Advertisement

ಏರ್‌ಇಂಡಿಯಾಗೆ 325 ಕೋಟಿ ರೂ. ಬಾಕಿ

09:30 AM Mar 12, 2018 | Harsha Rao |

ಹೊಸದಿಲ್ಲಿ: ನಷ್ಟದಲ್ಲಿರುವ ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾಗೆ ವಿವಿಐಪಿಗಳ ಪ್ರಯಾಣದ 325 ಕೋಟಿ ರೂ. ವೆಚ್ಚವನ್ನು ಸರಕಾರ ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿರುವುದು ಆರ್‌ಟಿಐ ಅರ್ಜಿಗೆ ನೀಡಿದ  ಪ್ರತಿಕ್ರಿಯೆಯಲ್ಲಿ ತಿಳಿದುಬಂದಿದೆ. ಖಾಸಗಿಗೆ ವಹಿಸಲು ಕೇಂದ್ರ ಸರಕಾರ ನಿರ್ಧರಿಸಿದ ಬೆನ್ನಲ್ಲೇ ಈ ಮಾಹಿತಿ ಬಹಿರಂಗ ಗೊಂಡಿದೆ. ಜನವರಿ 31ರವರೆಗೆ ವಿವಿಧ ವಿವಿಐಪಿಗಳು ವಿಮಾನದಲ್ಲಿ ಪ್ರಯಾಣಿಸಿದ್ದಕ್ಕೆ ಸರಕಾರ ಪಾವತಿ ಮಾಡಬೇಕಿರುವ ಮೊತ್ತ ಇದಾಗಿದೆ.

Advertisement

ಮೂರು ಸಂಸ್ಥೆಗಳಿಗೆ ಆಸಕ್ತಿ: ಏರ್‌ ಇಂಡಿಯಾದಲ್ಲಿ ಹೂಡಿಕೆ ಮಾಡಲು ಜೆಟ್‌ ಏರ್‌ವೆàಸ್‌, ಏರ್‌ ಫ್ರಾನ್ಸ್‌- ಕೆಎಲ್‌ಎಂ ಹಾಗೂ ಡೆಲ್ಟಾ ಏರ್‌ಲೈನ್ಸ್‌ ಜಂಟಿಯಾಗಿ ಆಸಕ್ತಿ ಹೊಂದಿವೆ. ಖಾಸಗಿ ಹೂಡಿಕೆದಾರರಿಂದ ಪ್ರಸ್ತಾವನೆಯನ್ನು ಶೀಘ್ರದಲ್ಲಿ ಸರಕಾರ ಕರೆಯಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಜೆಟ್‌ ಏರ್‌ವೆàಸ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next