Advertisement
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಿಐಡಿ ಪೊಲೀಸ್ ಮಾಹಾನಿರ್ದೇಶಕ ಕಿಶೋರ್ ಚಂದ್ರ ಅವರು, ಅಗ್ರಿಗೋಲ್ಡ್, ಮೈತ್ರೀ ಪ್ಲಾಂಟೇಷನ್, ಡ್ರೀಮ್ಸ್ ಇನ್‌ಫ್ರಾ, ಟಿಜಿಎಸ್, ಗೃಹ ಕಲ್ಯಾಣ ಸೇರಿದಂತೆ ಹತ್ತು ವಂಚಕ ಕಂಪೆನಿಗಳು ರಾಜ್ಯದ 17 ಲಕ್ಷ ಮಂದಿಗೆ ವಂಚಿಸಿವೆ. ಜನರಿಗೆ ಮೋಸ ಮಾಡಿದ ಕಂಪೆನಿಗಳ ವಿರುದ್ಧ 2013ರಿಂದ 2016ರವರೆಗೆ ಮೂರು ವರ್ಷಗಳ ಅವಧಿಯಲ್ಲಿ 422 ವಂಚನೆ ಪ್ರಕರಣ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದರು.
Related Articles
Advertisement
ರೈತರು ಹಾಗೂ ಕೂಲಿ ಕಾರ್ಮಿಕರು, ವ್ಯಾಪಾರಸ್ಥರು ಗೃಹಿಣಿಯರು ಹಾಗೂ ವಿದ್ಯಾರ್ಥಿಗಳು ಸಹ ಹಣ ಹೂಡಿಕೆ ಮಾಡಿದ್ದಾರೆ. ಆರಂಭದಲ್ಲಿ ಚೆನ್ನಾಗಿ ನಡೆಸುತ್ತಿದ್ದ ಸಂಸ್ಥೆಗಳು, ನಂತರ ಹೆಚ್ಚಿನ ಬೇಡಿಕೆ ಬಂದಾಗ ಹೂಡಿಕೆ ಹಣದೊಂದಿಗೆ ಪರಾರಿಯಾಗುತ್ತಿದ್ದರು. ಹೀಗೆ ವಂಚಿಸಿರುವ ಹಣವನ್ನು ತಮ್ಮ ಹೆಸರಿನಲ್ಲಿ ಮತ್ತು ಬೇನಾಮಿ ಹೆಸರಿನಲ್ಲಿ ಜಮೀನುಗಳನ್ನು, ಐಶಾರಾಮಿ ಮನೆಗಳು, ದುಬಾರಿ ವಾಹನಗಳ ಖರೀದಿ, ಚಲನಚಿತ್ರಗಳ ನಿರ್ಮಾಣಗಳಲ್ಲಿ ತೊಡಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದರು.
