Advertisement

ಲಾಲ್ಬಾಗ್‌ ಸುತ್ತ ಮಾರ್ಗ ಬದಲಾವಣೆ

09:23 AM Aug 09, 2019 | Suhan S |

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಂದಿನಿಂದ ಆ.18ರವರೆಗೆ ಲಾಲ್ಬಾಗ್‌ ಫ‌ಲಪುಷ್ಪ ಪ್ರದರ್ಶನ ನಡೆಯಲಿದ್ದು, ನಿತ್ಯ ಸಾವಿರಾರು ಜನ ಭೇಟಿ ನೀಡಲಿದ್ದಾರೆ. ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ತಪ್ಪಿಸಿ ಸುಗಮ ಸಂಚಾರಕ್ಕೆ ಅವಕಾಶ ನೀಡುವ ಸಲುವಾಗಿ ನಗರ ಸಂಚಾರ ಪೊಲೀಸರು ಸಂಚಾರ ಮಾರ್ಗಗಳನ್ನು ಬದಲಾ ಯಿಸಿದ್ದು, ಪರ್ಯಾಯ ಮಾರ್ಗ ಬಳಸಲು ಕೋರಿದ್ದಾರೆ.

Advertisement

ಬದಲಾದ ಮಾರ್ಗಗಳು: ಭಾರತ್‌ ಜಂಕ್ಷನ್‌ ಹಾಗೂ ಪೂರ್ಣಿಮಾ ಜಂಕ್ಷನ್‌ನಿಂದ ಆಗಮಿಸಿ ಊರ್ವಶಿ ಜಂಕ್ಷನ್‌ ಮೂಲಕ ಡಾ.ಮರಿಗೌಡ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಊರ್ವಶಿ ಜಂಕ್ಷನ್‌ ಬಳಿಯೇ ನಿರ್ಬಂಧಿಸಲಾಗಿದೆ. ಅಲ್ಲಿಂದ ಸಿದ್ದಯ್ಯ ರಸ್ತೆ – ಕೆ.ಎಚ್.ಜಂಕ್ಷನ್‌- ವಿಲ್ಸನ್‌ ಗಾರ್ಡನ್‌ ಮುಖ್ಯ ರಸ್ತೆ -12ನೇ ಕ್ರಾಸ್‌ ಮೂಲಕ ಮರಿಗೌಡ ರಸ್ತೆಗೆ ಬೇರೆಡೆ ತೆರಳಬಹುದಾಗಿದೆ.

ನೋ ಪಾರ್ಕಿಂಗ್‌ ಸ್ಥಳಗಳು: ಡಾ.ಮರಿಗೌಡ ರಸ್ತೆ, ಲಾಲ್ಬಾಗ್‌ ಮುಖ್ಯದ್ವಾರದಿಂದ ನಿಮ್ಹಾನ್ಸ್‌ವರೆಗಿನ ರಸ್ತೆ, ಕೆ.ಎಚ್.ರಸ್ತೆ, ಕೆ.ಎಚ್. ವೃತ್ತದಿಂದ ಶಾಂತಿನಗರ ಜಂಕ್ಷನ್‌ವರೆಗಿನ ರಸ್ತೆಯ ಎರಡೂ ಬದಿ, ಲಾಲ್ಬಾಗ್‌ ರಸ್ತೆ, ಸುಬ್ಬಯ್ಯ ವೃತ್ತದಿಂದ ಲಾಲ್ಬಾಗ್‌ ಮುಖ್ಯದ್ವಾರ, ಸಿದ್ದಯ್ಯ ರಸ್ತೆ, ಊರ್ವಶಿ ಜಂಕ್ಷನ್‌ನಿಂದ ವಿಲ್ಸನ್‌ ಗಾರ್ಡನ್‌ 12ನೇ ಕ್ರಾಸ್‌ವರೆಗೆ, ಕೃಂಬಿಗಲ್ ರಸ್ತೆಯ ಎರಡೂ ಬದಿ, ಟಿ.ಮರಿಯಪ್ಪ ರಸ್ತೆ, ಅಶೋಕ ಪಿಲ್ಲರ್‌ನಿಂದ ಸಿದ್ದಾಪುರ ಜಂಕ್ಷನ್‌ವರೆಗೆ ರಸ್ತೆ ಬದಿಗಳು ಹಾಗೂ ವಿಲ್ಸನ್‌ ಗಾರ್ಡನ್‌ನ ಎಲ್ಲ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಪಾರ್ಕಿಂಗ್‌ ಸ್ಥಳ: ಆಲ್ ಆಮೀನ್‌ ಕಾಲೇಜು ಆವರಣದಲ್ಲಿ ದ್ವಿಚಕ್ರ ವಾಹನ, ಶಾಂತಿನಗರ ಬಿಎಂಟಿಸಿ ಡಿಪೋದ 5 ಮಹಡಿಗಳಲ್ಲಿ 500 ಕಾರು ಹಾಗೂ 2000 ಬೈಕ್‌ ನಿಲ್ಲಿಸಲು ಅವಕಾಶವಿದ್ದು, ಜೆ.ಸಿ ರಸ್ತೆಯ ಬಿಬಿಎಂಪಿ ವಾಹನಗಳ ನಿಲುಗಡೆ ಸ್ಥಳದಲ್ಲೂ ವಾಹನ ನಿಲ್ಲಿಸಬಹುದು.

ಪಿಕ್‌ಅಪ್‌, ಡ್ರಾಪ್‌ ಸ್ಥಳ: ಡಾ.ಮರಿಗೌಡ ರಸ್ತೆಯ ಹಾಪ್‌ಕಾಮ್ಸ್‌ ಆವರಣದಲ್ಲಿ ಕ್ಯಾಬ್‌ ವಾಹನಗಳ ಪಿಕ್‌ಅಪ್‌ ಮತ್ತು ಡ್ರಾಪ್‌ ಪಾಯಿಂಟ್ ವ್ಯವಸ್ಥೆ ಕಲ್ಪಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next