ಹೊಸದಿಲ್ಲಿ : ಇದೇ ಎಪ್ರಿಲ್ 1ರಿಂದ ಜಾರಿಗೆ ಬಂದಿರುವಂತೆ 5,000 ರೂ.ಗಳ ಮಿನಿಮಮ್ ಬ್ಯಾಲನ್ಸ್ ಇಲ್ಲದ ಉಳಿತಾಯ ಖಾತೆಗಳಿಂದ ದಂಡ ಶುಲ್ಕವನ್ನು ಕಡಿತ ಮಾಡುವ ಕಟ್ಟುನಿಟ್ಟಿನ ಕ್ರಮವನ್ನು ದೇಶದ ಸಾರ್ವಜನಿಕ ರಂಗದ ಅತೀ ದೊಡ್ಡ ಬ್ಯಾಂಕ್ ಎನಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಆರಂಭಿಸಿದೆ.
ಹಾಗೆ ನೋಡಿದರೆ ಎಸ್‌ಬಿಐ ಮಿನಿಮಮ್ ಬ್ಯಾಲನ್ಸ್ ನಿಯಮವನ್ನು ಸರಿಸುಮಾರು ಐದು ವರ್ಷಗಳ ಅಂತರದ ಬಳಿಕ ಜಾರಿಗೆ ತರುತ್ತಿದೆ. ಇದರೊಂದಿಗೆ ಎಪ್ರಿಲ್ 1ರಿಂದಲೇ ಚೆಕ್ ಬುಕ್, ಲಾಕರ್ ಚಾರ್ಜ್ ಎಲ್ಲವೂ ಗ್ರಾಹಕರಿಗೆ ತುಟ್ಟಿಯಾಗಿದೆ.
ಎಸ್‌ಬಿಐ ಜತೆಗೆ ಈಚೆಗೆ ಮಹಿಳಾ ಬ್ಯಾಂಕ್ ಸೇರಿದಂತೆ ವಿಲೀನಗೊಂಡಿರುವ ಎಲ್ಲ ಐದು ಸಹವರ್ತಿ ಬ್ಯಾಂಕುಗಳ ಖಾತೆದಾರರಿಗೆ ಕೂಡ ಈ ಕಟ್ಟುನಿಟ್ಟಿನ ದಂಡ ಶುಲ್ಕ ಕ್ರಮಗಳು ಅನ್ವಯಿಸುತ್ತವೆ.
Related Articles
ತಿಂಗಳೊಂದರಲ್ಲಿ ಮೂರು ಬಾರಿ ಖಾತೆದಾರರು ತಮ್ಮ ಉಳಿತಾಯ ಖಾತೆಗೆ ಜಮೆ ಮಾಡುವ ಹಣಕ್ಕೆ ಶುಲ್ಕ ಇರುವುದಿಲ್ಲ; ಆದರೆ ಅನಂತರದ ಎಲ್ಲ ಜಮೆಗೆ 50 ರೂ. ಶುಲ್ಕವನ್ನು ಹೇರಲಾಗುತ್ತದೆ.
ಚಾಲ್ತಿ ಖಾತೆಗೆ ಸಂಬಂಧಿಸಿದಂತೆ ಹೇರಲಾಗುವ ದಂಡ ಶುಲ್ಕ 20,000 ರೂ. ಇರುತ್ತದೆ !
ಸಣ್ಣ ಮತ್ತು ಮಧ್ಯಮ ಲಾಕರ್‌ಗಳಿಗೆ ಒಂದು ಬಾರಿಯ ಲಾಕರ್ ನೋಂದಾವಣೆ ಶುಲ್ಕ ಈಗ 500 + ಸೇವಾ ತೆರಿಗೆ; ದೊಡ್ಡ ಹಾಗೂ ಇನ್ನೂ ದೊಡ್ಡ ಲಾಕರ್‌ಗಳಿಗೆ ಅನ್ವಯವಾಗುವ ಶುಲ್ಕ 1,000 ರೂ.
ಲಾಕರ್ ಒಡೆಯುವ ಪ್ರಸಂಗ ಬಂದರೆ, ಕೀ ಕಳೆದು ಹೋದರೆ ಅಥವಾ ಲಾಕರ್ ರೆಂಟ್ ಪಾವತಿ ಬಾಕಿ ಉಳಿದರೆ 1,000 ದಂಡ ಶುಲ್ಕ + ಸೇವಾ ತೆರಿಗೆ ಅನ್ವಯವಾಗುತ್ತದೆ. ಲಾಕರ್ ಒಡೆಯಲ್ಪಟ್ಟಲ್ಲಿ, ಬದಲಿ ಕೀ ಪಡೆಯಬೇಕಾದಲ್ಲಿ ಅವಕ್ಕೆ ತಗಲುವ ಖರ್ಚುಗಳನ್ನು ಖಾತೆದಾರರೇ ಭರಿಸಬೇಕಾಗುತ್ತದೆ.
ಲಾಕರ್ ವಿಸಿಟ್ ಚಾರ್ಜ್ (ಎಲ್ಲ ಗಾತ್ರದವುಗಳಿಗೆ ಅನ್ವಯ) : 12 ವಿಸಿಟ್‌ಗಳು ಉಚಿತ; ಅನಂತರದ ಪ್ರತೀ ವಿಸಿಟ್‌ಗೆ 100 ರೂ.+ಸೇವಾ ತೆರಿಗೆ ಅನ್ವಯ.