Advertisement
ಖರ್ಗೆ ವಿರುದ್ಧ ಬಿಜೆಪಿ ಕೆಂಡಾಮಂಡಲಮೈಸೂರು: ಸಂಸತ್ ಅಧಿವೇಶನದಲ್ಲಿ ಬಿಜೆಪಿ ಬಗ್ಗೆ ಲಘುವಾಗಿ ಮಾತನಾಡಿರುವ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನು ಖಂಡಿಸಿ ನಗರ ಬಿಜೆಪಿ ಯುವ ಮೋರ್ಚಾ ಕಾರ್ಯìಕರ್ತರು ಬುಧವಾರ ನಗರದ ಗಾಂಧಿ ಚೌಕದಲ್ಲಿ ಶ್ವಾನಗಳೊಂದಿಗೆ ಪ್ರತಿಭಟನೆ ನಡೆಸಿದರು.
Related Articles
Advertisement
ಖರ್ಗೆ ಹೇಳಿಕೆ ಬಿಜೆಪಿ ನಾಯಕರಿಗೆ ಮಾತ್ರ ವಲ್ಲದೆ ದೇಶದ ರಕ್ಷಣೆಯಲ್ಲಿ ಹಲವು ರೀತಿಯಲ್ಲಿ ನೆರವಾಗುತ್ತಿರುವ ಶ್ವಾನಗಳಿಗೂ ಅಪಮಾನ ಮಾಡಿ ದಂತಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಕಿಡಿಕಾರಿದರು. ಪ್ರತಿಭಟನೆಯಲ್ಲಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಗೋಕುಲ್ ಗೋವರ್ಧನ್, ಪ್ರಮುಖರಾದ ಸಂಪತ್ ಸೋಮಶೇಖರ್, ದೇವರಾಜ್, ಬದ್ರೀಶ್, ಪರಶಿವಮೂರ್ತಿ ಇನ್ನಿತರರು ಭಾಗವಹಿಸಿದ್ದರು.
ನಾಚನಹಳ್ಳಿಪಾಳ್ಯ: ನೀರಿನ ಕರ ಮನ್ನಾ ಮಾಡಲು ಒತ್ತಾಯಮೈಸೂರು: ಮೈಸೂರು ಮಹಾನಗರ ಪಾಲಿಕೆಯ 12ನೇ ವಾರ್ಡ್ ವ್ಯಾಪ್ತಿಯ ನಾಚನಹಳ್ಳಿಪಾಳ್ಯದ ಮನೆ ಗಳಿಗೆ ವಿಧಿಸಲಾಗಿರುವ ನೀರಿನ ಕರವನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿ ಎಸ್‌ಯುಸಿಐ ನೇತೃತ್ವ ದಲ್ಲಿ ಸ್ಥಳೀಯ ನಿವಾಸಿಗಳು ಬುಧ ವಾರ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಪ್ರತಿಭಟನಾಕಾರರು, 2012ರಲ್ಲಿ ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಜವಾಬ್ದಾರಿ ಯನ್ನು ಜಸ್ಕೋ ಕಂಪನಿಗೆ ನೀಡಿದ ಸಂದರ್ಭದಲ್ಲಿ ನಾಚನಹಳ್ಳಿ ಪಾಳ್ಯದ ಮನೆಗಳಿಗೆ ನೀರಿನ ಸಂಪರ್ಕ ಮತ್ತು ಮೀಟರ್ ಅಳವಡಿಸಿದ್ದರೂ, ಯಾವುದೇ ರೀತಿಯ ನೀರಿನ ಬಿಲ್ ನೀಡಿರಲಿಲ್ಲ. ಇದೀಗ ಏಕಾಏಕಿ ಕಳೆದ 7-8 ವರ್ಷದಿಂದ ಬಾಕಿಯಿರುವ ನೀರಿನ ತೆರಿಗೆ ಹಣವನ್ನು ಬಡ್ಡಿ ಸಮೇತ ಪಾವತಿಸುವಂತೆ ಸಾವಿರಾರು ರೂ.ಗಳ ಬಿಲ್ ನೀಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ನಾಚನಹಳ್ಳಿಪಾಳ್ಯದಲ್ಲಿ ಸಮರ್ಪಕ ವಾದ ಒಳಚರಂಡಿ ವ್ಯವಸ್ಥೆ ಇಲ್ಲ. ಹೀಗಿದ್ದರೂ ಇಲ್ಲಿನ ಮನೆಗಳಿಗೆ ಒಳಚರಂಡಿ ಶುಲ್ಕ ವಿಧಿಸಲಾಗಿದ್ದು, ಕೆಲವು ಮನೆಗಳಿಗೆ 40-50 ಸಾವಿರ ರೂ.ವರೆಗೆ ತೆರಿಗೆ ವಿಧಿಸಲಾಗಿದೆ. ಈ ಹಣವನ್ನು ಪಾವತಿಸದಿದ್ದರೆ ನೀರಿನ ಸಂಪರ್ಕ ಕಡಿತ ಮಾಡುವುದಾಗಿ ನಗರಪಾಲಿಕೆ ವತಿಯಿಂದ ಎಚ್ಚರಿಕೆ ಯನ್ನು ನೀಡಲಾಗಿದ್ದು, ಇದು ಸ್ಥಳೀಯ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನಾಚನಹಳ್ಳಿಪಾಳ್ಯದ ಮನೆಗಳಿಗೆ ವಿಧಿಸಲಾಗಿರುವ ನೀರಿನ ಕರವನ್ನು ಮನ್ನಾ ಮಾಡುವ ಜತೆಗೆ ಆರ್ಥಿಕವಾಗಿ ಹಿಂದುಳಿದಿರುವ ಜನರು ಹಾಗೂ ಕೊಳೆಗೇರಿ ನಿವಾಸಿಗಳಿಗೆ ಉಚಿತವಾಗಿ ನೀರಿನ ಸೌಲಭ್ಯ ಕಲ್ಪಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸದಸ್ಯರಾದ ಚಂದ್ರಶೇಖರ್, ಸಂಧ್ಯಾ ಪಿ.ಎಸ್, ಯಶೋಧರ್, ಸೀಮಾ ಜಿ.ಎಸ್, ಸುನಿಲ್ ಟಿ.ಆರ್, ಬಸವರಾಜು, ಸುಮಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಬೇಡಿಕೆ ಈಡೇರಿಕೆಗೆ ನಾಯಕ ಸಮುದಾಯ ಆಗ್ರಹ
