ಬಿಹಾರ : ನಾವು ನಿತ್ಯ ಕೊಂಡುಕೊಳ್ಳುವ ತರಕಾರಿ ಬೆಲೆ ಅಬ್ಬಬ್ಬಾ ಅಂದ್ರೆ ಕೆ.ಜಿಗೆ ನೂರು ಇಲ್ಲವೆ ಇನ್ನೂರು ರೂಪಾಯಿ ಇರುತ್ತದೆ. ಆದರೆ, ಇಲ್ಲೊಬ್ಬ ರೈತ ಬೆಳೆದಿರುವ ತರಕಾರಿಯ ಬೆಲೆ ಕೇಳಿದ್ರೆ ನೀವು ದಂಗಾಗಿ ಹೋಗ್ತೀರಾ..! ಹಾಗಾದರೆ ಆ ಬೆಳೆ ಯಾವುದು? ಅದು ಅಷ್ಟೊಂದು ದುಬಾರಿ ಯಾಕೆ ಎಂಬುದರ ಕುರಿತು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಬಿಹಾರ ಮೂಲದ ರೈತ ಅಮರೇಶ್ ಸಿಂಗ್ ತನ್ನ ಜಮೀನಿನಲ್ಲಿ ಹಾಪ್ ಶೂಟ್ಸ್ ( ಒಂದು ಬಗೆಯ ತರಕಾರಿ) ಬೆಳೆದಿದ್ದಾರೆ. ಇದರ ಬೆಲೆ ಪ್ರತಿ ಕೆ.ಜಿಗೆ ಬರೋಬ್ಬರಿ 1 ಲಕ್ಷ.ರೂ.ಯಂತೆ.
ಹೌದು, ಈ ಪ್ರಗತಿಪರ ರೈತನ ಹೊಸ ಪ್ರಯೋಗ ಹಾಗೂ ಆತನಿಗೆ ದೊರೆತಿರುವ ಯಶಸ್ಸು ಕುರಿತು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
Related Articles
ಅಲಹಾಬಾದ್ ಜಿಲ್ಲೆಯ ಕರಂನಿದ್ ಗ್ರಾಮದ 38 ವರ್ಷ ವಯಸ್ಸಿನ ರೈತ ಅಮರೇಶ್ ಇದೀಗ ಹೊಸ ಪ್ರಯೋಗವೊಂದಕ್ಕೆ ಕೈ ಹಾಕಿ ಅದರಲ್ಲಿ ಯಶಸ್ಸು ಪಡೆದಿದ್ದಾರೆ. ಅಮೆರಿಕಾ ಮತ್ತು ಯೂರೋಪ್ ದೇಶಗಳಲ್ಲಿ ಬೆಳೆಯುವ ಹಾಪ್ ಶೂಟ್ಸ್ ತರಕಾರಿ ಬೆಳೆದು ಭಾರತ ದೇಶದ ಕೃಷಿ ಪದ್ಧತಿಯಲ್ಲಿ ಹೊಸ ಭಾಷ್ಯ ಬರೆದಿದ್ದಾರೆ.
ವಾರಣಾಸಿಯಲ್ಲಿರುವ ಭಾರತೀಯ ತರಕಾರಿ ಸಂಶೋಧನಾ ಕೇಂದ್ರದಿಂದ ಮಾಹಿತಿ ಹಾಗೂ ಬೀಜಗಳನ್ನು ಪಡೆದ ಅಮರೇಶ್ ತನ್ನ ಹೊಲದಲ್ಲಿ ಬಿತ್ತನೆ ಮಾಡಿದ್ದಾರೆ. ಈ ತರಕಾರಿ ವ್ಯವಸಾಯಕ್ಕೆ ಇದುವರೆಗೆ 2.5 ಲಕ್ಷ ರೂ. ಖರ್ಚು ಮಾಡಿದ್ದಾರೆ. ಇದೀಗ ಈ ಬೆಳೆ ಫಲ ನೀಡುತ್ತಿದ್ದು, ಅಧಿಕ ಲಾಭ ಗಳಿಕೆಯ ವಿಶ್ವಾಸದಲ್ಲಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜತೆ ಮಾತಾಡಿರುವ ಅಮರೇಶ್, ಎರಡು ತಿಂಗಳ ಹಿಂದೆ ಹಾಪ್ ಶೂಟ್ಸ್ ಬಿತ್ತನೆ ಮಾಡಿದೆ. ಪ್ರಸ್ತುತ ಶೇಕಡಾ 60 ರಷ್ಟು ಬೆಳೆ ಬಳೆದಿದೆ. ಯಾವುದೇ ರಾಸಾಯನಿಕ ಗೊಬ್ಬರ ಬಳಸಿಲ್ಲ. ಮುಂದಿನ ದಿನಗಳಲ್ಲಿ ಇದು ಫಲಪ್ರದವಾದ ವ್ಯವಸಾಯವಾಗಲಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಇನ್ನು ಹಾಪ್ ಶೂಟ್ಸ್ ತರಕಾರಿ ಬೆಳೆದ ಮೊದಲ ಭಾರತೀಯ ರೈತ ಎನ್ನುವ ಹೆಗ್ಗಳಿಕೆಗೆ ಅಮರೇಶ್ ಪಾತ್ರರಾಗಿದ್ದಾರೆ. ಈ ಬೆಳೆ ಆಹಾರ ಹಾಗೂ ಕೆಲವು ಔಷಧಿಗಳ ತಯಾರಿಕೆಗೆ ಬಳಕೆಯಾಗುತ್ತದೆ ಎಂದು ವರದಿಗಳು ತಿಳಿಸಿವೆ.