ಮುಂಬೈ:ಇತ್ತೀಚೆಗೆ ಜೈಪುರ-ಮುಂಬೈ ರೈಲಿನಲ್ಲಿ ರೈಲ್ವೆಯ ಹಿರಿಯ ಅಧಿಕಾರಿ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಆರ್‌ಪಿಎಫ್ ಕಾನ್‌ಸ್ಟೇಬಲ್ ಚೇತನ್ ಸಿಂಗ್ ವಿರುದ್ಧ ಈಗ “ಧರ್ಮದ ಆಧಾರದಲ್ಲಿ ಎರಡು ಸಮುದಾಯಗಳ ನಡುವೆ ದ್ವೇಷ ಹಬ್ಬಿದ’ ಆರೋಪವನ್ನೂ ಹೊರಿಸಲಾಗಿದೆ.
ಆರೋಪಿ ವಿರುದ್ಧ ಸಲ್ಲಿಸಲಾದ ಎಫ್ಐಆರ್‌ನಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ. ಮೊದಲಿಗೆ ಸಬ್ ಇನ್‌ಸ್ಪೆಕ್ಟರ್ ಟೀಕಾ ರಾಮ್ ಮೀನಾರನ್ನು ಕೊಂದಿದ್ದ ಚೇತನ್ ಸಿಂಗ್, ನಂತರ ಮೂವರು ಮುಸ್ಲಿಂ ಪ್ರಯಾಣಿಕರಿಗೆ ಗುಂಡು ಹಾರಿಸಿದ್ದರು.
ರಕ್ತಸಿಕ್ತ ದೇಹಗಳ ಬಳಿ ನಿಂತು, “ಹಿಂದುಸ್ಥಾನದಲ್ಲಿ ಉಳಿಸಬೇಕೆಂದರೆ, ವೋಟ್ ಮಾಡಬೇಕೆಂದರೆ, ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಅವರಿಗೆ ಮಾಡಿ’ ಎಂದು ಹೇಳುತ್ತಿದ್ದ ವಿಡಿಯೋವನ್ನು ಪ್ರತ್ಯಕ್ಷದರ್ಶಿಗಳು ಸೆರೆಹಿಡಿದಿದ್ದರು.
ಈ ವಿಡಿಯೋ ಆಧಾರದಲ್ಲಿ ಎಫ್ಐಆರ್‌ನಲ್ಲಿ ಹೊಸ ಸೆಕ್ಷನ್‌ನಡಿ ಆರೋಪ ಹೊರಿಸಲಾಗಿದೆ.