ಅಮೃತಸರ: ಇಬ್ಬರು ಶಸ್ತ್ರಾಸ್ತ್ರಧಾರಿಗಳು ಅಮೃತಸರದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ ಬರೋಬ್ಬರಿ 22 ಲಕ್ಷ ಹಣ ದರೋಡೆ ಮಾಡಿದ ಘಟನೆ ಗುರುವಾರ ನಡೆದಿದೆ.
ಅಮೃತಸರದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಇಬ್ಬರು ಶಸ್ತ್ರಾಸ್ತ್ರಧಾರಿಗಳು ಒಳ ಪ್ರವೇಶಿಸಿ ಬ್ಯಾಂಕ್ ಸಿಬ್ಬಂದಿಗಳಿಗೆ ಗನ್ ತೋರಿಸಿ ನಗದು ಕೌಂಟರ್ ನಲ್ಲಿದ್ದ ಸುಮಾರು 22 ಲಕ್ಷ ಹಣವನ್ನು ದೋಚಿ ಪರಾರಿಯಾಗಿದ್ದಾರೆ, ಘಟನೆಗೆ ಸಂಬಂಧಿಸಿ ಬ್ಯಾಂಕ್ ಮ್ಯಾನೇಜರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಬ್ಯಾಂಕ್ ಸಿಬ್ಬಂದಿಗಳ ಹೇಳಿಕೆಯಂತೆ ಬೈಕ್ ನಲ್ಲಿ ಇಬ್ಬರು ದರೋಡೆಕೋರರು ಬಂದಿದ್ದು ಓರ್ವ ಬ್ಯಾಂಕ್ ಹೊರಗೆ ನಿಂತಿದ್ದರೆ ಇನ್ನೋರ್ವ ಬ್ಯಾಂಕ್ ಒಳಗೆ ಪ್ರವೇಶಿಸಿ ಕ್ಯಾಶ್ ಕೌಂಟರ್ ಸಿಬ್ಬಂದಿಗೆ ಗನ್ ತೋರಿಸಿ ಹಣ ನೀಡುವಂತೆ ಗದರಿಸಿದ್ದ ಅಲ್ಲದೆ ಬ್ಯಾಂಕ್ ಒಳಗಿದ್ದ ಎಲ್ಲಾ ಸಿಬ್ಬಂದಿಗಳಿಗೆ ಗನ್ ತೊಳಿಸಿ ಕಿರುಚಿದರೆ ಕೊಲ್ಲುವುದಾಗಿ ಗದರಿಸಿದ್ದ ಎನ್ನಲಾಗಿದೆ. ಈ ವೇಳೆ ಕ್ಯಾಶ್ ಕೌಂಟರ್ ನಲ್ಲಿದ್ದ ಸಿಬ್ಬಂದಿ 22 ಲಕ್ಷ ಹಣವನ್ನು ನೀಡಿದ್ದು ದರೋಡೆಕೋರರು ಹಣ ಕಸಿದು ಪರಾರಿಯಾಗಿದ್ದಾರೆ.
ಘಟನೆಯ ದೃಶ್ಯಾವಳಿಗಳು ಬ್ಯಾಂಕ್ ನಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪೊಲೀಸರು ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ‘ಕಾಂತಾರ’ ಹಾಡಿನ ಪ್ರಕರಣ: ಪೃಥ್ವಿರಾಜ್ ವಿರುದ್ಧ ಎಫ್‌ಐಆರ್‌ಗೆ ಕೇರಳ ಹೈಕೋರ್ಟ್ ತಡೆ