Advertisement

ಸಮಗ್ರ ಅಭಿವೃದ್ಧಿಗೆ 10 ಕೋಟಿ ಅನುದಾನ ಅಗತ್ಯ

06:05 PM Feb 28, 2018 | |

ಹೊನ್ನಾಳಿ: ಪಟ್ಟಣದ ಸಮಗ್ರ ಅಭಿವೃದ್ಧಿಗೆ ಇನ್ನೂ 10 ಕೋಟಿ ರೂ. ಅನುದಾನದ ಅವಶ್ಯಕತೆ ಇದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

Advertisement

ಪಪಂ ಆವರಣದಲ್ಲಿ ಪಟ್ಟಣ ಪಂಚಾಯ್ತಿ ವತಿಯಿಂದ ನಿರ್ಮಿಸಲಾದ ಅಧ್ಯಕ್ಷರು, ಉಪಾಧ್ಯಕ್ಷರ ಕೊಠಡಿ ಹಾಗೂ ನೂತನ ಸಭಾ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪಟ್ಟಣದ ವ್ಯಾಪ್ತಿಯಲ್ಲಿ ಬಹುತೇಕ ರಸ್ತೆ ಕಾಮಗಾರಿ ನಡೆದಿವೆ. ಪಟ್ಟಣದ
ಮುಖ್ಯರಸ್ತೆ ಅಭಿವೃದ್ಧಿ ಕೂಡಾ ಮುಗಿದಿದೆ. ದುರ್ಗಿಗುಡಿ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಒಂದಿಷ್ಟು ರಸ್ತೆ ಅಭಿವೃದ್ಧಿ ಬಾಕಿ ಉಳಿದಿದ್ದು,
ಮುಂದಿನ ದಿನಗಳಲ್ಲಿ ಅದಕ್ಕೆ ಅನುದಾನ ಒದಗಿಸುವ ಪ್ರಯತ್ನ ಮಾಡುತ್ತೇನೆ ಎಂದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ. ಮಂಜಪ್ಪ
ಮಾತನಾಡಿ, ತಾವು ಪಟ್ಟಣ ಪಂಚಾಯ್ತಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸುಮಾರು 70ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳನ್ನು ಹಾಗೂ ನೂತನ ಖಾಸಗಿ ಬಸ್‌ ನಿಲ್ದಾಣ ನಿರ್ಮಿಸಲಾಗಿತ್ತು. ಈಗ ಅವುಗಳ ಆದಾಯದಿಂದ ಹಾಗೂ ಸರ್ಕಾರದ ಅನುದಾನದಿಂದ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದರು. 

ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಶ್ರೀದೇವಿ ಧರ್ಮಪ್ಪ ಮಾತನಾಡಿ, ಯಾವುದೇ ಅಭಿವೃದ್ಧಿ ಕಾಮಗಾರಿಗೆ ಹಣದ ಮೂಲಗಳನ್ನು 
ಸೃಷ್ಟಿಸಬೇಕು ಎಂದರು. ಪಪಂ ಸದಸ್ಯ ಕೆ.ಪಿ. ಕುಬೇಂದ್ರಪ್ಪ ಮಾತನಾಡಿ, ಖಾಸಗಿ ಬಸ್‌ ನಿಲ್ದಾಣದಲ್ಲಿ ಶಾಸಕ ಡಿ.ಜಿ. ಶಾಂತನಗೌಡರು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಪಪಂ ಸದಸ್ಯರಾದ ಎಚ್‌.ಬಿ. ಅಣ್ಣಪ್ಪ, ಎಚ್‌.ಡಿ. ವಿಜೇಂದ್ರಪ್ಪ ಮಾತನಾಡಿದರು. ಪಪಂ ಉಪಾಧ್ಯಕ್ಷೆ ವೀಣಾ ಸುರೇಶ್‌, ಸದಸ್ಯರಾದ
ಸರಳಿನಮನೆ ಮಂಜುನಾಥ, ಹೊಸಕೇರಿ ಸುರೇಶ್‌, ಎಂ.ಮಲ್ಲೇಶ್‌, ವಿಜಯಮ್ಮ, ಗುಲ್‌ಶಿರಾಖಾನಂ, ಮುಖ್ಯಾಧಿಕಾರಿ ಎಸ್‌.
ಆರ್‌. ವೀರಭದ್ರಯ್ಯ, ಎಂಜಿನಿಯರ್‌ ದೇವರಾಜ್‌, ಕಂದಾಯಾಧಿಕಾರಿ ಪಿ.ವಸಂತ್‌, ಮುಖಂಡರಾದ ಎಚ್‌.ಬಿ. ಗಿಡ್ಡಪ್ಪ, ಬಿ.ಐ.ಸಿದ್ದಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next