Advertisement

ಹುಬ್ಬಳ್ಳಿ-ಧಾರವಾಡ ಸಾರಿಗೆಗೆ 80 ಕೋ. ರೂ.

12:30 AM Feb 11, 2019 | |

ನವದೆಹಲಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ಹೆಚ್ಚುವರಿ 80 ಕೋಟಿ ರೂ. ಅನುದಾನಕ್ಕೆ ಅರ್ಹತೆ ಲಭ್ಯವಾಗಿದೆ. 100 ಸ್ಮಾರ್ಟ್‌ ಸಿಟಿಗಳ ಪೈಕಿ 15 ಸ್ಮಾರ್ಟ್‌ ಸಿಟಿಗಳಲ್ಲಿನ ಪ್ರಮುಖ ಯೋಜನೆಗಳನ್ನು ಆಯ್ಕೆ ಮಾಡಿ ಅವುಗಳಿಗೆ ಅನುದಾನ ನೀಡುವ ಸಿಟೀಸ್‌ ಪ್ರಾಜೆಕ್ಟ್ಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಆಯ್ಕೆಯಾಗಿದೆ.

Advertisement

ಹೀಗಾಗಿ 80 ಕೋಟಿ ರೂ. ಮೊತ್ತವನ್ನು ಈ ಅವಳಿ ನಗರ ಪಡೆಯಲಿದೆ ಎಂದು ನಗರಾಭಿವೃದ್ಧಿ ಸಚಿವಾಲಯವು ಕರ್ನಾಟಕ ಸರ್ಕಾರಕ್ಕೆ ಮಾಹಿತಿ ನೀಡಿದೆ. ಈ ಸ್ಪರ್ಧೆಯಲ್ಲಿ ಕರ್ನಾಟಕದ ದಾವಣಗೆರೆ ಹಾಗೂ ಹುಬ್ಬಳ್ಳಿ-ಧಾರವಾಡ ಭಾಗವಹಿಸಿತ್ತು. ಆದರೆ ಸುಸ್ಥಿರ ಸಾರಿಗೆ ವಿಭಾಗದಲ್ಲಿ ಅವಳಿ ನಗರ ಅರ್ಹವಾಗಿದೆ. ಈ ಯೋಜನೆ 130 ಕೋಟಿ ರೂ. ಮೊತ್ತದ್ದಾಗಿದ್ದು, 18 ಕಿ.ಮೀ ಕಾರಿಡಾರ್‌ ನಿರ್ಮಾಣ ಮಾಡಲಾಗುತ್ತದೆ. ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ಸಾರ್ವಜನಿಕ ಆರೋಗ್ಯ, ನೈರ್ಮಲ್ಯ, ಸಾರ್ವಜನಿಕ ಸ್ಥಳಗಳ ಅಭಿವೃದ್ಧಿ, ಜಲಮೂಲ ಸುಧಾರಣೆ ಸೇರಿದಂತೆ ಇತರ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇದಕ್ಕೆ ಫ್ರಾನ್ಸ್‌ ಸರ್ಕಾರದ ಅಂತಾರಾಷ್ಟ್ರೀಯ ಏಜೆನ್ಸಿ ಎಎಫ್ಡಿಯಿಂದಲೂ ಸಾಲ ಒದಗಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next