Advertisement

ವನಿತಾ ಪ್ರೀಮಿಯರ್ ಲೀಗ್: ಡೆಲ್ಲಿಯ ಆಲ್‌ ರೌಂಡ್‌ ಆಟಕ್ಕೆ ಅಬ್ಬರಿಸದ ಆರ್‌ ಸಿಬಿ

06:48 PM Mar 05, 2023 | Team Udayavani |

ಮುಂಬಯಿ: ವನಿತಾ ಪ್ರೀಮಿಯರ್ ಲೀಗ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಮುಖಾಮುಖಿಯಲ್ಲಿ  ಸ್ಮೃತಿ ಮಂಧನಾ ನಾಯಕತ್ವದ ಆರ್‌ ಸಿಬಿ ತಂಡ ಡೆಲ್ಲಿ ತಂಡದ ಆಲ್‌ ರೌಂಡ್‌  ಆಟಕ್ಕೆ ಶರಣಾಗಿದೆ. 60 ರನ್‌ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ಗೆದ್ದುಕೊಂಡಿದೆ.

Advertisement

ಟಾಸ್ ಗೆದ್ದ ಆರ್ ಸಿಬಿ ನಾಯಕಿ ಸ್ಮೃತಿ ಮಂಧನಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ನಿರೀಕ್ಷೆಯಂತೆ ಆರ್‌ ಸಿಬಿ ಬೌಲಿಂಗ್‌ ಮ್ಯಾಜಿಕ್‌ ವರ್ಕೌಟ್‌ ಆಗಿಲ್ಲ. ಆರಂಭದಿಂದಲೇ ನಾಯಕಿ ಮೆಗ್ ಲ್ಯಾನಿಂಗ್‌ ( 72 ರನ್)  14 ಬೌಂಡರಿಗಳನ್ನು ಸಿಡಿಸಿ ಅಬ್ಬರಿಸಿದರು. ಶಫಾಲಿ ವರ್ಮಾ, ಮೆಗ್ ಲ್ಯಾನಿಂಗ್ ಭರ್ಜರಿ ಆಟದಿಂದ ಬೌಲರ್‌ ಗಳ ಬೆವರು ಇಳಿಸಿದರು. 10 ಬೌಂಡರಿ,4 ಸಿಕ್ಸರ್‌ ದಾಖಲಿಸಿ 84 ರನ್‌ ಗಳಿಸಿ ಔಟ್‌ ಆದರು.

ಆರಂಭಿಕರ ಎರಡು ವಿಕೆಟ್‌ ಕಳೆದುಕೊಂಡ ಬಳಿಕ ಮರಿಝನ್ನೆ ಕಪ್, ಜೆಮಿಮಾ ರಾಡ್ರಿಗಸ್ ಬಿರುಸಿನ ಆಟ ಮುಂದುವರೆಸಿದರು. ಮರಿಝನ್ನೆ ಕಪ್ 17 ಎಸೆತಗಳಲ್ಲಿ 3 ಸಿಕ್ಸರ್‌, 3 ಬೌಂಡರಿಯೊಂದಿಗೆ 39 ರನ್‌ ಗಳಿಸಿದರು.

ಅಂತಿಮವಾಗಿ 20 ಓವರ್‌ ನಲ್ಲಿ 223 ರನ್‌ 2 ವಿಕೆಟ್‌ ಕಳೆದುಕೊಂಡು 224 ರ ಬೃಹತ್‌ ಗುರಿಯನ್ನು ಬಿಟ್ಟು ಕೊಟ್ಟಿತು.

ಗುರಿಯನ್ನು ಬೆನ್ನಟ್ಟಿದ ಆರ್ ಸಿಬಿ ತಂಡ ಆರಂಭದಲ್ಲಿ ವಿಕೆಟ್‌ ಕಳೆದುಕೊಳ್ಳದೆ ಆಟವನ್ನಾಡಿದರು. ಆಲಿಸ್ ಕ್ಯಾಪ್ಸೆ ಅವರ ಎಸೆತಕ್ಕೆ ಸೋಫಿ ಡಿವೈನ್ ( 14 ರನ್‌ ) ಕ್ಯಾಚ್‌ ಕೊಟ್ಟು ಮೊದಲು ಪೆವಿಲಿಯನ್‌ ಕಡೆ ಸಾಗಿದರು. ಉತ್ತಮ ಆರಂಭ ಪಡೆದುಕೊಂಡಿದ್ದ ನಾಯಕಿ ಸ್ಮೃತಿ ಆಲಿಸ್ ಕ್ಯಾಪ್ಸೆ ಎಸೆತಕ್ಕೆ ಸುಲಭ ಸಾಧ್ಯತೆಯ ಕ್ಯಾಚ್‌ ಕೊಟ್ಟು ತಂಡಕ್ಕೆ 35 ರನ್‌ ಕೊಡುಗೆ ಕೊಟ್ಟು ಔಟಾದರು.

Advertisement

ಭರವಸೆಯಿಂದ ಬ್ಯಾಟ್‌ ಬೀಸಲು ಆರಂಭಿಸಿದ ಎಲ್ಲಿಸ್ ಪೆರ್ರಿ (31 ರನ್‌ ) ತಾರಾ ನಾರ್ರಿಸ್ ಅವರ ಎಸೆತಕ್ಕೆ ಔಟಾದರು.  ದಿಶಾ ಕಸಟ್ (9 ರನ್) ರಿಚಾ ಘೋಷ್‌ (2 ರನ್‌ ) ನಿರೀಕ್ಷಿತ ಮಟ್ಟದಲ್ಲಿ ಬ್ಯಾಟ್‌ ಬೀಸಲಿಲ್ಲ.

ಅಂತಿಮವಾಗಿ 20 ಓವರ್‌ ನಲ್ಲಿ ಆರ್‌ ಸಿಬಿ 163 ರನ್‌ ಗೆ 8 ವಿಕೆಟ್‌ ಕಳೆದುಕೊಂಡು ಡೆಲ್ಲಿಗೆ ಶರಣಾಯಿತು.

ಡೆಲ್ಲಿ ತಂಡದ ಪರವಾಗಿ 4 ಓವರ್‌ ನಲ್ಲಿ 29 ರನ್‌ ಕೊಟ್ಟು 5 ಪ್ರಮುಖ ವಿಕೆಟ್‌ ಗಳನ್ನು ಪಡೆದು ತಂಡದ ಗೆಲುವಿಗೆ ನೆರವಾದರು.

 

Advertisement

Udayavani is now on Telegram. Click here to join our channel and stay updated with the latest news.

Next