Advertisement

ರಾ.ರಾ ನಗರಕ್ಕೆ ಮತ್ತೆ ಮುನಿರತ್ನ

06:00 AM Jun 01, 2018 | |

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮುನಿರತ್ನ ಮತ್ತೂಮ್ಮೆ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಮುನಿರಾಜು ಗೌಡ ಅವರನ್ನು 25,492 ಮತಗಳ ಅಂತರದಿಂದ ಪರಾಭವಗೊಳಿಸುವ ಮೂಲಕ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮುನಿರತ್ನ ಗೆಲುವಿನಿಂದ ಕಾಂಗ್ರೆಸ್‌ ಬಲ 78ಕ್ಕೆ ಏರಿದೆ. ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ನಿಧನದಿಂದ ಕಾಂಗ್ರೆಸ್‌ ಬಲ 77 ಆಗಿತ್ತು.


ಬಿಜೆಪಿಯ ಮುನಿರಾಜು ಗೌಡ 82,572 ಮತಗಳು ಹಾಗೂ ಜೆಡಿಎಸ್‌ನ ಜಿ.ಎಚ್‌.ರಾಮಚಂದ್ರ ಅವರು 60,360 ಮತಗಳನ್ನು ಪಡೆದಿದ್ದಾರೆ. ನಟ ಹುಚ್ಚ ವೆಂಕಟ್‌ 764 ಮತ ಗಳಿಸಿದರೆ, ನೋಟಾದಡಿ 2724 ಮತಗಳು ಚಲಾವಣೆಯಾಗಿವೆ. ಆರಂಭಿಕ ಸುತ್ತಿನಿಂದ 18ನೇ ಸುತ್ತಿನವರೆಗೆ ನಿರಂತರವಾಗಿ ಮುನ್ನಡೆ ಕಾಯ್ದುಕೊಂಡ ಮುನಿರತ್ನ ಅವರು ಒಟ್ಟು 1,08,064 ಮತ ಗಳಿಸಿ ಭರ್ಜರಿ ಜಯ ದಾಖಲಿಸಿದರು. ಕ್ಷೇತ್ರದಲ್ಲಿ 10,000ಕ್ಕೂ ಹೆಚ್ಚು ಮತದಾರರ ಗುರುತಿನ ಚೀಟಿ ಪತ್ತೆಯಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮೇ 11ರಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಮತದಾನವನ್ನು ಮೇ 28ಕ್ಕೆ ಮುಂದೂಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next