Advertisement

33 ಲಕ್ಷ  ರೂ. ವೆಚ್ಚದ ಇಂಟರ್‌ಲಾಕ್‌ ರಸ್ತೆ ಕಳಪೆ!

05:20 AM Jul 20, 2017 | Team Udayavani |

ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್‌ನ ಸರಕಾರಿ ಸಿ.ಎಚ್‌.ಸಿ. ಆಸ್ಪತ್ರೆ -ಕುಂಟಂಗರಡ್ಕ ರಸ್ತೆಗೆ ರೂ. 33 ಲಕ್ಷ ಹಾರ್ಬರ್‌ ನಿಧಿಯಲ್ಲಿ ಇಂಟರ್‌ಲಾಕ್‌ ಅಳವಡಿಸಲಾಗಿತ್ತು. ಆದರೆ ತಿಂಗಳು ಕಳೆಯುವಷ್ಟರಲ್ಲಿ ರಸ್ತೆಯ ಇಂಟರ್‌ಲಾಕ್‌ಗಳು ಎದ್ದು ರಸ್ತೆ ಹದಗೆಟ್ಟಿದೆ.

Advertisement

ಮರು ಅಳವಡಿಕೆಗೆ ಗುತ್ತಿಗೆದಾರರಿಂದ ಸಿದ್ಧತೆ 
ಕಳಪೆ ಕಾಮಗಾರಿಯಿಂದ ಈ ರೀತಿಯಾಗಿರುವುದಾಗಿ ಕುಂಬಳೆ ಪಂಚಾಯತ್‌ ಡಿ.ವೈ.ಎಫ್‌.ಐ. ಸಮಿತಿ ನಾಯ ಕರು ವಿಜಿಲೆನ್ಸ್‌ ಅಧಿಕಾರಿಗಳಗೆ ದೂರು ಸಲ್ಲಿಸಿದರು. ದೂರಿಗೆ ಬೆದರಿದ ಗುತ್ತಿಗೆದಾರರು ಇದೀಗ ಜಲ್ಲಿಹುಡಿ ತಂದು ಎದ್ದು ಹೋಗಿದ್ದ ಇಂಟರ್‌ಲಾಕ್‌ಗಳನ್ನು ಮರು ಅಳವಡಿಸಲು ಸಿದ್ಧರಾಗಿದ್ದಾರೆ.

ಭಾರೀ ಅವ್ಯವಹಾರ ಶಂಕೆ
ಲಕ್ಷಗಟ್ಟಲೆ ನಿಧಿ ಬಳಸಿದ ಕಾಮಗಾರಿಯನ್ನು ಕಳಪೆಯಾಗದಂತೆ ಸಂಬಂಧಪಟ್ಟವರು ಗಮನ ಹರಿಸದಿರುವಾಗ ಇದರ ಹಿಂದೆ ಭಾರೀ ಲಂಚದ ಅವ್ಯವಹಾರ ಇರುವುದಾಗಿ ರಸ್ತೆ ಫಲಾನುಭವಿಗಳು ಆರೋಪಿಸುತ್ತಿದ್ದಾರೆ. ಇದರಲ್ಲಿ ಯಾವುದೇ ಪಕ್ಷ, ಜಾತಿ, ಮತ ಭೇದವೆನ್ನದೆ ಗುತ್ತಿಗೆದಾರರೊಂದಿಗೆ ಕೈ ಜೋಡಿಸಿ ತಮ್ಮ ಜೇಬು ತುಂಬಿಸುವ ಕಾರ್ಯದಲ್ಲಿ ಒಂದಾಗುತ್ತಾರೆಂಬುದಾಗಿ ಕೆಟ್ಟು ಹೋಗಿದ್ದ ರಸ್ತೆಯಲ್ಲಿ ಕಷ್ಟಪಟ್ಟು ಸಂಚರಿಸಿ ಕಹಿ ಅನುಭವ ಪಡೆದವರದು. ಆದುದರಿಂದ ಕಳಪೆ ಕಾಮಗಾರಿ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂಬುದಾಗಿ ರಸ್ತೆ ಬಳಕೆದಾರರು ಉನ್ನತ ಅಧಿಕಾರಿಯವರನ್ನು ಒತ್ತಾಯಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next