Advertisement

ರೌಡಿ ಶೀಟರ್‌ ಕುಣಿಗಲ್‌ ಗಿರಿ ಪೊಲೀಸ್‌ ವಶಕ್ಕೆ

09:16 AM Jul 17, 2019 | keerthan |

ಬೆಂಗಳೂರು: ಕುಖ್ಯಾತ ರೌಡಿ ಕುಣಿಗಲ್‌ ಗಿರಿಯನ್ನು ಸೋಮವಾರ ತಡರಾತ್ರಿ ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಕೈಗೆ ಸಿಗದೆ ಓಡಾಡಿ ಕೊಂಡಿದ್ದ ಕುಣಿಗಲ್‌ ರವಿ ಕೋರಮಂಗಲದ ಪಬ್‌ ಒಂದರಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಮಾಹಿತಿ ತಿಳಿದ ಪೊಲೀಸರು ರವಿಯನ್ನು ವಶಕ್ಕೆ ಪಡೆದಿದ್ದಾರೆ.

Advertisement

ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ಕುಣಿಗಲ್‌ ರವಿ, ಇತ್ತೀಚೆಗೆ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿದ್ದ. ನಂತರ ಜಾಮೀನಿನ ಮೇಲೆ ಹೊರ ಬಂದಿದ್ದ ಆತ ಮತ್ತೆ ತನ್ನ ದಂಧೆಯನ್ನು ಮುಂದುವರಿಸಿದ್ದ. ಇದೇ ಕಾರಣಕ್ಕೆ ಹಲವಾರು ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.

ಒಂದು ತಿಂಗಳ ಹಿಂದೆ ಅಂದರೆ ಜೂನ್‌ 16ರಂದು ರೌಡಿ ರವಿ ತನ್ನ ಬರ್ತ್‌ ಡೇ ಪಾರ್ಟಿಯನ್ನು ಪಬ್ ಒಂದರಲ್ಲಿ ಆಯೋಜನೆ ಮಾಡಿದ್ದ. ಅಂದು ಆತನ ಸ್ನೇಹಿತರು ಮತ್ತು ಸಹಚರರು ಸುಮಾರು 266 ನೃತ್ಯಗಾತಿಯರೂ ಕೂಡಾ ಅಂದು ಪಾರ್ಟಿಯಲ್ಲಿ ಸೇರಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಸಿಸಿಬಿ ಪೊಲೀಸರು ಎಲ್ಲಾ ಯುವತಿಯರನ್ನು ರಕ್ಷಿಸಿದ್ದರು. ಆದರೆ ಕುಣಿಗಲ್‌ ರವಿ ಅಲ್ಲಿ ಕೂಡಾ ತಪ್ಪಿಸಿಕೊಂಡಿದ್ದ.

Advertisement

Udayavani is now on Telegram. Click here to join our channel and stay updated with the latest news.

Next