Advertisement

ʼಆರ್‌ ಆರ್‌ ಆರ್‌ʼಗೆ  ʼಆಸ್ಕರ್ʼ ಬಂದದ್ದು ನನ್ನಿಂದಲೇ.. ಅಜಯ್‌ ದೇವಗನ್‌ ಮಾತು ವೈರಲ್

10:20 AM Mar 25, 2023 | Team Udayavani |

ಮುಂಬಯಿ: ಎಸ್‌ ಎಸ್‌ ರಾಜಮೌಳಿ ಅವರ ʼಆರ್‌ ಆರ್‌ ಆರ್‌ʼ ಆಸ್ಕರ್‌ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದೆ. ಬೆಸ್ಟ್‌ ಒರಿಜಿನಲ್‌ ಹಾಡು ವಿಭಾಗದಲ್ಲಿ ʼನಾಟು ನಾಟುʼ ಆಸ್ಕರ್‌ ಪಡೆದುಕೊಂಡಿದ್ದು ಗೊತ್ತೇ ಇದೆ.

Advertisement

95ನೇ ಅಕಾಡೆಮಿ ವೇದಿಕೆಯಲ್ಲಿ ʼನಾಟು ನಾಟುʼ ಪ್ರದರ್ಶನಗೊಂಡಿತ್ತು. ʼಆರ್‌ ಆರ್‌ ಆರ್‌ʼ ಹತ್ತಾರು ದಾಖಲೆಗಳನ್ನು ಬರೆದಿದೆ. ದೇಶ-ವಿದೇಶದಲ್ಲಿ ʼನಾಟು ನಾಟುʼ ಹಾಡು ಮೋಡಿ ಮಾಡಿದೆ. ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನದ ಹಾಡನ್ನು ಚಂದ್ರಬೋಸ್ ಅವರು ಬರೆದಿದ್ದಾರೆ.

ʼನಾಟು ನಾಟುʼ ಹಾಡಿಗೆ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್, ಗೋಲ್ಡನ್ ಗ್ಲೋಬ್,  ಹಾಲಿವುಡ್ ಮ್ಯೂಸಿಕ್ ಇನ್ ಮಿಡಿಯಾ ಅವಾರ್ಡ್ಸ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಕೂಡ ಲಭಿಸಿದೆ.

ಇದನ್ನೂ ಓದಿ: ಕರಾವಳಿ ಪಡೆಯಲು ಕೈ ಕಸರತ್ತು; ಹಲವು ಹೊಸಮುಖಗಳಿಗೆ ಮಣೆ ಹಾಕಿದ ಕಾಂಗ್ರೆಸ್

ʼಆರ್‌ ಆರ್‌ ಆರ್‌ʼ ಸಿನಿಮಾದಲ್ಲಿ ನಟಿಸಿರುವ ಅಜಯ್‌ ದೇವಗನ್‌ ʼನಾಟು ನಾಟುʼ ಹಾಡಿಗೆ ಆಸ್ಕರ್‌ ಬಂದ ಬಗ್ಗೆ ಮಾತನಾಡಿದ್ದೀಗ ವೈರಲ್‌ ಆಗಿದೆ. ಹಿಂದಿಯ ಜನಪ್ರಿಯ ಕಾರ್ಯಕ್ರಮ ʼ ಕಪಿಲ್ ಶರ್ಮಾ ಶೋʼ ನಲ್ಲಿ ʼಭೋಲಾ’ ಸಿನಿಮಾದ ಪ್ರಮೋಷನ್‌ ವೇಳೆ ʼಆರ್‌ ಆರ್‌ ಆರ್‌ʼ ತಂಡಕ್ಕೆ ಆಸ್ಕರ್‌  ಬಂದಿದೆ ಏನು ಹೇಳುತ್ತೀರಿ ಎಂದು ಕಪಿಲ್‌ ಕೇಳಿದ್ದಾರೆ.

Advertisement

ಇದಕ್ಕೆ ಅಜಯ್‌ ದೇವಗನ್‌ ಹಾಸ್ಯವಾಗಿಯೇ ʼʼನಾಟು ನಾಟು ಹಾಡಿಗೆ ಆಸ್ಕರ್‌ ಬಂದದ್ದು ನನ್ನಿಂದ, ನಾನು ಆ ಹಾಡಿನಲ್ಲಿ ಡ್ಯಾನ್ಸ್‌ ಮಾಡಿದ್ದರೆ ಏನಾಗುತ್ತಿತ್ತು” ಎಂದಿದ್ದಾರೆ. ಇದಕ್ಕೆ ಪ್ರತಿಯೊಬ್ಬರು ನಕ್ಕಿದ್ದಾರೆ. ಸದ್ಯ ಈ ಕಾರ್ಯಕ್ರಮದ ಪ್ರೋಮೋ ಮಾತ್ರ ರಿಲೀಸ್‌ ಆಗಿದೆ.

ಅಜಯ್‌ ದೇವಗನ್‌, ಆಲಿಯಾ ಭಟ್‌ ಕೂಡ ʼಆರ್‌ ಆರ್‌ ಆರ್‌ʼ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next