Advertisement

ಚೀನದ ವಿರುದ್ಧ ರಾಸಾಯನಿಕ ಅಸ್ತ್ರ; ರಾಸಾಯನಿಕ ಉತ್ಪನ್ನಗಳ ಆಮದಿಗೆ ಮೂಗುದಾರ

12:25 AM Sep 19, 2020 | mahesh |

ಹೊಸದಿಲ್ಲಿ: ಚೀನದ ವಿರುದ್ಧ ಕೇಂದ್ರವು “ರಾಸಾಯನಿಕ ಅಸ್ತ್ರ’ ಪ್ರಯೋಗಿಸಿ, ಮತ್ತೂಂದು ಆರ್ಥಿಕ ಆಘಾತ ನೀಡಲು ಮುಂದಾಗಿದೆ. ಅಲ್ಲಿಂದ ಆಮದಾಗುವ ರಾಸಾಯನಿಕ ಉತ್ಪನ್ನಗಳ ಪ್ರಮಾಣ ತಗ್ಗಿಸಲು ಮೋದಿ ಸರಕಾರ ಯೋಜನೆ ರೂಪಿಸಿದೆ.

Advertisement

ಇದರಿಂದ ಚೀನಕ್ಕೆ ವಾರ್ಷಿಕ ಸುಮಾರು 25 ಸಾವಿರ ಕೋ. ರೂ. ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯು ಇತ್ತೀಚೆಗೆ ನಡೆಸಿದ್ದ ಸರಣಿ ಸಭೆಗಳಲ್ಲಿ ಚೀನದಿಂದ ಆಮದಾಗುವ 75 ನಿರ್ಣಾಯಕ ರಾಸಾಯನಿಕಗಳನ್ನು ಪಟ್ಟಿ ಮಾಡಲಾಗಿದೆ. ಭಾರತ ವಾರ್ಷಿಕ ಸುಮಾರು 1.5 ಲಕ್ಷ ಕೋ. ರೂ. ಮೌಲ್ಯದ ರಾಸಾ ಯನಿಕಗಳನ್ನು ವಿದೇಶಗಳಿಂದ ಆಮದು ಮಾಡಿ ಕೊಳ್ಳುತ್ತಿದೆ. ಇದರಲ್ಲಿ ಶೇ. 80ರಷ್ಟು ಪಾಲನ್ನು ಚೀನವೇ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಯೋಜನೆ ಏನು?
ಚೀನದಿಂದ ಆಮದಾಗುವ ರಾಸಾಯನಿಕಗಳ ಮೇಲೆ ಕೇಂದ್ರವು ಸುಂಕದ ಬರೆ ಎಳೆಯುವ ಸಾಧ್ಯತೆ ಇದೆ. ಅಲ್ಲದೆ ಸ್ಥಳೀಯ ವಾಗಿ ರಾಸಾಯನಿಕಗಳನ್ನು ಉತ್ಪಾ ದಿಸುವ ಸಂಸ್ಥೆಗಳಿಗೆ ಉತ್ಪನ್ನಗಳ ಮಾರುಕಟ್ಟೆ ಬೆಲೆ ಮೇಲೆ ಶೇ. 10ರಷ್ಟು ಪ್ರೋತ್ಸಾಹಧನ ನೀಡಲು ಚಿಂತಿಸಿದೆ. ಈ ಯೋಜನೆಗೆ ಮುಂದಿನ 5 ವರ್ಷಗಳಲ್ಲಿ ಸರಕಾರ 25 ಸಾವಿರ ಕೋ. ರೂ. ವಿನಿಯೋಗಿಸಲಿದೆ.

ಎಲ್ಲೆಲ್ಲಿ ಬಳಕೆ?
ಚೀನೀ ರಾಸಾಯನಿಕಗಳನ್ನು ಫಾರ್ಮಾಸುÂಟಿಕಲ್‌ ಘಟಕಗಳಲ್ಲಿ, ಕೀಟನಾಶಕಗಳ ತಯಾ  ರಿಗೆ ಮತ್ತು ಕೈಗಾರಿಕೆ ಗಳಲ್ಲಿ ಬಳಸಲಾಗುತ್ತಿದೆ. ಇವುಗಳಿಗೆ ಪರ್ಯಾಯವಾಗಿ ದೇಸೀ ರಾಸಾ ಯನಿಕಗಳ ಉತ್ಪಾದನೆಗೆ ಸಿದ್ಧತೆ ನಡೆ ಸಿ ದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉತ್ಪಾದನೆ ಸಂಬಂಧಿ ಪ್ರೋತ್ಸಾಹ
ಧನ (ಪಿಎಲ್‌ಐ) ಯೋಜನೆ ರೂಪಿಸಲು ರಾಸಾಯನಿಕ ಇಲಾಖೆ ಈಗಾಗಲೇ ಸಮಿತಿ ರಚಿಸಿದೆ. ಈ ಯೋಜನೆಗೆ ಸಂಸತ್ತಿನಲ್ಲಿ ಶೀಘ್ರವೇ ಅನುಮೋದನೆ ಸಿಗುವ ಸಾಧ್ಯತೆ ಇದೆ. ಇದಲ್ಲದೆ ಚೀಲದಿಂದ ಆಮ ದಾಗುವ ಎಲ್‌ಇಡಿ ಉತ್ಪನ್ನಗಳ ಮೇಲೂ ಹದ್ದುಗಣ್ಣು ಇರಿಸಲು ಕೇಂದ್ರ ಸರಕಾರ ಚಿಂತಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next