ಸ್ಟಾರ್ ನಿರ್ದೇಶಕ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನೆಮಾ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆಲ್ಲುವ ಮೂಲಕ ವಿಶ್ವದೆಲ್ಲೆಡೆ ಸದ್ದು ಮಾಡುತ್ತಿರುವಾಗಲೇ ಚಿತ್ರ ತಂಡಕ್ಕೆ ಮತ್ತೂಂದು ಪ್ರಶಸ್ತಿಯ ಗರಿಯೇರಿದ್ದು, ಚಿತ್ರದ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಅವರಿಗೆ ಉತ್ತಮ ಸಂಗೀತಕ್ಕಾಗಿ “ಲಾಸ್ ಏಂಜಲೀಸ್ ಫಿಲ್ಮ್ ಕ್ರಿಟಿಕ್’ ಪ್ರಶಸ್ತಿ ಲಭಿಸಿದೆ.
Advertisement
ಇತ್ತೀಚೆಗಷ್ಟೇ ಸಿನೆಮಾದ ನಾಟು-ನಾಟು ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಲಭಿಸಿತ್ತು. ಭಾರತವನ್ನು ಪ್ರತಿನಿಧಿಸುವ ಹಂತಕ್ಕೆ ಏನನ್ನೋ ಮಾಡಿದ್ದೇನೆ ಎನ್ನುವ ತೃಪ್ತಿ ಇದೆ ಎಂದು ಕೀರವಾಣಿ ನುಡಿದಿದ್ದಾರೆ.