Advertisement
ಪ್ರಧಾನಿ ನರೇಂದ್ರ ಮೋದಿ ಕನಸಿನ ಸ್ಮಾರ್ಟ್‌ಸಿಟಿ ನಿರ್ಮಾಣ ಯೋಜನೆಯ 100 ನಗರಗಳ ಪಟ್ಟಿಯಲ್ಲಿ ಮಂಗಳೂರು ಕೂಡ ಸ್ಥಾನ ಪಡೆದುಕೊಂಡಿತ್ತು. ಮೊದಲ ಹಂತವಾಗಿ ದೇಶದ ಒಟ್ಟು 20 ನಗರಗಳನ್ನು ಗುರುತಿಸಿ ಸ್ಮಾರ್ಟ್‌ಸಿಟಿಯನ್ನಾಗಿ ಪರಿವರ್ತಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಆ ಬಳಿಕ 2ನೇ ಹಂತವಾಗಿ ಮಂಗಳೂರು ಸೇರಿದಂತೆ ದೇಶದ 20 ನಗರಗಳನ್ನು ಆಯ್ಕೆ ಮಾಡಲಾಗಿತ್ತು. ಅದರಂತೆ ಮಂಗಳೂರು ಸ್ಮಾರ್ಟ್‌ಸಿಟಿಯಾಗಿ ಪರಿವರ್ತಿಸುವುದಕ್ಕೆ ಮಹಾನಗರ ಪಾಲಿಕೆ 2000 ಕೋ. ರೂ. ಪ್ರಸ್ತಾವನೆ ರೂಪಿಸಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಮೊದಲ ಹಂತದಲ್ಲಿ 107 ಕೋ. ರೂ. ಅನುದಾನ ಬಿಡುಗಡೆ ಮಾಡಿದೆ. ಈ ಮೂಲಕ ಮಂಗಳೂರು ಜನತೆಯ ಕನಸಿನ ಸ್ಮಾರ್ಟ್‌ಸಿಟಿ ಯೋಜನೆಗೆ ವಿಧ್ಯುಕ್ತ ಚಾಲನೆ ದೊರೆತಿರುವುದು ಗಮನಾರ್ಹ.
ಅಭಿವೃದ್ಧಿ, “ಪಾನ್ ಸಿಟಿ’ (ಡಿಜಿಟಲೀಕರಣ-ತಂತ್ರಜ್ಞಾನ), ಹೆಲ್ತ್ ಸಿಟಿ, ಬಂದರು ಅಭಿವೃದ್ಧಿ ಮುಂತಾದ ಪ್ರಸ್ತಾವನೆಗಳಿಗೆ ಕ್ರಿಯಾ ಯೋಜನೆ, ಎಂಜಿನಿಯರ್, ಚಾರ್ಟರ್ಡ್ ಆಕೌಂಟೆಂಟ್ ಸೇರಿದಂತೆ ಅವಶ್ಯ ವಿರುವ ಅಧಿಕಾರಿಗಳ ನೇಮಕ, ಬ್ಯಾಂಕ್ ಖಾತೆ ತೆರೆಯುವುದು ಮುಂತಾದ ಪ್ರಕ್ರಿಯೆಗಳ ಚರ್ಚೆ ನಡೆಸಿ ಮುಂದಿನ ಕ್ರಮ ಚರ್ಚಿಸಲಾಗಿದೆ. ಜೂನ್ ತಿಂಗಳಿನಲ್ಲಿ ಎಸ್‌ವಿಪಿ 2ನೇ ಸಭೆ ನಡೆಯಲಿದ್ದು, ಇದರಲ್ಲಿ ಬಹುತೇಕ ಅಂತಿಮಗೊಳ್ಳಲಿದೆ ಎಂದು ಮೇಯರ್ ಕವಿತಾ ಸನಿಲ್ ಹಾಗೂಮನಪಾ ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ ತಿಳಿಸಿದ್ದಾರೆ.
Related Articles
ಮಂಗಳೂರು ನಗರವನ್ನು ಸ್ಮಾರ್ಟ್ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ 2 ವಿಧದಲ್ಲಿ ಬೆಳವಣಿಗೆಯ ಗುರಿ ಇಟ್ಟು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಮಂಗಳೂರು ನಗರ, ಹಂಪನಕಟ್ಟೆ, ಬಂದರು ಹಾಗೂ ಕಾರ್‌ಸ್ಟ್ರೀಟ್ ವ್ಯಾಪ್ತಿಯ 1628 ಎಕರೆ ಪ್ರದೇಶವನ್ನು ಇದರಲ್ಲಿ ಜೋಡಿಸಲಾಗಿದೆ. ಪಾಲಿಕೆ ಸಲ್ಲಿಸಿದ್ದ ಒಟ್ಟು 2000.72 ಕೋ. ರೂ. ಪ್ರಸ್ತಾವನೆಯಲ್ಲಿ “ಏರಿಯಾ ಬೇಸ್’ನಿಂದ (ನಗರದ ಸ್ಥಳ ಕೇಂದ್ರಿತ ಅಭಿವೃದ್ಧಿ) 1,707.29 ಕೋ. ರೂ. ಹಾಗೂ “ಪಾನ್ ಸಿಟಿ’ (ಡಿಜಿಟಲೀ
ಕರಣ-ತಂತ್ರಜ್ಞಾನ)ಮೂಲಕ 293.43 ಕೋ. ರೂ.ಗಳ ಪ್ರಸ್ತಾವನೆ ಯೋಜನೆ ಸಿದ್ಧಗೊಳಿಸಲಾಗಿದೆ.
Advertisement
ಸ್ಮಾರ್ಟ್‌ಸಿಟಿಗೆ ಒಟ್ಟು 204 ಕೋ. ರೂ.ಕೇಂದ್ರ ಸರಕಾರ ನೀಡುವಷ್ಟೆ ಅನುದಾನವನ್ನು ರಾಜ್ಯ ಸರಕಾರ ಬಿಡುಗಡೆ ಮಾಡಬೇಕಾಗಿದೆ. ಇದೀಗ ಕೇಂದ್ರ ಸರಕಾರದಿಂದ ಬಂದಿರುವ 107 ಕೋ. ರೂ. ಅನುದಾನಕ್ಕೆ ಸರಿಸಮನಾಗಿ 107 ಕೋ. ರೂ. ಅನುದಾನ ರಾಜ್ಯ ಸರಕಾರದಿಂದ ಒಂದು ವಾರದೊಳಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದರೊಂದಿಗೆ ಮೊದಲ ಹಂತದಲ್ಲಿ ಒಟ್ಟು 214 ಕೋ. ರೂ. ಲಭ್ಯವಾಗಲಿದೆ. ಯೋಜನೆ ಜಾರಿ ಕುರಿತು “ವಿಶೇಷ ಉದ್ದೇಶ ವಾಹಕ’ದ (ಸ್ಪೆಷಲ್ ಪರ್ಪಸ್ ವೆಹಿಕಲ್) ಮೊದಲ ಮಹತ್ವದ ಸಭೆ ಬೆಂಗಳೂರಿನ ವಿಕಾಸಸೌಧದಲ್ಲಿ ಮೇ 2ರಂದು ಜರಗಿದ್ದು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆರ್.ಕೆ. ಸಿಂಗ್ ಕೇಂದ್ರ ಸರಕಾರದಿಂದ ಅನುದಾನ ಬಿಡುಗಡೆಯಾಗಿರುವುದನ್ನು ಘೋಷಿಸಿದರು.