ತಕ್ಷಣ ದೂರು ಕೊಡಿ ಡ್ರಿಮ್ಸ್ ಕಂಪೆನಿಯ 6500 ಹೂಡಿಕೆದಾರರ ಪೈಕಿ 2382 ಮಂದಿ, ಗೃಹ ಕಲ್ಯಾಣ ಕಂಪೆನಿಯ 2,200 ಹೂಡಿಕೆದಾರರ ಪೈಕಿ 814 ಮಂದಿ, ಟಿಜಿಎಸ್ ಕಂಪೆನಿಯ 5315 ಹೂಡಿಕೆದಾರರ ಪೈಕಿ 2750 ಮಂದಿ ಮಾತ್ರ ದೂರು ನೀಡಿದ್ದಾರೆ. ಇನ್ನುಳಿದವರು ಹೂಡಿಕೆದಾರರ ಈ ಕಂಪೆನಿಗಳು ಮಾತ್ರವಲ್ಲದೇ ಇತರೆ ಕಂಪನಿಗಳ ಹೂಡಿಕೆದಾರರು ಸಿಐಡಿ ಕಚೇರಿಗೆ ಆಗಮಿಸಿ ದೂರುಗಳನ್ನು ಸಲ್ಲಿಸಬಹುದು ಅಥವಾ ಸಿಐಡಿ ಕಚೇರಿ 080-22942444 ಅಥವಾ alertcid@ksp.gov.in ಎಂಬ ಮೇಲ್‌ಗೆ ದೂರುಗಳನ್ನು ದಾಖಲಿಸಬಹುದು. ಹೂಡಿಕೆದಾರರ ಗಮನಕ್ಕೆ
ಹೂಡಿಕೆದಾರರು ಹಣವನ್ನು ಹೂಡಿಕೆ ಮಾಡುವಾಗ ಈ ರೀತಿಯ ಕಂಪನಿಗಳು ಅಧಿಕೃತವೇ ಅಥವಾ ಅನಧಿಕೃತವೇ ಎಂಬ ವಿಷಯವನ್ನು ಖಚಿತ ಪಡಿಸಿಕೊಳ್ಳಬೇಕು. ಜತೆಗೆ ಸಂಸ್ಥೆಗಳ ಸಕ್ಷಮ ಪ್ರಾಧಿಕಾರದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸೆಕ್ಯುರಿಟಿ ಎಕ್ಸ್‌ಚೆಂಜ್ ಬೋರ್ಡ್ ಆಫ್ ಇಂಡಿಯಾ, ರಿಜಿಸ್ಟರ್ ಆಫ್ ಕಂಪನಿಸ್ ಮತ್ತು ರಿಜಿಸ್ಟರ್ ಆಫ್ ಕೋ-ಆಪರೇಟಿವ್ ಸೊಸೈಟಿಯಿಂದ ಅನುಮತಿ ಪಡೆದುಕೊಳ್ಳಲಾಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಈ ವಿಷಯಗಳ ಬಗ್ಗೆ ಯಾವುದೇ ರೀತಿಯ ಸಂಶಯ ಬಂದಲ್ಲಿ ರಾಜ್ಯ ಸರ್ಕಾರ ಈಗಾಗಲೇ ಆರಂಭಿಸಿರುವ ಡಿಡಿಡಿ.slcc.kಚr.nಜಿc.ಜಿn ಮೂಲಕ ದೂರು ನೀಡಬಹುದು ಎಂದು ಅವರು ತಿಳಿಸಿದರು. ವಂಚಿಸಿದ ಕಂಪೆನಿಗಳ ಗುರುತಿಸಿದ ಆಸ್ತಿ ಮೊತ್ತ(ಕೋಟಿ ರೂಗಳಲ್ಲಿ)
-ಅಗ್ರಿಗೋಲ್ಡ್ ಕಂಪನಿ- 250
-ಹಿಂದೂಸ್ಥಾನ್ ಇನ್‌ಪ್ರಕಾನ್ ಕಂಪನಿ-34
-ಮೈತ್ರೀ ಪ್ಲಾಂಟೇಷನ್ ಮತ್ತು ಹಾರ್ಟಿಕಲ್ಚರ್-43
-ಗ್ರೀನ್ ಬಡ್ಸ್ ಆಗ್ರೋ ಫಾರಂ ಕಂಪನಿ-30
-ಹರ್ಷ ಏಂಟರ್‌ಟೈನ್‌ಮೆಂಟ್ ಸಂಸ್ಥೆ-40
