ಬೆಂಗಳೂರು : ಗುಜರಾತ್ ಟೈಟಾನ್ಸ್ ಎದುರಿನ ನಿರ್ಣಾಯಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ ಅವರ ಅತ್ಯಮೋಘ ಶತಕದ ನೆರವಿನಿಂದ 197 ರನ್ ಕಲೆ ಹಾಕಿದೆ.
ಭಾರಿ ಮಳೆಯಿಂದಾಗಿ ಟಾಸ್ ಪ್ರಕ್ರಿಯೆಯಲ್ಲಿ ಕೊಂಚ ವಿಳಂಬವಾಯಿತು.ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸಮಯೋಚಿತ ಅತ್ಯಮೋಘ ಆಟವಾಡಿದ ಕೊಹ್ಲಿ61 ಎಸೆತಗಳಲ್ಲಿ 101 ರನ್ ಗಳಿಸಿ ಮತ್ತೊಂದು ದಾಖಲೆ ಬರೆದರು. 13 ಬೌಂಡರಿ ಮತ್ತು 1 ಸಿಕ್ಸರ್ ಅವರ ಇನ್ನಿಂಗ್ಸ್ ನಲ್ಲಿ ಒಳಗೊಂಡಿತ್ತು. ಕೊಹ್ಲಿಗೆ ಸಾಥ್ ನೀಡಿದ ಫಾಫ್ ಡು ಪ್ಲೆಸಿಸ್ 28, ಗ್ಲೆನ್ ಮ್ಯಾಕ್ಸ್‌ವೆಲ್ 11,ಮಹಿಪಾಲ್ ಲೊಮ್ರೋರ್ 1, ಮೈಕೆಲ್ ಬ್ರೇಸ್‌ವೆಲ್ 26 ಮತ್ತು ಅನುಜ್ ರಾವತ್ ಔಟಾಗದೆ 23 ರನ್ ಗಳಿಸಿದರು. ದಿನೇಶ್ ಕಾರ್ತಿಕ್ ಶೂನ್ಯಕ್ಕೆ ಔಟಾದರು.
ದಾಖಲೆ ಪತನ
ಐಪಿಎಲ್ ನಲ್ಲಿ 7 ನೇ ಶತಕವನ್ನು ಸಿಡಿಸಿದ ಕೊಹ್ಲಿ ಅವರು ಕ್ರಿಸ್ ಗೇಲ್ ಅವರ 6 ಶತಕಗಳ ದಾಖಲೆ ಮುರಿದರು.
ಜೋಸ್ ಬಟ್ಲರ್ 5 ಶತಕ ಸಿಡಿಸಿದ್ದಾರೆ.
Related Articles
ಐಪಿಎಲ್ ನಲ್ಲಿ ಬ್ಯಾಕ್ ಟು ಬ್ಯಾಕ್ ಐಪಿಎಲ್ ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳು, ಶಿಖರ್ ಧವನ್ (DC, 2020), ಜೋಸ್ ಬಟ್ಲರ್ (RR, 2022) ಮತ್ತು ಈ ಬಾರಿ ವಿರಾಟ್ ಕೊಹ್ಲಿ ಅವರಾಗಿದ್ದಾರೆ.
ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡ ಆರ್ ಸಿಬಿ ಗೆ ಇದೆ. ಆರ್ ಸಿಬಿ +0.180 ರನ್ ರೇಟ್ ನೊಂದಿಗೆ 14 ಅಂಕ ಹೊಂದಿದೆ. ಮುಂಬೈ ಇಂಡಿಯನ್ಸ್ -0.044 ರನ್ ರೇಟ್ ನೊಂದಿಗೆ 16 ಅಂಕ ಹೊಂದಿದೆ.