Advertisement

8 ಲಕ್ಷ ಮೌಲ್ಯದ ಗಾಂಜಾ ಜಪ್ತಿ: ಆರೋಪಿ ಬಂಧನ

04:31 PM Feb 05, 2018 | |

ದೇವದುರ್ಗ: ಸಮೀಪದ ಗಲಗ ಗ್ರಾಮ ವ್ಯಾಪ್ತಿಯ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಆರೋಪಿಯನ್ನು ಬಂಧಿಸಿರುವ ಜಾಲಹಳ್ಳಿ ಪೊಲೀಸರು 8 ಲಕ್ಷ ರೂ. ಮೌಲ್ಯದ 60 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ. ಸಮೀಪದ ಗಲಗ ಗ್ರಾಮ ವ್ಯಾಪ್ತಿಯ ಪಾಮರ್ತಿದೊಡ್ಡಿ ಗ್ರಾಮದ ಚಂದ್ರಕುಮಾರ ಬಂಧಿತ ಆರೋಪಿ. ಸಿಪಿಐ ಟಿ. ಸಂಜೀವಕುಮಾರ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ, ಗಾಂಜಾ ಬೆಳೆ ವಶಪಡಿಸಿಕೊಂಡಿದೆ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ

Advertisement

ಗಾಂಜಾ ಸಾಗಿಸುತ್ತಿದ್ದ ಯುವಕ ಬಂಧನ 
ಸಿರವಾರ: ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ಬಂಧಿತನಿಂದ 2 ಕೆಜಿ ಗಾಂಜಾ ವಶಪಡಿಸಿಕೊಂಡ ಘಟನೆ ರವಿವಾರ ಚಿಂಚರಕಿ ಗ್ರಾಮದ ಹೊರವಲಯದಲ್ಲಿ ಜರುಗಿದೆ. ಮೂಲತಃ ಬೆಂಗಳೂರಿನ ವಿಘ್ನೇಶ ಬಂಧಿತ ಆರೋಪಿ. ಈತ ಹೊಲವೊಂದರಲ್ಲಿ ಬೆಳೆದ ಗಾಂಜಾವನ್ನು ತೆಗೆದುಕೊಂಡು ಹೋಗುವಾಗ ಖಚಿತ ಮಾಹಿತಿ ಮೇರೆಗೆ ಸಿಪಿಐ ಚಂದ್ರಶೇಖರ ನಾಯಕ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next