Advertisement
ಕುಷ್ಟಗಿ ಸಿಪಿಐ ಕಛೇರಿಯ ಆವರಣದಲ್ಲಿ ಕುಷ್ಟಗಿ, ತಾವರಗೇರಾ, ಹನುಮಸಾಗರ ಪೊಲೀಸ ಠಾಣಾ ವ್ಯಾಪ್ತಿಯ ನೂರಾರು ರೌಡಿಶೀಟರ್ ಗಳ ಪರೇಡ್ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ವಯಸ್ಸಾದವವರಿಗೆ ನಡತೆ ಮುಖ್ಯ ವಯಸ್ಸಲ್ಲ ಎಂದ ಅವರು, ಸಹಜವಾಗಿ ವಯಸ್ಸು ಜಾಸ್ತಿಯಾದವರ ಚಟುವಟಿಕೆ ಕಡಿಮೆಯಾಗಿರುತ್ತದೆ. ಕೆಲವು ಪ್ರಕರಣದಲ್ಲಿ ವಯಸ್ಸಾದವರು ಅಪರಾಧ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದು, ಊರಲ್ಲಿ ತೊಂದರೆ ನೀಡುವ ಸ್ವಭಾವದವರಾಗಿದ್ದು ಅಂತವರಿಗೆ ಮುಲಾಜು ಇಲ್ಲ ಅಂತವರ ದಾಖಲೆ ಮುಂದುವರೆಸುತ್ತೇವೆ. ಅಂತವರ ಮೇಲೆ ಪೊಲೀಸರು ಸದಾ ನಿಗಾವಹಿಸಿರುತ್ತಾರೆ. ಯುವಕರಾದವರು ಬುದ್ದಿ ತಿದ್ದಿಕೊಂಡು ತಮ್ಮ ನಡತೆ ಸುಧಾರಿಸಿಕೊಂಡಿದ್ದರೆ ಪರಿಶೀಲಿಸಿ ಪಟ್ಟಿಯನ್ನು ಕ್ಲೋಸ್ ಮಾಡಲಾಗುತ್ತಿದೆ ಎಂದರು.
Related Articles
Advertisement
ಕೊಪ್ಪಳ ಜಿಲ್ಲೆಯಲ್ಲಿ 1,400 ರೌಡಿ ಅಸಾಮಿಗಳಿದ್ದರು ಕಳೆದ ಮೂರು ತಿಂಗಳ ಹಿಂದೆ ಇದೇ ರೀತಿಯ ಪರೇಡ್ ನಲ್ಲಿ ಸನ್ನಡತೆ ಆಧಾರಿಸಿ, 350 ರೌಡಿ ಶೀಟರ್ ಪಟ್ಟಿಯಿಂದ ತೆಗೆಯಲಾಗಿದೆ. ಈಗ ವರ್ಷಾಂತ್ಯವಾಗಿದ್ದು, ಎರಡನೇ ಹಂತದ ಪರೇಡ್ ನಲ್ಲಿ ಸ್ಥಿತಿಗತಿ ಅರ್ಥೈಸಲು ಸಾಧ್ಯವಾಗುತ್ತಿದೆ ತಮ್ಮ ವರ್ತನೆಯ ಬದಲಿಸಿಕೊಂಡವರಿದ್ದು, ಈ ಪಟ್ಟಿಯಲ್ಲಿದ್ದರೆ ಸರ್ಕಾರಿ ನೌಕರಿಯಲ್ಲಿ ತೊಂದರೆಯಾಗುವ ಸಾದ್ಯತೆಗಳಿವೆ. ಇನ್ನು ಯೌವ್ವನದಲ್ಲಿ ಅಪರಾಧ ಕೃತ್ಯ ಮಾಡಿದವರಾಗಿರುತ್ತಾರೆ. ಕೆಲವರು ಪರಿಸ್ಥಿತಿ ಪ್ರಭಾವದಿಂದ ಅಪರಾಧ ಕೃತ್ಯವೆಸಗಿದವರಾಗಿರುತ್ತಾರೆ ಅಂತವರು ಉತ್ತಮ ನಾಗರೀಕರಾಗಿರಲು ಇದೊಂದು ಅವಕಾಶವಾಗಿರುತ್ತದೆ ಎಂದರು.
ವ್ಯವಸ್ಥಿತವಾಗಿ ನಡೆಯುತ್ತಿದ್ದ ಇಸ್ಪೇಟ್ ಕ್ಲಬ್ ಗಳನ್ನು ಬಂದ್ ಮಾಡಲಾಗಿದ್ದು, ಸಮಸ್ತವಾಗಿ ಶೂನ್ಯ ಅಪರಾದ ಎಂದು ಹೇಳು ಸಾದ್ಯವಿಲ್ಲ ಸಹಜವಾಗಿ ಅಪರಾಧ ಚಟುವಟಿಕೆಗಳು ಇದ್ದೇ ಇರುತ್ತವೆ ಆದರೂ ಕೂಡ ನಮ್ಮ ಅಧಿಕಾರಿಗಳು ತಹಬಂದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಒಳ್ಳೇ.. ಸಾಧನೆ ಮಾಡಿದ್ದೀಯ ಬಿಡು…ಪರೇಡ್ ನಲ್ಲಿಪ್ರತಿಯೊಬ್ಬರು ವೈಯಕ್ತಿಕ ಮಾಹಿತಿ ಕೇಳಿದ ಎಸ್ಪಿ ಟಿ. ಶ್ರೀಧರ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಖಡಕ್ ವಾರ್ನಿಂಗ್ ನೀಡಿದರು. ಪರೇಡ್ ವೇಳೆ ರೇಪಿಸ್ಟ್ ವಿಚಾರಣೆ ಸಂಧರ್ಭದಲ್ಲಿ ರೇಪಿಸ್ಟ್ ಮದುವೆ ಮಾಡಿಕೊಂಡಿರುವುದಾಗಿ ತಿಳಿಸಿದಾಗ ಒಳ್ಳೆಯ ಸಾಧನೆ ಮಾಡಿದ್ದೀಯ ಬಿಡು ಎಂದು ಹಾಸ್ಯ ಚಟಾಕಿ ಹಾರಿಸಿದರು. ರೌಡಿಶೀಟರ್, ಮಟ್ಕಾ ಬುಕ್ಕಿಗಳನ್ನು ತರಾಟೆಗೆ ತೆಗೆದುಕೊಂಡರು. ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸೈ ತಿಮ್ಮಣ್ಣ ನಾಯಕ್, ತಾವರಗೇರಾ ಪಿಎಸೈ ವೈಶಾಲಿ ಝಳಕಿ, ಕ್ರೈಂ ಪಿಎಸೈ ಮಾನಪ್ಪ ವಾಲ್ಮೀಕಿ ಮತ್ತೀತರಿದ್ದರು.