Advertisement

ಮಂಗಳನಲ್ಲಿ 9 ವರ್ಷ ಪೂರೈಸಿದ ರೋವರ್‌

07:33 PM Aug 25, 2021 | Team Udayavani |

ವಾಷಿಂಗ್ಟನ್‌: ಮಂಗಳ ಗ್ರಹದ ಪರಿಸರದ ಅಧ್ಯಯನದಲ್ಲಿ ತೊಡಗಿರುವ, ಅಮೆರಿಕ ಬಾಹ್ಯಾಕಾಶ ಸಂಸ್ಥೆಯ (ನಾಸಾ) ಕ್ಯುರಿಯಾಸಿಟಿ ರೋವರ್‌, ಅಲ್ಲಿನ ಪರಿಸರದಲ್ಲಿ ಕಾಲಿಟ್ಟ 9ನೇ ವರ್ಷಾಚರಣೆಯ ನಿಮಿತ ಆ ಗ್ರಹದ ಸುಂದರವಾದ ಫೋಟೋವೊಂದನ್ನು ರವಾನಿಸಿದೆ.

Advertisement

ಮಂಗಳದಲ್ಲಿರುವ ಮೌಂಟ್‌ ಶಾರ್ಪ್‌ ಪರ್ವತದ ಸಮೀಪದಲ್ಲಿ ವಿಶಾಲವಾದ ಭೂಭಾಗದ ವೈಡ್‌ ಆ್ಯಂಗಲ್‌ ಫೋಟೋ ಇದಾಗಿದ್ದು, ಮಂಗಳನ ಅಧ್ಯಯನಕ್ಕೆ ನೆರವಾಗಲಿದೆ ಎಂದು ನಾಸಾ ತಿಳಿಸಿದೆ.

ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 1224 ಹೊಸ ಪ್ರಕರಣ ಪತ್ತೆ| 1668 ಸೋಂಕಿತರು ಗುಣಮುಖ

2012ರ ಆ. 5ರಂದು, ನಾಸಾ ನಿರ್ಮಿತ ಈ ರೋವರ್‌, ಮಂಗಳನ ಅಂಗಳದಲ್ಲಿ ಇಳಿದಿತ್ತು. ಇಲ್ಲಿಯವರೆಗೆ, 3,305 ದಿನಗಳನ್ನು ಕಳೆದಿದೆ.

ಮಂಗಳನ ಹಗಲು-ರಾತ್ರಿಯ ಲೆಕ್ಕಾಚಾರದಲ್ಲಿ ಹೇಳುವುದಾದರೆ 3,217 ದಿನಗಳನ್ನು ಕಳೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next