Advertisement
ಈ ಬಾರಿಯ ಐಪಿಎಲ್ ವಿಜೇತ ತಂಡ 20 ಕೋ. ರೂ. ಮೊತ್ತವನ್ನು ಜೇಬಿಗಿಳಿಸಿಕೊಂಡಿದೆ. ಈ ಮೊತ್ತ ಕಳೆದ ವರ್ಷಕ್ಕಿಂತ 5 ಕೋ.ರೂ. ಹೆಚ್ಚು. ಫೈನಲ್‌ನಲ್ಲಿ ಪರಾಭವಗೊಂಡ ತಂಡಕ್ಕೂ ಭಾರೀ ನಿರಾಸೆಯೇನೂ ಆಗಿಲ್ಲ. ಅದಕ್ಕೆ 12.5 ಕೋ.ರೂ. ಮೊತ್ತ ಲಭಿಸಿದೆ. ಕಳೆದ ವರ್ಷ ಸಿಕ್ಕಿದ್ದು 10 ಕೋ.ರೂ.
ವೈಯಕ್ತಿಕ ಬಹುಮಾನದ ಮೊತ್ತದಲ್ಲೂ ಈ ಸಲ ಸಾಕಷ್ಟು ಹೆಚ್ಚಳವಾಗಿದೆ. ಅದರಂತೆ ಕೂಟದ “ಬಹುಮೂಲ್ಯ ಆಟಗಾರ’ನಿಗೆ 10 ಲಕ್ಷ ರೂ. ಲಭಿಸಿದೆ. ಅತ್ಯಧಿಕ ರನ್ ಬಾರಿಸಿ “ಆರೆಂಜ್ ಕ್ಯಾಪ್’ ತನ್ನದಾಗಿಸಿಕೊಂಡ ಬ್ಯಾಟ್ಸ್
ಮನ್ ಹಾಗೂ ಅತೀ ಹೆಚ್ಚು ವಿಕೆಟ್ ಉರುಳಿಸಿ “ಪರ್ಪಲ್ ಕ್ಯಾಪ್’ ಧರಿಸಿದ ಬೌಲರ್‌ಗೂ ತಲಾ 10 ಲಕ್ಷ ರೂ. ಬಹುಮಾನ ಲಭಿಸಿದೆ. ಕೂಟದ ಉದಯೋನ್ಮುಖ ಆಟಗಾರ ಕೂಡ 10 ಲಕ್ಷ ರೂ. ಪಡೆದಿದ್ದಾನೆ. 7 ಹಾಗೂ ಇದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಯೋಜಿ ಸಿದ ತಾಣಕ್ಕೆ ಟ್ರೋಫಿ ಹಾಗೂ 50 ಲಕ್ಷ ರೂ. ಬಹುಮಾನ, 7ಕ್ಕಿಂತ ಕಡಿಮೆ ಪಂದ್ಯಗಳನ್ನು ಆಯೋಜಿಸಿದ ಮೈದಾನ ಗಳಿಗೆ ಟ್ರೋಫಿ ಹಾಗೂ 25 ಲಕ್ಷ ರೂ. ಚೆಕ್ ಲಭಿಸಿದೆ.
Related Articles
ಅಂಗಳದಲ್ಲಿ ಅಸಾಮಾನ್ಯ ಪ್ರದರ್ಶನ ನೀಡಿದ ಆಟಗಾರನಿಗೂ 10 ಲಕ್ಷ ರೂ. ಸಿಕ್ಕಿದ್ದು, ಇದು ಅತ್ಯುತ್ತಮ ಕ್ಯಾಚ್ ಪಡೆದ ಕ್ಷೇತ್ರರಕ್ಷಕನ ಪಾಲಾಗಿದೆ. ಕೆಲವು ನೂತನ ಪ್ರಶಸ್ತಿಗಳೂ ಈ ಬಾರಿ ಆಟಗಾರರನ್ನು ಅರಸಿಕೊಂಡು ಬಂದಿವೆ. ಇವುಗಳಲ್ಲಿ ಮುಖ್ಯವಾದುದು “ಸ್ಟೈಲಿಶ್ ಪ್ಲೇಯರ್’ ಮತ್ತು “ನಯೀ ಸೋಚ್’. ಇದಕ್ಕೂ 10 ಲಕ್ಷ ರೂ. ಬಹುಮಾನ ನೀಡಲಾಗಿದೆ.
Advertisement