Advertisement

IPL;8ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ: ರಾಜಸ್ಥಾನ್ ಗೆ 184 ರನ್ ಗುರಿ

09:10 PM Apr 06, 2024 | Team Udayavani |

ಜೈಪುರ: ಇಲ್ಲಿನ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಶನಿವಾರ ನಡೆಯುತ್ತಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಐಪಿಎಲ್ ನ ತನ್ನ 8 ನೇ ಶತಕ ದಾಖಲಿಸಿದ್ದಾರೆ.

Advertisement

ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ವಿರಾಟ್ ಕೊಹ್ಲಿ 72 ಎಸೆತಗಳಲ್ಲಿ 113 ರನ್ ಗಳಿಸಿ ಅಜೇಯರಾಗಿ ಉಳಿದರು. 12 ಬೌಂಡರಿ ಮತ್ತು 4 ಸಿಕ್ಸರ್ ಅವರ ಇನ್ನಿಂಗ್ಸ್ ನಲ್ಲಿತ್ತು. ಕೊಹ್ಲಿ ಅವರ ಶತಕದ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 183 ರನ್ ಕಲೆ ಹಾಕಿತು. ಆರ್ ಸಿಬಿ ಬೌಲಿಂಗ್ ವಿಚಾರದಲ್ಲಿ ಹಿಂದುಳಿದಿರುವ ಕಾರಣ ರಾಜಸ್ಥಾನದ ಪಾಲಿಗೆ ಈ ಮೊತ್ತ ಅಷ್ಟು ದೊಡ್ಡ ಸವಾಲು ಆಗಿ ಪರಿಣಮಿಸದು ಎಂದು ಅಂದಾಜಿಸಲಾಗಿದೆ.

ಕೊಹ್ಲಿ ಅವರೊಂದಿಗೆ ಆರಂಭದಲ್ಲಿ ಉತ್ತಮ ಜತೆಯಾಟವಾಡಿದ ನಾಯಕ ಫಾಫ್ ಡು ಪ್ಲೆಸಿಸ್ 44 ರನ್ (33 ಎಸೆತ) ಗಳಿಸಿ ಔಟಾದರು. ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೆ ವೈಫಲ್ಯ ಅನುಭವಿಸಿ ಒಂದು ರನ್ ಗೆ ಮರಳಿದರು. ಸೌರವ್ ಚೌಹಾಣ್ 9 ರನ್ ಗಳಿಸಿ ಔಟಾದರು. ಯುಜ್ವೇಂದ್ರ ಚಹಾಲ್ 2 ವಿಕೆಟ್ ಕಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next