ಕಂಗಾಲಾದ ಘಟನೆ ರಾಜ್ಯದಲ್ಲಿ ನಡೆದಿದೆ. ಕಾರಣ ಬೆಳೆ ನಷ್ಟ ಹೊಂದಿದ ರೈತರ ಖಾತೆಗೆ ಜಮೆ ಆಗಿದ್ದು ಕೇವಲ 1 ರೂ. ಮಾತ್ರ ! ಘಟನೆ ಕುರಿತು ಪ್ರತಿಕ್ರಿಯಿಸಿದ ಕುಷ್ಟಗಿ ತಹಶೀಲ್ದಾರ್ ಖಾತೆ ಖಾತ್ರಿ ಮಾಡುಕೊಳ್ಳುವ ಸಲುವಾಗಿ 1ರೂ. ಜಮೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಳವಗೇರಾದ ದೇವಪ್ಪ ಮಡಿವಾಳ ಹಾಗೂ ಕಿಡದೂರಿನ ರೈತ ಬಸವರಾಜ್ ಹೊಸಮನಿ ಬೆಳೆಹಾನಿ ಪರಿಹಾರಕ್ಕಾಗಿ ತಹಶೀಲ್ದಾರ್ ಕಚೇರಿ ಹಾಗೂ ಸಂಬಂಧಿಸಿದ ಬ್ಯಾಂಕ್‌ನಲ್ಲಿ ವಿಚಾರಿಸಿದ್ದರೂ ಪರಿಹಾರ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ರೈತರು ಅನುದಾನದ ನಿರೀಕ್ಷೆಯನ್ನೇ ಕೈಬಿಟ್ಟಿದ್ದರು.
Advertisement
ಇತ್ತೀಚೆಗೆ ಬಸವರಾಜು ಹಾಗೂ ದೇವಪ್ಪ ಮಡಿವಾಳರ ಖಾತೆಗೆ 1 ರೂ. ಜಮೆಯಾಗಿತ್ತು. ಇದರಿಂದ ಅಚ್ಚರಿ ಹಾಗೂ ತೀವ್ರ ನಿರಾಸೆಯಿಂದ ಕಂದಾಯ ನಿರೀಕ್ಷಕರನ್ನು ವಿಚಾರಿಸಿದ್ದರೂ ಸರಿಯಾಗಿ ಸ್ಪಂದಿಸಿರಲಿಲ್ಲ.
ಬೆಂಗಳೂರು: ಬೆಳೆ ಹಾನಿಗೊಳಗಾದ ರೈತರಿಗೆ ಒಂದು ರೂ. ಪರಿಹಾರ ನೀಡಿರುವ ಕುರಿತು ರಾಜ್ಯಸರ್ಕಾರ ಸ್ಪಷ್ಟನೆ ನೀಡಿದೆ. ಇನ್‌ಪುಟ್ ಸಬ್ಸಿಡಿಯನ್ನು ಆಧಾರ ಜೋಡಣೆಯಾದ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ. 1 ಲಕ್ಷ 82 ಸಾವಿರ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದಿರುವುದರಿಂದ ಪ್ರಯೋಗಾರ್ಥವಾಗಿ ಎನ್‌ಪಿಸಿಐ ಮೂಲಕ ತಲಾ ಒಂದು ರೂ.ನಂತೆ ಹಣ ವರ್ಗಾವಣೆ ಮಾಡಲಾಗಿದ್ದು, ಬ್ಯಾಂಕ್‌ನ ಪ್ರಯೋಗ ಯಶಸ್ವಿಯಾಗಿರುವುದರಿಂದ ರೈತರಿಗೆ ಬಾಕಿ ಇರುವ ಇನ್‌ಪುಟ್ ಸಬ್ಸಿಡಿಯನ್ನು
ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುವುದು ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.