡು, ಅವುಗಳ ಸದ್ಬಳಕೆ ಮಾಡಿಕೊಂಡು ಕುಂಬಾರ ಸಮಾಜ ಅಭಿವೃದ್ಧಿ ಸಾಧಿಸಬೇಕು ಎಂದು ಸಲಹೆ ನೀಡಿದರು.  

ಸಾರ್ವಕಾಲಿಕ ಎನಿಸಿರುವ ತ್ರಿಪದಿ ಬರೆದಿರುವ ಸರ್ವಜ್ಞ ಜಗತ್ತು ಕಂಡ ಮಹಾನ್‌ ದಾರ್ಶನಿಕ. ಸರ್ವಜ್ಞರ ಚಿಂತನೆಗಳು ಉತ್ತಮ ಜೀವನ ನಡೆಸಲು ಸದಾ ಮಾರ್ಗದರ್ಶಿ. ಅವರ ಚಿಂತನೆ, ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಸಮಾಜದಲ್ಲಿ ಮೌಲಿಕ ಜೀವನ ನಡೆಸಲು ಸಾಧ್ಯ ಎಂದರು.

ನೀರಾವರಿ ಸಚಿವ ಪಾಟೀಲರನ್ನು ಹೊಗಳಿದರೆ ತಪ್ಪೇನು?
ವಿಜಯಪುರ:
ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರನ್ನು ಹೊಗಳುತ್ತಿರುವುದು ಏಕೆ ಎಂದು ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರೇ ನನ್ನನ್ನು ಪ್ರಶ್ನಿಸಿದ್ದಾರೆ. ಆದರೆ ಜಿಲ್ಲೆಯನ್ನು ಸಮಗ್ರ ನೀರಾವರಿ ಮಾಡಿರುವ ಅವರನ್ನು ಹೊಗಳಿದರೆ ತಪ್ಪೇನು? ಜಿಲ್ಲೆಗೆ ಮಾದರಿ ಕೆಲಸ ಮಾಡಿರುವ ಅವರನ್ನು ನಾನು ಭವಿಷ್ಯದಲ್ಲೂ ಬಣ್ಣಿಸುತ್ತೇನೆ ಎಂದು ಮೇಲ್ಮನೆ ಸದಸ್ಯ ಬಸನಗೌಡ ಪಾಟೀಲ ಹೇಳಿದರು.

Advertisement

ಕುಂಬಾರ ಸಮಾಜದ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಧಿಕಾರದಲ್ಲಿದ್ದಾಗ ಒಳ್ಳೆ ಕೆಲಸ ಮಾಡಿದವರನ್ನು ಬೆಂಬಲಿಸಿ ಮಾತನಾಡಬೇಕು. ಅಭಿವೃದ್ಧಿ ಮಾಡಿದವರನ್ನು ಪಕ್ಷ-ಜಾತಿ ಮರೆತು ಹೊಗಳುವುದು ನನ್ನ ಜಾಯಮಾನ. 

ಜಿಲ್ಲೆಯ ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಕಾರಣವಾಗಿರುವ ಸಚಿವ ಡಾ| ಎಂ.ಬಿ. ಪಾಟೀಲ ಅವರನ್ನು ಹೊಗಳಿದ್ದೇನೆ. ಇದನ್ನೇ ಪ್ರಶ್ನಿಸಿದ ಬಿಜೆಪಿ ನಾಯಕರಿಗೆ ನಾನು ಒಳ್ಳೆಯ ಕೆಲಸ ಮಾಡಿದವರನ್ನು ಹೊಗಳುತ್ತೇನೆ. ಅದನ್ನು ಬಿಟ್ಟು ಬೇರೆ ಏನಾದರೂ ಇದ್ದರೆ ಹೇಳಿ ಎಂದೂ ಹೇಳಿದ್ದೇನೆ ಎಂದರು. 

ನಾನು ಮರಳಿ ಬಿಜೆಪಿ ಸೇರುವ ಪ್ರಯತ್ನ ನಡೆದಿದ್ದು, ಬಿಜೆಪಿ ಸೇರದಿದ್ದರೂ ನಾನು ಬರುವ ವಿಧಾನಸಭೆ ಚುನಾವಣೆಯಲ್ಲಿ
ಪಕ್ಷೇತರನಾಗಿ ಕಣಕ್ಕಿಳಿಯುವುದು ಖಚಿತ ಎಂದು ಸ್ಪಷ್ಟಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next