ಆದ್ಯವೀರ್ ನರಸಿಂಹ ರಾಜ ಒಡೆಯರ್ ಎಂದು ಹೆಸರಿಡಲಾಗಿದೆ.
Advertisement
ಬೆಂಗಳೂರು ಅರಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ರಾಜಮಾತೆ ಪ್ರಮೋದಾ ದೇವಿಯವರೇ ಮುಂದೆ ನಿಂತು ಮೊಮ್ಮಗನಿಗೆ ನಾಮಕರಣ ಕಾರ್ಯ ನೆರವೇರಿಸಿದರು. ನಂತರ ಮೊಮ್ಮಗನನ್ನು ಮಡಿಲಲ್ಲಿ ಮಲಗಿಸಿಕೊಂಡು ಮುದ್ದಾಡಿದರಲ್ಲದೆ, ಮಗುವಿನ ಭವಿಷ್ಯ ಉತ್ತಮವಾಗಿರಲಿ ಎಂದು ಹಾರೈಸಿದರು.
ಆಹ್ವಾನಿಸಲಾಗಿತ್ತು. ಸಮಾರಂಭದಲ್ಲಿ ಭಾಗಿಯಾಗಿದ್ದವರು ಆದ್ಯವೀರ್ ನರಸಿಂಹರಾಜ ಒಡೆಯರ್ ರಾಜ ಮನೆತನಕ್ಕೆ ಮತ್ತಷ್ಟು ಕೀರ್ತಿ ತರಲಿ ಎಂದು ಶುಭ ಕೋರಿದರು. ನಾಮಕರಣ ಸಮಾರಂಭದ ಹಿನ್ನೆಲೆಯಲ್ಲಿ ಇಲ್ಲಿನ ಸಿಬ್ಬಂದಿ ಅರಮನೆಯನ್ನು ಸಿಂಗಾರಗೊಳಿಸಿದ್ದರು. ಅರಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿ ಸಂಭ್ರಮ ಕಳೆಗಟ್ಟಿತ್ತು. ನಾಮಕರಣದ ಸುಳಿವನ್ನು ಯಾರಿಗೂ ಬಿಟ್ಟುಕೊಡದ ರಾಜಮನೆತನದವರು ಮೈಸೂರಿನಿಂದಲೇ ಎಲ್ಲ ಸಿದಟಛಿತೆಗಳನ್ನು ನೋಡಿಕೊಂಡಿದ್ದಾರೆ ಎನ್ನಲಾಗಿದೆ.
Related Articles
Advertisement