-ಡ್ರೀಮ್ಸ್ ಇನ್‌ಪ್ರಾ ಕಂಪನಿ- 100
-ಟಿಜಿಎಸ್ ಕಂಪನಿ- 65
-ಗೃಹ ಕಲ್ಯಾಣ ಕಂಪನಿ-21
-ಸೆವನ್ ಹಿಲ್ಸ್ ಕಂಪನಿ- 11
-ವೃಕ್ಷ ಬಿಜಿನಸ್ ಸಲ್ಯೂಶನ್-0.10
-ಒಟ್ಟು 594.10 ಯಾರ್ಯಾರ ವಂಚನೆ ಎಷ್ಟು?:
-ಅಗ್ರಿಗೋಲ್ಡ್ ಸಂಸ್ಥೆಯ ಅವ್ವಾ ವೆಂಕಟರಾಮರಾವ್ – 1,640
-ಹಿಂದೂಸ್ಥಾನ್ ಇನ್‌ಫ್ರಾಕಾನ್‌ನ ಲಕ್ಷ್ಮಿನಾರಾಯಣ -389
-ಮೈತ್ರಿ ಪ್ಲಾಂಟೇಷನ್ ಮತ್ತು ಹಾರ್ಟಿಕಲ್ಚರ್‌ನ ಕೊಂಡರೆಡ್ಡಿ – 9.82
-ಗ್ರೀನ್ ಬಡ್ಸ್ ಆಗ್ರೋ ಫಾರಂ ಕಂಪನಿಯ ಬಿ.ಎಲ್. ರವೀಂದ್ರನಾಥ – 53.88
-ಹರ್ಷ ಏಂಟರ್‌ಟೈನ್‌ಮೆಂಟ್ ಸಂಸ್ಥೆಯ ಸುಭೋದ್ – 136
-ಡ್ರೀಮ್ಸ್ ಇನ್‌ಫ್ರಾ ಕಂಪನಿಯ ಸಚಿನ್ ನಾಯಕ್, ದೀಶಾ ಚೌಧರಿ – 573
-ಟಿಜಿಎಸ್ ಕಂಪನಿಯ ಸಚಿನ್ ನಾಯಕ್ ಮತ್ತು ಮನದೀಪ್‌ಕೌರ್ – 260
-ಗೃಹ ಕಲ್ಯಾಣ ಕಂಪನಿಯ ಸಚಿನ್ ನಾಯಕ್ ಮತ್ತು ಮಜುಂದಾರ್ ಶತಪರ್ಣಿ – 277
-ಸೆವನ್ ಹಿಲ್ಸ್ ಕಂಪನಿಯ ಜಿ.ನಾರಾಯಣಪ್ಪ – 81
-ವೃಕ್ಷ ಬಿಜಿನಸ್ ಸಲ್ಯೂಶನ್‌ನ ಜೀವರಾಜ್ ಪುರಾಣಿಕ್ – 31 (ಕೋಟಿ ರೂ.ಗಳಲ್ಲಿ) ಖಾಸನೀಸ್ ಸೋದರರು ವಂಚಿಸಿದ್ದು 136 ಕೋಟಿ; ವಂಚಕರ ಬಳಿ ಇರುವ ಆಸ್ತಿ ಮಾತ್ರ 36.27
ಬೆಂಗಳೂರು: ಅಧಿಕ ಬಡ್ಡಿಯ ಆಮಿಷವೊಡ್ಡಿ ಸುಮಾರು 7,400 ಮಂದಿಗೆ 136 ಕೋಟಿ ರೂ. ವಂಚಿಸಿರುವ ಹರ್ಷ ಎಂಟರ್‌ಟೈನ್‌ಮೆಂಟ ಎಂಬ ಹಣಕಾಸು ಸಂಸ್ಥೆಯ ಖಾಸನೀಸ್ ಸಹೋದರ 36.27 ಕೋಟಿ ಮೌಲ್ಯದ ಆಸ್ತಿಯನ್ನು ಸಿಐಡಿ ಆರ್ಥಿಕ ಅಫರಾಧ ವಿಭಾಗದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಧಾರವಾಡದ ಕಲಘಟಗಿಯ ಸತ್ಯಬೋದ ಅಲಿಯಾಸ್ ಹರ್ಷ ಖಾಸನೀಸ್ ಮತ್ತು ಶ್ರೀಕಾಂತ್ ಎಸ್ ಖಾಸನೀಸ್, ಸಂಜೀವ್ ಖಾಸನೀಸ್ ಸಹೋದರರು ಸಾರ್ವಜನಿಕರಿಂದ ಹೆಚ್ಚಿನ ಬಡ್ಡಿ ದರದಲ್ಲಿ ಸಂಗ್ರಹಿಸಿದ ಹಣವನ್ನು