Advertisement

ಹಿಟ್‌ ಆ್ಯಂಡ್‌ ರನ್‌ ಪರಿಹಾರ 2 ಲಕ್ಷ ರೂ.

12:30 AM Mar 02, 2019 | |

ಹೊಸದಿಲ್ಲಿ: ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳಲ್ಲಿ ಅಸುನೀಗಿದ ವ್ಯಕ್ತಿಯ ಕುಟುಂಬ ಸದಸ್ಯರಿಗೆ ನೀಡುವ ಪರಿಹಾರದ ಮೊತ್ತವನ್ನು 25 ಸಾವಿರ ರೂ.ಗಳಿಂದ 2 ಲಕ್ಷ ರೂ.ಗಳಿಗೆ ಹೆಚ್ಚಿಸುವ ಪ್ರಸ್ತಾಪಕ್ಕೆ ಸುಪ್ರೀಂಕೋರ್ಟ್‌ ಅನು ಮೋದನೆ ನೀಡಿದೆ. ಯಾವ ರೀತಿಯಾಗಿ ಈ ಮೊತ್ತವನ್ನು ಪಾವತಿ ಮಾಡಬಹುದು ಎಂಬ ಬಗ್ಗೆ ಸೂಕ್ತ ನಿಯಮಗಳನ್ನು ರೂಪಿಸುವಂತೆ ಕೇಂದ್ರ ಸರಕಾರ ಮತ್ತು ಸಂಬಂಧಿತ ಇತರ ಪ್ರಾಧಿಕಾರಗಳಿಗೆ ನ್ಯಾ| ಎಸ್‌.ಎ. ಬೋಬ್ದೆ, ನ್ಯಾ| ದೀಪಕ್‌ ಗುಪ್ತಾ, ನ್ಯಾ| ವಿನೀತ್‌ ಶರಣ್‌ ಅವರನ್ನೊಳಗೊಂಡ ನ್ಯಾಯಪೀಠ ಸೂಚನೆ ನೀಡಿದೆ.

Advertisement

ಪರಿಹಾರದ ಮೊತ್ತ ಹೆಚ್ಚಿಸ ಕುರಿತು ತಿಳಿಸುವಂತೆ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕೆ.ಎಸ್‌.ರಾಧಾಕೃಷ್ಣನ್‌ ನೇತೃತ್ವದ ಸಮಿತಿಯನ್ನು ನೇಮಿಸಿತ್ತು. ಬುಧವಾರ ಸಮಿತಿಯ ಶಿಫಾರಸುಗಳನ್ನು ಸುಪ್ರೀಂಕೋರ್ಟ್‌ ಒಪ್ಪಿಕೊಂಡಿದೆ. ಜತೆಗೆ ಸದ್ಯ ನೀಡಲಾಗುತ್ತಿರುವ ಪರಿಹಾರದ ಮೊತ್ತ ಏನೇನೂ ಸಾಲದು ಎಂಬ ಅಭಿಪ್ರಾಯವನ್ನೂ ನ್ಯಾಯಪೀಠ ವ್ಯಕ್ತಪಡಿಸಿತು. ಈ ಪ್ರಕರಣದಲ್ಲಿ ಅಮಿಕಸ್‌ ಕ್ಯೂರಿಯಾಗಿ ನೆರವು ನೀಡುತ್ತಿರುವ ನ್ಯಾಯವಾದಿ ಗೌರವ್‌ ಅಗರ್ವಾಲ್‌ ಅರಿಕೆ ಮಾಡಿ, ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳಲ್ಲಿ ನೊಂದವರಿಗೆ ಪರಿಹಾರ ನೀಡುವ ಜನರಲ್‌ ಇನ್ಶೂರೆನ್ಸ್‌ ಕೌನ್ಸಿಲ್‌ನಲ್ಲಿ ಸುಮಾರು 90 ಕೋಟಿ ರೂ. ಮೊತ್ತದಷ್ಟು ಹಣ ಪಾವತಿಯೇ ಆಗಿಲ್ಲ ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next