Advertisement

ಕಾರ್ಕಳ ನಗರದ ಒಳಚರಂಡಿ ನಿರ್ಮಾಣಕ್ಕೆ 13 ಕೋಟಿ ರೂ. ಅನುದಾನ ಬಿಡುಗಡೆ: ಸುನಿಲ್‌

10:31 PM Sep 23, 2019 | Team Udayavani |

ಅಜೆಕಾರು: 1994ರಲ್ಲಿ ನಿರ್ಮಿಸಿದ ಒಳಚರಂಡಿ ಯೋಜನೆಯ ವ್ಯವಸ್ಥೆ ಸುಧೀರ್ಘ‌ ಕಾಲದ ಬಳಕೆಯ ಅನಂತರ ಪ್ರಸ್ತುತ ದಿನಗಳಲ್ಲಿ ಸಮಸ್ಸೆಯಾಗಿ ಕಾಡುತ್ತಿದ್ದು ಈ ಒಳಚರಂಡಿಯನ್ನು ಹೊಸದಾಗಿ ನಿರ್ಮಿಸುವ ನಿಟ್ಟಿನಲ್ಲಿ 13 ಕೋಟಿ ರೂ. ಅನುದಾನ ಆಡಳಿತಾತ್ಮಕವಾಗಿ ಬಿಡುಗಡೆಯಾಗಿದೆ ಎಂದು ಶಾಸಕ ಸುನಿಲ್‌ ಕುಮಾರ್‌ ಹೇಳಿದರು.

Advertisement

ಶಾಸಕರ ವಿಕಾಸ ಕಚೇರಿಯಲ್ಲಿ ಸೆ. 23ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭಾ ಚುನಾವಣೆಯ ಸಂದರ್ಭ ನೀಡಿದ ಆಶ್ವಾಸನೆಯಂತೆ ಕೇವಲ ಒಂದು ವರ್ಷದಲ್ಲಿ ಕಾಮಗಾರಿಗೆ ಅನುದಾನ ಒದಗಿಸಲಾಗಿದೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ಸರಕಾರದಿಂದ ಬಿಡುಗಡೆಗೊಂಡಿರುವ ಅನುದಾನದಲ್ಲಿ ಇದು ದೊಡ್ಡ ಮೊತ್ತವಾಗಿದ್ದು, ನಗರ ಒಳಚರಂಡಿಯ ಟ್ರೀಟ್‌ಮೆಂಟ್‌ ಪ್ಲಾಂಟ್‌ ಅವೈಜ್ಞಾನಿಕವಾಗಿರುವ ಪರಿಣಾಮವಾಗಿ ಸಂಪತ½ರಿತ ಕುಡಿಯುವ ನೀರಿಗೆ ಆಸರೆಯಾಗಿದ್ದ ಬಾವಿಗಳು ಕಲುಷಿತವಾಗಿರುತ್ತದೆ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ತಂದು ಯುಜಿಡಿ ಯೋಜನೆಯಡಿ ಈಗ ಹೊಸದಾಗಿ ಒಳಚರಂಡಿ ನಿರ್ಮಿಸಲು 13 ಕೋಟಿ ರೂ. ಆಡಳಿತಾತ್ಮಕ ಅನುದಾನ ಬಿಡುಗಡೆಯಾಗಿದೆ. ಶೀಘ್ರ ಟೆಂಡರ್‌ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ಸ್ವಚ್ಛತೆಗೆ 2.25 ಕೋಟಿ ರೂ. ಅನುದಾನ
ಘನ ತ್ಯಾಜ್ಯ ಘಟಕದ ಉನ್ನತೀಕರಣಗೊಳಿಸಲು 2.25 ಕೋಟಿ ರೂ. ಅನುದಾನ ಮಂಜೂರಾಗಿದೆ. ಈ ಅನುದಾನದಲ್ಲಿ 1.82 ಟನ್‌ ಸಾಮಾರ್ಥ್ಯದ 6 ವಾಹನ, 3 ಟನ್‌ ಸಾಮಾರ್ಥ್ಯದ 1 ವಾಹನ, ವೇಬ್ರಿಜ್‌j, 1 ಜೆಸಿಬಿ ಖರೀದಿ ಮಾಡಲಾಗುವುದು ಎಂದರು.

ಕಾರ್ಕಳ ನಗರದ ಒಳಚರಂಡಿ, ಶುದ್ಧ ಕುಡಿಯುವ ನೀರು ಹಾಗೂ ಘನ ತ್ಯಾಜ್ಯ ವಿಲೇವಾರಿ ಯೋಜನೆಗಳು ಅನುಷ್ಠಾನಗೊಳ್ಳುವ ಮೂಲಕ ಸ್ವರ್ಣ ಕಾರ್ಕಳ ಯೋಜನೆಗೆ ಹೆಚ್ಚಿನ ರೀತಿಯ ಒತ್ತು ದೊರೆಯಲಿದೆ ಎಂದರು. ಈ ಸಂದರ್ಭ ಪುರಸಭಾ ಪರಿಸರ ಅಭಿಯಂತರ ಮದನ್‌, ಅನಂತಕೃಷ್ಣ ಶೆಣೈ, ರವೀಂದ್ರ ಕುಮಾರ್‌, ಹರೀಶ್‌ ಶೆಣೈ ಉಪಸ್ಥಿತರಿದ್ದರು.

Advertisement

ನಗರೋತ್ಥಾನ ಯೋಜನೆಯಡಿ 3.75 ಕೋಟಿ ರೂ.
ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರಿನ ಯೋಜನೆಗಾಗಿ ನಗರೋತ್ಥಾನ ಯೋಜನೆಯಡಿಯಲ್ಲಿ 3.75 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ. ಇದರಲ್ಲಿ ನಾಲ್ಕು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹಿರಿಯಂಗಡಿ ಪರ್ಪಲೆಯಲ್ಲಿ 5 ಲಕ್ಷ ಲೀ. ಸಾಮಾರ್ಥ್ಯದ ನೆಲ ಮಟ್ಟದ ಟ್ಯಾಂಕ್‌ ನಿರ್ಮಾಣಕ್ಕೆ 50 ಲಕ್ಷ ರೂ., ನೀರಿನ ಶುದ್ಧೀಕರಣ ಘಟಕದ ಬಳಿಯಿಂದ ಪೈಪ್‌ ಅಳವಡಿಕೆಗೆ 1.25 ಕೋಟಿ ರೂ., ರಾಮ ಸಮುದ್ರ ಪರಿಸರದಲ್ಲಿ 2.5 ಲಕ್ಷ ಲೀ. ಸಾಮರ್ಥ್ಯದ ಟ್ಯಾಂಕ್‌ ನಿರ್ಮಾಣಕ್ಕೆ 48 ಲಕ್ಷ ರೂ., 4.5 ಕಿ.ಮೀ ಹೊಸ ಪೈಪ್‌ ಅಳವಡಿಸುವುದು, 109 ಆಳುಗುಂಡಿ ರಚನೆ ಪೈಪ್‌ ಹಾದು ಹೋಗುವ ರಸ್ತೆಯಲ್ಲಿ ಮರು ಡಾಮರೀಕರಣ, ತ್ಯಾಜ್ಯ ನೀರಿನ ಮರುಶುದ್ದೀಕರಣ ಘಟಕ ರಚನೆ ಮುಂತಾದ ಶಾಶ್ವತವಾದ ಕಾಮಗಾರಿ ಇದಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next