Advertisement

ಸೇತುವೆಗಳಿಗೆ 1,300 ಕೋಟಿ ವೆಚ್ಚ

02:37 PM Mar 05, 2018 | |

ತಾಳಿಕೋಟೆ: ರಾಜ್ಯದಲ್ಲಿ 1300 ಕೋಟಿ ರೂ. ವೆಚ್ಚದಲ್ಲಿ 217 ಸೇತುವೆ ನಿರ್ಮಾಣ ಮಾಡಿ ಜನರ ಸಂಕಷ್ಟಗಳಿಗೆ ಸ್ಪಂದಿಸುವಂತಹ ಕಾರ್ಯ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್‌.ಸಿ. ಮಹಾದೇವಪ್ಪ ಹೇಳಿದರು.

Advertisement

ಪಟ್ಟಣದ ಮಹಾ ರಾಣಾ ಪ್ರತಾಪ್‌ ಸರ್ಕಲ್‌ನಲ್ಲಿ ತಾಳಿಕೋಟೆ ಯಿಂದ ಪುನರ್ವಸತಿ ಹಡಗಿನಾಳ ಗ್ರಾಮಕ್ಕೆ ತೆರಳುವ ಡೋಣಿ ನ ದಿಗೆ ಅಡ್ಡಲಾಗಿ ಮೇಲ್ಮಟ್ಟದ ಸೇತುವೆ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
 
ಹಿಂದಿನ ಸರ್ಕಾರಗಳಲ್ಲಿ ಆಗದಂತಹ ಕೆಲಸ ಕಾರ್ಯಗಳನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮಾಡಿದೆ. ಬಹು ದಿನಗಳ ಕನಸಾಗಿ ಉಳಿದುಕೊಂಡಿದ್ದ ಈ ಸೇತುವೆ ಮಾಡಲೇಬೇಕು ಎಂದು ಶಾಸಕ ಸಿ.ಎಸ್‌. ನಾಡಗೌಡರು ನನ್ನ ಬಳಿ ಹೇಳಿದಾಗ ನಾನು ಯಾವುದನ್ನು ವಿಚಾರ ಮಾಡದೇ ಈ ಸೇತುವೆ ನಿರ್ಮಾಣಕ್ಕೆ 20 ಕೋಟಿ ರೂ. ಮಂಜೂರು ಮಾಡಿ ಹಡಗಿನಾಳ ಗ್ರಾಮಸ್ಥರ ಸಂಕಷ್ಟಕ್ಕೆ ಸ್ಪಂದಿಸಿದ್ದೇವೆ. ಸೇತುವೆ ಮುಖಾಂತರ ಪ್ರಮುಖ ಪಟ್ಟಣಗಳಿಗೆ ಸಂಚರಿಸಲು ಅನುಕೂಲವಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಾಸಕ ಸಿ.ಎಸ್‌. ನಾಡಗೌಡ ಮಾತನಾಡಿ, 20 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗುತ್ತಿದೆ. ಇದರಿಂದ ಹಡಗಿನಾಳ ಗ್ರಾಮ ಒಳಗೊಂಡು ಸುಮಾರು ನಾಲ್ಕೈದು ಗ್ರಾಮಸ್ಥರು ಸಂತಸಗೊಂಡಿದ್ದಾರೆ. ಜನರ ಮೂಲಭೂತ ವ್ಯವಸ್ಥೆ ಸ್ಪಂದಿಸುವಂತಹ ಕಾರ್ಯ ಕಾಂಗ್ರೇಸ್‌ ಸರ್ಕಾರ ಯಾವಾಗಲೂ ಮಾಡುತ್ತ ಬಂದಿದೆ.
 
ಹುನಗುಂದ-ಕೆಂಭಾವಿ ರಸ್ತೆ ಅಭಿವೃದ್ಧಿ ಹೊಂದುತ್ತಿರುವದು ಗಮನಿಸುತ್ತಿದ್ದೀರಿ. ನಾಶನಲ್‌ ಹೈವೆ ರೀತಿ ಈ ರಸ್ತೆ ಕಾಮಗಾರಿ ನಡೆದಿದೆ. ಅದರಂತೆ ಮನಗೂಳಿ-ದೇವಾಪುರ ಹೈವೆ ರಸ್ತೆ ಅಭಿವೃದ್ಧಿ ಮುಗಿಯಲಿಕ್ಕೆ ಬಂದಿದೆ. ಸುಮಾರು 30, 40 ವರ್ಷ ಈ ರಸ್ತೆ ಬಾಳ್ವಿಕೆ ಬರಲಿದೆ. ಅಭಿವೃದ್ಧಿ ನಿರಂತರವಾಗಿ ಹರಿಯುವ ನೀರಿನ ಹಾಗೆ ನಡೆಯುತ್ತಿರುತ್ತದೆ.

ಆದರೆ ಜನರಿಗೆ ಸಮಸ್ಯೆಗಳು ಬಂದಾಗ ಸ್ಪಂದಿಸುವದು ಅಷ್ಟೇ ಮುಖ್ಯವಾಗಿದ್ದು ಆ ಕೆಲಸವನ್ನು ಕಾಂಗ್ರೆಸ್‌ ಸರ್ಕಾರ ಮಾಡಿದೆ ಎಂದರು. ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ, ತಹಶೀಲ್ದಾರ್‌ ಎಸ್‌.ಎಚ್‌. ಅರಕೇರಿ, ಪುರಸಭೆ ಅಧ್ಯಕ್ಷೆ ಅಕ್ಕಮಹಾದೇವಿ ಕಟ್ಟಿಮನಿ, ಉಪಾಧ್ಯಕ್ಷೆ ಹುಸೇನಬಿ ಮುಲ್ಲಾ, ಸದಸ್ಯರಾದ ಛಾಂದಬಿ ತಾಳಿಕೋಟಿ, ಕೆಪಿಸಿಸಿ ಸದಸ್ಯ ಬಿ.ಎಸ್‌. ಪಾಟೀಲ (ಯಾಳಗಿ), ಯಾಸೀನ್‌ ಮಮದಾಪುರ, ಮಶಾಕ್‌ ಚೋರಗಸ್ತಿ, ಖಾಜಾಹುಸೇನ್‌ ಡೋಣಿ, ಮಾಸುಮಸಾಬ ಕೆಂಭಾವಿ, ಸೈಯದ್‌ ಶಕೀಲಅಹ್ಮದ್‌ ಖಾಜಿ,
ವೈ.ಎಚ್‌. ವಿಜಯಕರ, ಡಿ.ಎಸ್‌. ಶಿರೋಳ ಇದ್ದರು. ಅಬ್ದುಲ್‌ಗ‌ನಿ ಮಕಾಂದಾರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next