Advertisement

ಶ್ರೀರಂಗಪಟ್ಟಣ ಪ್ರವಾಸಿ ತಾಣಗಳ ಅಭಿವೃದ್ಧಿಗೆ 15 ಕೋಟಿ

12:30 AM Feb 09, 2019 | Team Udayavani |

ಶ್ರೀರಂಗಪಟ್ಟಣ: ಕ್ಷೇತ್ರದ ಅರಕೆರೆಯ ಕೆರೆಯಿಂದ ನೀರಿನ ಸಂಪರ್ಕ ಕಲ್ಪಿಸುವ ಯೋಜನೆಗೆ 15 ಕೋಟಿ ರೂ. ಬಜೆಟ್‌ ನಲ್ಲಿ ಮಂಡಿಸಿರುವ ಮುಖ್ಯಮಂತ್ರಿ ಕುಮಾರ ಸ್ವಾಮಿಯವರಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಕೃತಜ್ಞತೆ ಸಲ್ಲಿಸಿದರು.

Advertisement

ಕ್ಷೇತ್ರದ ಗಾಮನಹಳ್ಳಿ, ನೇರಳೆಕೆರೆ ಸೇರಿದಂತೆ ಆ ಭಾಗದ 12 ಕೆರೆಗಳಿಗೆ ನೀರು ತುಂಬಿಸುವ ಬಹು ದಿನಗಳ ಕನಸಿಗೆ
ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. ಕ್ಷೇತ್ರದಲ್ಲಿ ಈ ಭಾಗ ಮಳೆಯಾಶ್ರಿತ ಪ್ರದೇಶವಾಗಿದೆ. ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಹಲವು ಬಾರಿ ಈ ಯೋಜನೆ ಕುರಿತು ಮುಖ್ಯ ಮಂತ್ರಿಗಳ ಗಮನಕ್ಕೆ ತಂದ ಪ್ರಯತ್ನದ ಫ‌ಲವೇ ಬಹು ದಿನಗಳ ಕನಸು ನನಸಾಗಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ 17 ಸಾವಿರ ಕೋಟಿ ಮೀಸಲಿರಿಸುವ ಬಜೆಟ್‌ನಲ್ಲಿ ಜಿಲ್ಲೆ ಶ್ರೀರಂಗಪಟ್ಟಣ ಭಾಗದ ವೀಸಿ ನಾಲೆಯ ಅಭಿವೃದ್ಧಿಗೆ 400 ಕೋಟಿಯಷ್ಟು ಹಣ
ದೊರೆಯಲಿದೆ. ಒಟ್ಟಾರೆ ಶ್ರೀರಂಗಪಟ್ಟಣಕ್ಕೆ ಹಿಂದಿನ ಯೋಜನೆ ಸೇರಿ 900 ಕೋಟಿಯಷ್ಟು ಅನುದಾನ ಲಭ್ಯವಾಗಿದ್ದು ಪ್ರವಾಸಿ ತಾಣ ಸೇರಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ರವೀಂದ್ರ ಶ್ರೀಕಂಠಯ್ಯ ಹೇಳಿದರು.

ಬಜೆಟ್‌ನಲ್ಲಿ ಜಿಲ್ಲೆಗೆ ಸಿಕ್ಕಿದ್ದೇನು?