ಚಿನ್ನ, ಬೆಳ್ಳಿ ಆಭರಣಗಳು, ವಾಹನ ಖರೀದಿ, ಷೇರು ಮಾರುಕಟ್ಟೆ, ಚಲನಚಿತ್ರ ನಿರ್ಮಾಣಗಳಲ್ಲಿ ತೊಡಗಿಸಿರುವುದು ತನಿಖೆ ವೇಳೆ ಪತ್ತೆಯಾಗಿದೆ ಎಂದು ಸಿಐಡಿ ಹೆಚ್ಚುವರಿ ಪೊಲೀಸ್ ಮಾಹಾನಿರ್ದೇಶಕ ಪ್ರತಾಪ್ ರೆಡ್ಡಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆರೋಪಿಗಳು ಕಳೆದ 2009ರಲ್ಲಿ ಹಣಕಾಸು ಸಂಸ್ಥೆ ಆರಂಭಿಸಿ ಮಾಸಿಕ ಶೇ.6ರಿಂದ 7ರವರೆಗೆ 2016ರವರೆಗೆ ಸಾರ್ವಜನಿಕರಿಗೆ ಬಡ್ಡಿ ನೀಡಿದ್ದರು. ಇದರಿಂದ ಉತ್ತೇಜಿತರಾದ 7,400 ಮಂದಿ ಮಂದಿ ಸುಮಾರು 136 ಕೋಟಿ ರೂ.ಗೂ ಹೆಚ್ಚು ಹಣ ಹೂಡಿಕೆ ಮಾಡಿದ್ದರು. ಅದನ್ನು ತೆಗೆದುಕೊಂಡು ಮೂವರು ಸಹೋದರರು ಕುಟುಂಬ ಸಮೇತ ನಾಪತ್ತೆಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ್ವಯ ಸಿಐಡಿ ಎಸ್ಪಿ ಸಿದ್ದರಾಮಯ್ಯ ನೇತೃತ್ವದ ತಂಡ ಹರ್ಷ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಮಚಂದ್ರ, ವಾದಿರಾಜ, ಮಹೇಶ, ಶಂಭುಲಿಂಗ ಎಂಬವರನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದರು. ಇವರ ಹೇಳಿಕೆಯನ್ನಾಧರಿಸಿ ಮೇ 28ರಂದು ಉತ್ತರ ಪ್ರದೇಶದ ಮಥುರಾದಲ್ಲಿ ಮೂವರು ಸಹೋದರರನ್ನು ಬಂಧಿಸಲಾಯಿತು ಎಂದು ಅವರು ತಿಳಿಸಿದರು. ಆರೋಪಿಗಳ ಆಸ್ತಿ ಮೊತ್ತ: ಆರೋಪಿಗಳು 9. 42 ಕೋಟಿ ರೂ.ಹಣವನ್ನು 8 ಚಲನಚಿತ್ರಗಳ ನಿರ್ಮಾಣ, ಷೇರು ಮಾರುಕಟ್ಟೆಯಲ್ಲಿ 20.63 ಕೋಟಿ ರೂ, ಮನೆ ಜಮೀನು ನಿವೇಶನ ಖರೀದಿಗೆ 6 ಕೋಟಿ, ವಾಹನ ಚಿನ್ನಾಭರಣಕ್ಕೆ 22 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಹಾಗೆಯೇ ಇದುವರೆಗೂ ಖಾಸನೀಸ್ ಸಹೋದರರ 36.27 ಕೋಟಿ ಮೊತ್ತದ ಆಸ್ತಿಯನ್ನು ಪತ್ತೆ ಹಚ್ಚಲಾಗಿದೆ ಎಂದು ಪ್ರತಾಪ್ ರೆಡ್ಡಿ ತಿಳಿಸಿದರು.