ವಾಷಿಂಗ್ಟನ್: ಎಸ್.ಎಸ್.ರಾಜಮೌಳಿ ಅವರ ʼಆರ್ ಆರ್ ಆರ್ʼ ಸಿನಿಮಾ ಇತ್ತೀಚೆಗೆ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ನಲ್ಲಿ 4 ಅಂತಾರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇದೀಗ ಇದೇ ತಿಂಗಳು ನಡೆಯಲಿರುವ 95ನೇ ಆಸ್ಕರ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.
ಅತ್ಯುತ್ತಮ ಮೂಲ ಗೀತೆಯ ( ಬೆಸ್ಟ್ ಒರಿಜಿನಲ್ ಸಾಂಗ್ ಕ್ಯಾಟಗರಿ) ವಿಭಾಗದಲ್ಲಿ ʼಆರ್ ಆರ್ ಆರ್ʼ ಚಿತ್ರದ ʼನಾಟು ನಾಟುʼ ಹಾಡು ನಾಮಿನೇಟ್ ಆಗಿರುವುದು ಗೊತ್ತೇ ಇದೆ. ಪ್ರಶಸ್ತಿಗೆ ನಾಮಿನೇಟ್ ಆಗಿರುವ ಹಾಡು ಆಸ್ಕರ್ ವೇದಿಕೆಯಲ್ಲಿ ಪ್ರದರ್ಶನವಾಗಲಿದೆ.
ಹಾಡನ್ನು ಹಾಡಿರುವ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಇಬ್ಬರು ಆಸ್ಕರ್ ವೇದಿಕೆಯಲ್ಲಿ ʼನಾಟು ನಾಟುʼ ಹಾಡನ್ನು ಹಾಡಿ ಹಾಲಿವುಡ್ ಸೆಲೆಬ್ರಿಟಿಗಳನ್ನು ರಂಜಿಸಲಿದ್ದಾರೆ. ಪ್ರದರ್ಶನಕ್ಕೆ ಈಗಾಗಲೇ ಭರ್ಜರಿ ಅಭ್ಯಾಸ ನಡೆಯುತ್ತಿದೆ ಎಂದು ಸಂಗೀತ ಸಂಯೋಜಕ ಎಂಎಂ ಕೀರವಾಣಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ಮತ್ತೆ ಏರಿತು ಗ್ಯಾಸ್ ಸಿಲಿಂಡರ್ ಬೆಲೆ; ನಿಮ್ಮ ನಗರದಲ್ಲಿ ಬೆಲೆ ಎಷ್ಟಿದೆ?
Related Articles
ಈ ಬಗ್ಗೆ ಅಕಾಡೆಮಿ ಅಧಿಕೃತ ಪೇಜ್ ಕೂಡ ಟ್ವಿಟರ್ ನಲ್ಲಿ ಮಾಹಿತಿಯನ್ನು ಕೊಟ್ಟಿದೆ.
ಇದರೊಂದಿಗೆ ರಾಮ್ ಚರಣ್, ಜೂ.ಎನ್ ಟಿಆರ್ ಇಬ್ಬರೂ ಜೊತೆಯಾಗಿ ʼನಾಟು ನಾಟುʼ ಹಾಡಿಗೆ ಹೆಜ್ಜೆ ಹಾಕುತ್ತಾರ? ಎನ್ನುವುದರ ಬಗ್ಗೆ ಕುತೂಹಲ ಹುಟ್ಟಿದೆ. ಲೈವ್ ಪರ್ಫಾರ್ಮೆನ್ಸ್ ಇರಲಿದ್ದು , ಇದರೊಂದಿಗೆ ಇಬ್ಬರು ಸ್ಟಾರ್ಸ್ ಗಳೂ ಹೆಜ್ಜೆ ಹಾಕಿದರೆ ಮನರಂಜನೆ ಡಬಲ್ ಆಗಿರುತ್ತದೆ. ನಾವಿ ಇಬ್ಬರ ಡ್ಯಾನ್ಸ್ ನೋಡಲು ಕಾಯುತ್ತಿದ್ದೇವೆ ಎನ್ನುವುದು ಫ್ಯಾನ್ಸ್ ಗಳ ಮಾತು.
ನಮಗೆ ಪ್ರಶಂಸೆ ಸಿಗುವ ಯಾವುದೇ ಸ್ಥಳದಲ್ಲಾದರೂ ನಾವು ʼನಾಟು ನಾಟುʼ ಹಾಡಿಗೆ ಹೆಜ್ಜೆ ಹಾಕಲು ರೆಡಿ. ಅವಕಾಶ ಸಿಕ್ಕರೆ ಖಂಡಿತ ನಾವು ಪ್ರೇಕ್ಷಕರನ್ನು ರಂಜಿಸಲು ಸಿದ್ದರಿದ್ದೇವೆ. ಆಸ್ಕರ್ ವೇದಿಕೆಯಲ್ಲಿ ಇಡೀ ನೃತ್ಯವನ್ನು ಮಾಡುವುದು ಕಷ್ಟ, ಅದಕ್ಕಾಗಿ ತುಂಬಾ ಎನರ್ಜಿ ಬೇಕಾಗುತ್ತದೆ. ಹೂಕ್ ಸ್ಟೆಪ್ ಮಾಡಲು ಏನು ಸಮಸ್ಯೆಯಿಲ್ಲ ಎಂದು ಸಂದರ್ಶನವೊಂದರಲ್ಲಿ ರಾಮ್ ಚರಣ್ ಹೇಳಿದ್ದಾರೆ.
ಸದ್ಯ ರಾಮ್ ಚರಣ್ ಅಮೆರಿಕಾದಲ್ಲೇ ಇದ್ದಾರೆ. ಆದರೆ ಜೂ.ಎನ್.ಟಿಆರ್ ಭಾರತದಲ್ಲಿ ಇದ್ದಾರೆ. ಕೆಲ ದಿನಗಳ ಬಳಿಕ ಅಮೆರಿಕಾಕ್ಕೆ ಪಯಣ ಬೆಳಸಲಿದ್ದಾರೆ. ʼನಾಟು ನಾಟುʼ ಹಾಡಿಗೆ ಆಸ್ಕರ್ ವೇದಿಕೆಯಲ್ಲಿ ರಾಮ್ ಚರಣ್ , ಜೂ.ಎನ್ ಟಿಆರ್ ಹೆಜ್ಜೆ ಹಾಕ್ತಾರ ಎನ್ನುವುದರ ಬಗ್ಗೆ ಸ್ಪಷ್ಟನೆ ಸಿಗಬೇಕಿದೆ.