Advertisement

5 ಲಕ್ಷ ರೂ. ಪರಿಹಾರ ನೀಡಿದ ಸಿಎಂ

06:00 AM Aug 01, 2018 | |

ಬೆಂಗಳೂರು: ಅತಿ ಅಪರೂಪದ ಎಪಿಡರ್‌ ಮುಲ್ಲಾಯಿಸಿಸ್‌ ಬುಲ್ಲೂಸಾ (ಮೈಮೇಲೆ ಗುಳ್ಳೆಗಳೆದ್ದು ಅಡು ಒಡೆದು ನೋವಿನಿಂದ ಬಳಲುವುದು) ಎಂಬ ಜನೆಟಿಕ್‌ ಕಾಯಿಲೆಗೆ ತುತ್ತಾದ ಇಬ್ಬರು ಎಳೆಯ ಮಕ್ಕಳು ದಯಾಮರಣಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡು ಬಂದಿದ್ದರು. ಆ ಮಕ್ಕಳ ಪೋಷಕರಿಗೆ ತಮ್ಮ ಪರಿಹಾರ ನಿಧಿಯಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ 5 ಲಕ್ಷ ರೂ. ಪರಿಹಾರ ನೀಡಿದ್ದಾರೆ.

Advertisement

ಅಲ್ಲದೆ, ಆ ಮಕ್ಕಳ ತಂದೆಗೆ ಸವದತ್ತಿ ಆಸ್ಪತ್ರೆಯಲ್ಲಿ ತಾತ್ಕಾಲಿಕ ಕೆಲಸ ನೀಡಬೇಕು ಮತ್ತು ಮಕ್ಕಳಿಗೆ ಅದೇ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸಬೇಕು ಎಂದು ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಆಸ್ಪತ್ರೆಯ ಅಧೀಕ್ಷಕರಿಗೆ ಸೂಚನೆ ನೀಡಿದ್ದಾರೆ. ಸವದತ್ತಿಯ ದೀಪಾ ಮತ್ತು ಯಂಕಪ್ಪ
ಪೂಜಾರಿ ಅವರ ಇಬ್ಬರು ಎಳೆಯ ಮಕ್ಕಳು ಎಪಿಡರ್‌ ಮುಲ್ಲಾಯಿಸಿಸ್‌ ಬುಲ್ಲೂಸಾ ಎಂಬ ಜನೆಟಿಕ್‌ ಕಾಯಿಲೆಯಿಂದ ಬಳಲುತ್ತಿದ್ದಾರೆ. ದೇಹವಿಡೀ ಗುಳ್ಳೆಗಳು ಎದ್ದು ಅದು ಒಡೆದು ಮಕ್ಕಳು ಪ್ರತಿ ಕ್ಷಣವೂ ನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗುತ್ತಿಲ್ಲ. ಮಕ್ಕಳ ಕಷ್ಟ ನೋಡಲು ಆಗುವುದಿಲ್ಲ. ಆದ್ದರಿಂದ ಅವರಿಗೆ ದಯಾಮರಣ ಕರುಣಿಸಿ ಎಂದು ಕೋರಿ ದಂಪತಿ ಸೋಮವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next