ಮಂಗಳೂರು: ಜಾನುವಾರುಸಾಗಿಸಲಾಗುತ್ತಿದೆ ಎಂದು ತಪ್ಪಾಗಿ ಭಾವಿಸಿ ಮಾವಿನ ಹಣ್ಣು ಸಾಗಾಟ ವಾಹನ ತಡೆದು ಅದರಲ್ಲಿದ್ದವರಿಗೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ರೌಡಿ ಶೀಟರ್ ಭವಿತ್‌ರಾಜ್(35)ನನ್ನು ಬಂಧಿಸಲು ತೆರಳಿದ್ದಪೊಲೀಸರ ಮೇಲೆ ಆತ ಹಲ್ಲೆ ನಡೆಸಿದ್ದು, ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿರುವ ಘಟನೆ ಮಂಗಳವಾರ ಬೆಳಗ್ಗೆ ಅಡ್ಯಾರ್‌ನ ದಡ್ಡೊಳಿಗೆಯಲ್ಲಿ ನಡೆದಿದೆ.
ಕಮಿಷನರ್ ಸ್ಥಳಕ್ಕೆ ಭೇಟಿ
ಸ್ಥಳಕ್ಕೆ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್, ಡಿಸಿಪಿಗಳಾದಹನುಮಂತರಾಯ, ಲಕ್ಷ್ಮೀಗಣೇಶ್‌ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಳಿಕಆಯುಕ್ತರು ಕಾನ್‌ಸ್ಟೆಬಲ್ ವಿನೋದ್ ಅವರ ಕ್ಷೇಮ ವಿಚಾರಿಸಿದರು. ಮಂಗಳೂರು ದಕ್ಷಿಣ ರೌಡಿ ನಿಗ್ರಹದಳ ಎಸಿಪಿ ರಾಮರಾವ್ ಮತ್ತು ಸಿಬಂದಿ, ನಗರ ಇನ್‌ಸ್ಪೆಕ್ಟರ್ ಅಶೋಕ್, ಎಚ್ಸಿ ಮದನ್, ರವೀಂದ್ರನಾಥ್ ರೈ, ವಿನೋದ್ ಕಾರ್ಯಾಚರಣೆಯಲ್ಲಿದ್ದರು.
ಪ್ರಕರಣದ ಹಿನ್ನೆಲೆ
Advertisement
ಹಲ್ಲೆಯಿಂದ ಕಂಕನಾಡಿ ನಗರ ಠಾಣೆಯ ಪೊಲೀಸ್ ಕಾನ್‌ಸ್ಟೆಬಲ್ ವಿನೋದ್ (36) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ. ರೌಡಿ ಭವಿತ್‌ಗೂ ಗುಂಡಿನೇಟು ಬಿದ್ದಿದ್ದು, ಆತನನ್ನು ಕೂಡ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭವಿತ್ ವಿರುದ್ಧ ಮಂಗಳೂರು ಸೇರಿದಂತೆ ಜಿಲ್ಲೆಯ ಹಲವು ಠಾಣೆಗಳಲ್ಲಿ 8 ಕೇಸುಗಳಿವೆ. ಪರಾರಿಯಾಗಲೆತ್ನಿಸಿದ ಸಂದೇಶ್ (25), ಸನತ್ (22) ಹಾಗೂ ಆರೋಪಿಗಳಿಗೆ ಬೈಕ್ ನೀಡಿ ಸಹಕರಿಸಿದ ಅಶ್ವತ್ಥ್ (25) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಂದೇಶ್ ಕೊಟ್ಟಾರದಲ್ಲಿ ನಡೆದಿದ್ದ ಬಶೀರ್ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಕೃತ್ಯಕ್ಕೆ ಬಳಸಿದ್ದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Related Articles
Advertisement
ಜು. 7ರ ಮುಂಜಾನೆ 4 ಗಂಟೆಗೆಉಳಾೖಬೆಟ್ಟಿನಿಂದ ಟೆಂಪೋದಲ್ಲಿ ಮಾವಿನ ಹಣ್ಣು ಸಾಗಿಸುತ್ತಿದ್ದವರ ಮೇಲೆ ಕುಲಶೇಖರ ಚೌಕಿಯಲ್ಲಿ ದುಷ್ಕರ್ಮಿಗಳು ಹಲ್ಲೆ ನಡೆಸಿ 70,000ರೂ. ದರೋಡೆ ಮಾಡಿದ್ದರು.ಕಂಕನಾಡಿ ಠಾಣೆಯಲ್ಲಿ ದೂರು ದಾಖ ಲಾಗಿತ್ತು. ಪೊಲೀಸ್ ಆಯುಕ್ತರು ಆರೋಪಿಗಳ ಪತ್ತೆಗೆ ಮೂರು ಪ್ರತ್ಯೇಕ ತಂಡಗಳನ್ನು ರಚಿಸಿದ್ದರು.
3ನೇ ಶೂಟೌಟ್
ಸಂದೀಪ್ ಪಾಟೀಲ್ ಅವರುಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಬಂದ ಬಳಿಕ ರೌಡಿ ಗಳನ್ನು ಮಟ್ಟ ಹಾಕುವುದಕ್ಕೆ ಕಠಿನ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಎರಡು ತಿಂಗಳಲ್ಲಿ ಪೊಲೀಸರು ರೌಡಿಗಳ ಮೇಲೆ ನಡೆದ 3ನೇ ಶೂಟೌಟ್ ಇದು.
ಶೂಟೌಟ್ ನಡೆದಿದ್ದು ಹೇಗೆ?
ಮಾವಿನ ಹಣ್ಣು ಸಾಗಾಟಗಾರರ ಮೇಲಿನ ಹಲ್ಲೆ ಪ್ರಕರಣದ ಆರೋಪಿಗಳಲ್ಲೋರ್ವ ಭವಿತ್‌ರಾಜ್ ಪಾಣೆಮಂಗಳೂರು ಸಮೀಪದ ಮೆಲ್ಕಾರ್‌ನಲ್ಲಿದ್ದಾನೆ ಎಂಬ ಖಚಿತ ಮಾಹಿತಿಯನ್ವಯ ಕಂಕನಾಡಿ ಪೊಲೀಸರು ಬಂಧನಕ್ಕೆ ತೆರಳುತ್ತಿದ್ದರು. ಅಷ್ಟರಲ್ಲಿ ಆತ ಸಹಚರರೊಂದಿಗೆ ಕಾರಿನಲ್ಲಿ ಮಂಗಳೂರಿನತ್ತ ಬರುತ್ತಿರುವ ಮಾಹಿತಿ ಲಭಿಸಿದ್ದು, ಪೊಲೀಸರು ಆತನ ಕಾರನ್ನು ಬೆನ್ನಟ್ಟಿದರು. ಈ ವಿಚಾರ ತಿಳಿದ ಆರೋಪಿ ಅಡ್ಯಾರ್‌ನ ದಡ್ಡೊಳಿಗೆಯತ್ತ ಕಾರನ್ನು ತಿರುಗಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಪೊಲೀಸರು ಕಾರು ನಿಲ್ಲಿಸಲು ಸೂಚನೆ ನೀಡುತ್ತಿದ್ದಂತೆ ಭವಿತ್ ತಲವಾರು, ಚೂರಿಯಿಂದ ಹೆಡ್‌ಕಾನ್‌ಸ್ಟೆಬಲ್ ವಿನೋದ್ ಮೇಲೆ ಹಲ್ಲೆ ನಡೆಸಿದ. ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ ಭವಿತ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾದರು.