Advertisement

ಬ್ರಿಟನ್‌ನ ಅತ್ಯಂತ ದುಬಾರಿ ಹೋಟೆಲ್‌ ನಲ್ಲಿ ಒಂದು ಊಟಕ್ಕೆ 19,000 ರೂ.!

12:22 PM Nov 12, 2022 | Team Udayavani |

ಲಂಡನ್‌: ಬೆಕ್ಸಿಟ್‌ನಿಂದ ಬ್ರಿಟನ್‌ ಹೊರಬಂದ ನಂತರ ಹಣದುಬ್ಬರ ಏರಿಕೆಯಾಗಿದ್ದು, ಜೀವನ ವೆಚ್ಚ ದುಬಾರಿಯಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಈ ಹಿಂದೆ ಬ್ರಿಟನ್‌ನ ಟಾಪ್‌ ರೆಸ್ಟೋರೆಂಟ್‌ಗಳಲ್ಲಿ ಒಂದು ಊಟಕ್ಕೆ 100 ಪೌಂಡ್‌(9,000 ರೂ.) ಪಡೆಯಲಾಗುತ್ತಿತ್ತು. ಆದರೆ ಇದು ಈಗ ದುಪ್ಪಟ್ಟಾಗಿದೆ. ಒಂದು ಊಟಕ್ಕೆ 200 ಪೌಂಡ್‌(ಸುಮಾರು 19,000 ರೂ.) ವಿಧಿಸಲಾಗುತ್ತಿದೆ.

Advertisement

“5 ವರ್ಷಗಳ ಹಿಂದೆ 100 ಪೌಂಡ್‌ ಇದ್ದ ಒಂದು ಊಟದ ಬೆಲೆ ಈಗ 200 ಪೌಂಡ್‌ಗೆ ತಲುಪಿದೆ. ಬಹುತೇಕ ಉತ್ತಮ ರೆಸ್ಟಾರೆಂಟ್‌ಗಳಲ್ಲಿ ಇದೇ ಬೆಲೆ ನಿಗದಿಪಡಿಸಲಾಗಿದೆ.

ಬ್ರಿಟನ್‌ನ ಅತ್ಯಂತ ದುಬಾರಿ ಹೋಟೆಲ್‌, ವೇಲ್ಸ್‌ನ ಸೆರೆಡಿಜಿಯನ್‌ನಲ್ಲಿರುವ ಯನಿಶಿರ್‌ ಹಾಲ್‌ ರೆಸ್ಟೋರೆಂಟ್‌ನಲ್ಲಿ ಒಂದು ಊಟಕ್ಕೆ 410 ಪೌಂಡ್‌ ನಿಗದಿಪಡಿಸಲಾಗಿದೆ, ಎಂದು ಹಾರ್ಡೆನ್ಸ್‌ ಲಂಡನ್‌ ರೆಸ್ಟೋರೆಂಟ್‌ ಗೈಡ್‌ನ‌ ಸಂಪಾದಕ ಪೀಟರ್‌ ಹಾರ್ಡೆನ್‌ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next