ಮೈಸೂರು: ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ನಾಯಕ ಸಮುದಾಯಕ್ಕೆ ಮೀಸಲಾತಿ ನೀಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರಾಜ್ಯದ ಜನಸಂಖ್ಯೆಯಲ್ಲಿ ನಾಯಕ ಸಮುದಾಯವು 4ನೇ ಸ್ಥಾನದಲ್ಲಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರಿದ 69 ಲಕ್ಷ ಜನಸಂಖ್ಯೆ ಹೊಂದಿದೆ. ಆದರೂ ಈ ಸಮುದಾಯದ ಜನರು ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದು, ಹಲವು ವರ್ಷದಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ನಾಯಕ ಸಮುದಾಯದ ಸಮಸ್ಯೆಗಳನ್ನು ಬಗೆಹರಿಸುವ ಜತೆಗೆ ಸಮುದಾಯದ ಬೇಡಿಕೆಗಳನ್ನು ಈಡೇರಿ ಸಬೇಕು ಎಂದು ಒತ್ತಾಯಿಸಿ ವಿವಿಧ ಘೋಷಣೆ ಗಳನ್ನು ಕೂಗಿದರು. ನಾಯಕ ಸಮುದಾಯದ ಅನುಕೂಲ ಕ್ಕಾಗಿ ಮುಂದಿನ ಬಜೆಟ್ ನಲ್ಲಿ ಪರಿಶಿಷ್ಟ ಪಂಗಡಕ್ಕೆ ಶೇ.75 ಮೀಸಲಾತಿ ನಿಗದಿ ಪಡಿಸಬೇಕು, ಬ್ಯಾಗ್ ಲಾಗ್ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು, ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದಿಂದ ನೇರ ಸಾಲ ಯೋಜನೆ ಅನುಷ್ಠಾನಗೊಳಿಸಬೇಕು, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನ ವನ್ನು ಸಕಾಲದಲ್ಲಿ ಬಿಡುಗಡೆ ಮಾಡಬೇಕು. ಮೈಸೂರು ವಿವಿಯಲ್ಲಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿ ಭಟನಾನಿರತರು ಒತ್ತಾಯಿಸಿದರು. ವೇದಿಕೆ ರಾಜಾÂಧ್ಯಕ್ಷ ದ್ಯಾವಪ್ಪ ನಾಯಕ, ಶ್ರೀಧರ್, ಪ್ರಭಾಕರ್, ಮಧುವನ ಚಂದ್ರು, ಜವರಪ್ಪ ಹಾಗೂ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬುಧವಾರವೂ ಪ್ರತಿಭಟಿಸಿದ ದಸಂಸ ಸದಸ್ಯರು
ಮೈಸೂರು: ದಲಿತ ಮಹಿಳೆಯ ಮೇಲೆ ನಡೆದಿರುವ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ಬಂಧಿಸಲು ವಿಫಲರಾಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರವೂ ಪ್ರತಿಭಟನೆ ನಡೆಸಿದರು. ನಗರದ ಬೋಗಾದಿ ರಿಂಗ್‌ರಸ್ತೆ ಪಕ್ಕದ ಸ.ನಂ 83/2ಎ1 ಜಾಗಕ್ಕೆ ಸಂಬಂಧಿಸಿದಂತೆ ದಲಿತ ನಿರ್ಗತಿಕ ಮಹಿಳೆ ಶಿವಮ್ಮ ಹಾಗೂ ಕುಟುಂಬದ ಮೇಲೆ ದಾಸನ ಕೊಪ್ಪಲಿನ ಜಯರಾಮ, ಶಂಕರ್ ಹಾಗೂ ಶಾಂತಕುಮಾರ್ ಎಂಬುವವರು ಜಾತಿ ನಿಂದನೆ ಮಾಡುವ ಜತೆಗೆ ಕೊಲೆ ಬೆದರಿಕೆ ಹಾಕಿ ದೌರ್ಜನ್ಯ ವೆಸಗಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎಸ್ಸಿ/ಎಸ್ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ದೂರು ನೀಡಲಾಗಿದ್ದರೂ ಸಂಬಂಧಪಟ್ಟವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಪೊಲೀಸರು ಕೂಡಲೇ ಆರೋಪಿಗಳನ್ನು ಬಂಧಿಸುವ ಮೂಲಕ ದೌರ್ಜನ್ಯಕ್ಕೆ ಒಳ ಗಾಗಿರುವ ಮಹಿಳೆಗೆ ನ್ಯಾಯ ಕೊಡಿಸುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಒತ್ತಾಯಿಸಿದರು.