ಮೈಷುಗರ್‌ ಕಾರ್ಖಾನೆಯನ್ನು ಹೊಸದಾಗಿ ನಿರ್ಮಿಸಿ ಡಿಸ್ಟಿಲರಿ, ಸಕ್ಕರೆ ಘಟಕ, ಬಾಯ್ಲಿಂಗ್‌ ಹೌಸ್‌ ದುರಸ್ತಿ, ಎಥೆನಾಲ್‌
ಘಟಕದ ಯಂತ್ರೋಪಕರಣಗಳು ಹಾಗೂ ಮೊಲಾಸಸ್‌ ಟ್ಯಾಂಕ್‌ ಅಳವಡಿಸಲು 100 ಕೋಟಿ ರೂ. ಅನುದಾನ. 
ಜಿಲ್ಲೆಯ ಸುತ್ತ ಸಮಗ್ರವಾಗಿ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಿ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಸೃಷ್ಟಿಸಲು 50 ಕೋಟಿ
ರೂ.ಗಳ ವಿಶೇಷ ಪ್ಯಾಕೇಜ್‌ ನೀಡಲಾಗಿದೆ.
ಜಿಲ್ಲೆಯೂ ಸೇರಿದಂತೆ ರಾಯಚೂರು, ವಿಜಯಪುರ, ಕೋಲಾರ ಜಿಲ್ಲೆಗಳಲ್ಲಿ ಜಲಧಾರೆ ಯೋಜನೆ ಅನುಷ್ಠಾನಕ್ಕೆ
4000 ಕೋಟಿ ರೂ ಅನುದಾನ.
ಪಾಂಡವಪುರ ತಾಲೂಕಿನ ‌ಬಳ ಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಕೆರೆಗಳನ್ನು ತುಂಬಿಸಲು 100 ಕೋಟಿ ರೂ. ಹಾಗೂ ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ 5 ಕೋಟಿ ರೂ. ಕೊಡುಗೆ.
ವಿ.ಸಿ.ಫಾರಂನ ಕೃಷಿ ಸಂಶೋಧನಾ ಕೇಂದ್ರದಲ್ಲಿ ಇಸ್ರೇಲ್‌ ಕೃಷಿ ಪ್ರಾತ್ಯಕ್ಷಿಕೆಗೆ 10 ಕೋಟಿ ರೂ ಅನುದಾನ.
ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ನಾಲೆ ಸೇರಿದಂತೆ ಮೈಸೂರು, ಚಾಮರಾಜನಗರ ನಾಲೆಗಳ ಅಭಿವೃದ್ಧಿಗೆ 400 ಕೋಟಿ ರೂ.
ಮದ್ದೂರು ತಾಲೂಕು ಸೂಳೆಕೆರೆ ಅಭಿವೃದ್ಧಿಗೆ 25 ಕೋಟಿ ರೂ. 
ಶ್ರೀರಂಗ ಪಟ್ಟಣ ತಾಲೂಕಿನ ಅಭಿವೃದ್ಧಿಗೆ 2 ಕೆರೆ 15 ಕೋಟಿ ರೂ.   
ಬಾಲಕಿಯರ ಪ್ರತ್ಯೇಕ ಕ್ರೀಡಾ ವಸತಿ ನಿಲಯ ಸ್ಥಾಪನೆಗೆ ಮಂಡ್ಯ ಸೇರಿ 10 ಜಿಲ್ಲೆಗಳಿಗೆ 15 ಕೋಟಿ ರೂ. ಅನುದಾನ,
ಕರ್ನಾಟಕ ಸಂಘದ ಅಭಿವೃದ್ಧಿಗೆ 1 ಕೋಟಿ ರೂ., ಮಂಡ್ಯ ವಿಶ್ವೇಶ್ವರಯ್ಯ ಕ್ರೀಡಾಂಗಣ ಅಭಿವೃದ್ಧಿಗೆ 1 ಕೋಟಿ ರೂ.
ಮದ್ದೂರಿನಲ್ಲಿ ಸ್ವಯಂಚಾಲಿತ ವಾಹನ ತಪಾಸಣೆ ಮತ್ತು ಪ್ರಮಾಣೀಕರಣ ಕೇಂದ್ರ ಸ್ಥಾಪನೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಕೈಗಾರಿಕಾ ಪ್ರದೇಶ ಅಭಿವೃದ್ಧಿ
ಯಲ್ಲಿ ಮಂಡ್ಯ ಜಿಲ್ಲೆಯ
ನಾಗಮಂಗಲವನ್ನು ಸೇರಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next