Advertisement

‘ಆರ್ ಆರ್ ಆರ್’ ಚಿತ್ರ ಬಿಡುಗಡೆ ಮುಂದೂಡಿಕೆಯಾಗಿಲ್ಲ: ರಾಜಮೌಳಿ ಸ್ಪಷ್ಟನೆ

03:49 PM Dec 30, 2021 | Team Udayavani |

ಜೂ.ಎನ್ ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಚಿತ್ರ ‘ಆರ್ ಆರ್ ಆರ್’ ಬಿಡುಗಡೆಗೂ ಮುನ್ನ ಭಾರೀ ಹವಾ ಸೃಷ್ಟಿಸಿದೆ. ಸ್ಟಾರ್ ಡೈರೆಕ್ಟರ್ ಎಸ್.ಎಸ್.ರಾಜಮೌಳಿ ನಿರ್ದೇಶನದ ಚಿತ್ರವು ಸುಮಾರು 6000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಜನವರಿ 7ರಂದು ತೆರೆ ಕಾಣುತ್ತಿದೆ. ಆದರೆ ಭಾರತದಲ್ಲಿ ಕೋವಿಡ್ ಸೋಂಕು ಸಂಖ್ಯೆ ಹೆಚ್ಚುತ್ತಿರುವ ಕಾರಣ ಆರ್ ಆರ್ ಆರ್ ಚಿತ್ರ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಇದೀಗ ನಿರ್ದೇಶಕ ರಾಜಮೌಳಿ ಅವರು ಈ ಸುದ್ದಿಗಳನ್ನು ಅಲ್ಲಗಳೆದಿದ್ದು, ನಿಗದಿಯಂತೆ ಜ.7ರಂದೇ ಚಿತ್ರ ಬಿಡುಗಡೆಯಾಗುತ್ತದೆ ಎಂದಿದ್ದಾರೆ.

Advertisement

ಬಾಲಿವುಡ್ ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಅವರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. “ಬ್ರೇಕಿಂಗ್ ನ್ಯೂಸ್.. ಆರ್ ಆರ್ ಆರ್ ಜ.7ರಂದೇ ಬರುತ್ತಿದೆ. ಎಸ್ ಎಸ್ ರಾಜಮೌಳಿ ಅವರೇ ನನ್ನ ಬಳಿ ಹೇಳಿದ್ದಾರೆ. ಚಿತ್ರ ಮುಂದೂಡಿಕೆಯಾಗಿಲ್ಲ” ಎಂದು ತರಣ್ ಆದರ್ಶ್ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:2021ರ ಹಿನ್ನೋಟ: ದೇಶದ ಪ್ರಮುಖ ಘಟನಾವಳಿ-ಲಕ್ಷದ್ವೀಪ ವಿವಾದ, ರಾವತ್ ದುರಂತ, ಹಿಂಸಾಚಾರ

ಕೋವಿಡ್ ವೈರಸ್ ಸಾಂಕ್ರಾಮಿಕದಿಂದಾಗಿ ಚಿತ್ರದ ನಿರ್ಮಾಣ ಮತ್ತು ಬಿಡುಗಡೆ ಹಲವಾರು ಬಾರಿ ವಿಳಂಬವಾಗಿತ್ತು. ನಿರ್ದೇಶಕ ರಾಜಮೌಳಿ, ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಗ್ರ್ಯಾಂಡ್ ರಿಲೀಸ್‌ಗೆ ಮುಂಚಿತವಾಗಿ ಅನೇಕ ನಗರಗಳಲ್ಲಿ ಚಿತ್ರದ ಪ್ರಚಾರವನ್ನು ನಡೆಸುತ್ತಿದ್ದಾರೆ.

Advertisement

ಆಂಧ್ರ ಪ್ರದೇಶದ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೋಮರಂ ಭೀಮ ಅವರನ್ನು ಆಧರಿಸಿದ ಕಾಲ್ಪನಿಕ ಕಥೆಯನ್ನು ಆರ್ ಆರ್ ಆರ್ ಮಾಡಲಾಗಿದೆ.

ರಾಮ್ ಚರಣ್ ಮತ್ತು ಜೂ.ಎನ್‌ಟಿಆರ್ ಜೊತೆಗೆ ಆರ್‌ಆರ್‌ಆರ್‌ ಚಿತ್ರದಲ್ಲಿ ಆಲಿಯಾ ಭಟ್, ಅಜಯ್ ದೇವಗನ್, ರೇ ಸ್ಟೀವನ್ಸನ್, ಒಲಿವಿಯಾ ಮೋರಿಸ್, ಅಲಿಸನ್ ಡೂಡಿ, ಸಮುದ್ರಕನಿ ಮತ್ತು ಶ್ರಿಯಾ ಸರನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರವು ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next