Advertisement

43 ಕೋಟಿ ರೂ. ಜಿಎಸ್‌ಟಿ ವಂಚಿಸಿದ ಮಹಿಳೆ ಬಂಧನ

06:15 AM Dec 18, 2018 | Team Udayavani |

ಚೆನ್ನೈ: ವಹಿವಾಟನ್ನೇ ನಡೆಸದೆ ನಕಲಿ ಇನ್ವಾಯ್ಸ ಗಳನ್ನು ಸೃಷ್ಟಿಸಿ 43 ಕೋಟಿ ರೂ. ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಪಡೆದ ಮಹಿಳೆಯನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ. ಈಕೆ ಮೂರು ಕಂಪೆನಿಗಳಿಗೆ ನಿರ್ದೇಶಕಿಯಾಗಿದ್ದು, ಸುಳಿವಿನ ಮೇರೆಗೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಕಂಪೆನಿ ಗಳ ಕಚೇರಿಯಲ್ಲಿ ನಕಲಿ ಇನ್ವಾಯ್ಸಗಳು ಲಭ್ಯವಾಗಿವೆ. ನಕಲಿ ಇನ್ವಾಯ್ಸಗಳನ್ನು ಸೃಷ್ಟಿಸಿದ್ದನ್ನು ಮಹಿಳೆ ಒಪ್ಪಿಕೊಂಡಿದ್ದಾಳೆ. ಜಿಎಸ್‌ಟಿ ವಂಚನೆ ಪ್ರಕರಣದಲ್ಲಿ ಇದು ವಿಶಿಷ್ಟವಾಗಿದ್ದು, ಸಾಮಾನ್ಯವಾಗಿ ವಹಿವಾಟು ನಡೆಸಿ ಇನ್ವಾಯ್ಸ ದಾಖಲಿಸದ ಪ್ರಕರಣಗಳೇ ಹೆಚ್ಚಾಗಿರುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ತೆರಿಗೆ ಇಲಾಖೆ ತನಿಖೆ ನಡೆಸುತ್ತಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next