ನವದೆಹಲಿ: ನಟ ಶಾರುಖ್ ಖಾನ್ ಮತ್ತು ನಟಿ ದೀಪಾ ಪಡುಕೋಣೆ ನಟನೆಯ “ಪಠಾಣ್’ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾದ ಮೂರು ದಿನಗಳಲ್ಲೇ ಬಾಕ್ಸ್ ಆಫೀಸ್ ಕಲೆಕ್ಷನ್ 313 ಕೋಟಿ ರೂ. ಆಗಿದೆ. ಜತೆಗೆ ಎಲ್ಲಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.
“ಬೇಷರಮ್’ ಹಾಡು ಮತ್ತು ಅದಕ್ಕೆ ಬಳಸಿರುವ ಕಾಸ್ಟೂಮ್ ಕಾರಣದಿಂದ ಚಿತ್ರ ವಿವಾದಕ್ಕೆ ಕಾರಣವಾಯಿತು. ಅಲ್ಲದೇ ಚಿತ್ರ ಪದರ್ಶನ ವಿರೋಧಿಸಿ ದೇಶದ ಹಲವೆಡೆ ಪ್ರತಿಭಟನೆ ನಡೆಯಿತು. ವಿರೋಧದ ನಡುವೆಯೂ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಬರುತ್ತಿದೆ.
ಚಿತ್ರ ನಿರ್ಮಿಸಿರುವ ಯಶ್ ರಾಜ್ ಫಿಲಂಸ್ ಪ್ರಕಾರ, ಚಿತ್ರ ಬಿಡುಗಡೆಯಾದ ಮೂರನೇ ದಿನದಂದು, ಹಿಂದಿ ಅವತರಿಣಿಕೆಯಲ್ಲಿ 38 ಕೋಟಿ ರೂ., ಇತರೆ ಭಾಷೆಯ ಡಬ್ಬಿಂಗ್ ಅವತರಣಿಕೆಯಲ್ಲಿ 1.25 ಕೋಟಿ ರೂ. ಗಳಿಸಿದೆ ಎಂದು ತಿಳಿಸಿದೆ.