Advertisement

ಝಾಕೀರ್‌ ನಾಯ್ಕನ 16 ಕೋಟಿ ರೂ.ಆಸ್ತಿ ಜಪ್ತಿ

01:20 AM Jan 20, 2019 | |

ಹೊಸದಿಲ್ಲಿ: ಹಣಕಾಸು ಅಕ್ರಮ ಆರೋಪ ಎದುರಿಸುತ್ತಿರುವ ವಿವಾದಾತ್ಮಕ ಇಸ್ಲಾಮಿಕ್‌ ವಿದ್ವಾಂಸ ಝಾಕೀರ್‌ ನಾಯ್ಕಗೆ ಸೇರಿದ 16.40 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಸದಾಗಿ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. 

Advertisement

ಮುಂಬಯಿ ಮತ್ತು ಪುಣೆಯಲ್ಲಿ ನಾಯ್ಕ ಕುಟುಂಬ ಸದಸ್ಯರು ಹೊಂದಿರುವ ಆಸ್ತಿ ಪಾಸ್ತಿಗಳ ಜಪ್ತಿಗೆ ಆದೇಶ ಹೊರಡಿಸಲಾಗಿದೆ ಎಂದು ಇ.ಡಿ. ತಿಳಿಸಿದೆ. ಮುಂಬಯಿನ ಫಾತಿಮಾ ಹೈಟ್ಸ್‌, ಆಫಿಯಾ ಹೈಟ್ಸ್‌, ಪುಣೆಯಲ್ಲಿರುವ ಎನ್‌ಗೆÅàಷಿಯಾ ಮತ್ತಿತರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಹಣಕಾಸು ಮೂಲದ ಬಗ್ಗೆ ಹಾಗೂ ನೈಜ ಮಾಲಕತ್ವದ ಬಗ್ಗೆ ಮಾಹಿತಿ ಬಚ್ಚಿಡುವ ಉದ್ದೇಶದಿಂದ, ನಾಯ್ಕ ಬ್ಯಾಂಕ್‌ ಖಾತೆಯಿಂದ ಮಾಡಲಾದ ಪಾವತಿಗಳನ್ನು ರೀಫ‌ಂಡ್‌ ಮಾಡಿ, ಆತನ ಪತ್ನಿ, ಮಗ ಮತ್ತು ಕುಟುಂಬದ ಇತರೆ ಸದಸ್ಯರ ಖಾತೆಗೆ ವರ್ಗಾಯಿಸಲಾಗಿದೆ. ತನಿಖೆ ವೇಳೆ ಈ ವಿಚಾರ ಬಹಿರಂಗವಾದ ಹಿನ್ನೆಲೆಯಲ್ಲಿ ಜಪ್ತಿ ಆದೇಶ ಹೊರಡಿಸಲಾಗಿದೆ. ಈ ಮೂಲಕ ಒಟ್ಟಾರೆ 50.49 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next