Advertisement

ಸುತ್ತೆಲ್ಲ  ತುಂಬಿದೆ ನೀರು; ಕುಡಿಯಲು ಇಲ್ಲ  ಚೂರೂ…

01:00 AM Feb 13, 2019 | Team Udayavani |

ಕುಂದಾಪುರ: ಹೆಸರೇ ಉಪ್ಪಿನಕುದ್ರು. ನೀರು ಸಿಗಲು ಹೆಚ್ಚು ಆಳ ಬೇಕಿಲ್ಲ. ಆದರೆ ಹೆಸರಿನಂತೆ ಎಲ್ಲಿ ತೋಡಿದರೂ ಸಿಗುವುದು ಉಪ್ಪು ನೀರು. ಸುತ್ತಲೂ ನದಿಗಳಿವೆ, ಒಂದು ಬದಿ ಸಮುದ್ರ ಇದೆ. ಆದರೆ ಕುಡಿಯಲು ನೀರಿಗೆ ಮಾತ್ರ ವರ್ಷದುದ್ದಕ್ಕೂ ನಳ್ಳಿಯೇ ಗತಿ. ಹಾಗಿದ್ದರೂ ಮೇ ತಿಂಗಳಲ್ಲಿ ಟ್ಯಾಂಕರ್‌ ಬೇಕು!

Advertisement

ತಲ್ಲೂರಿನಲ್ಲಿ
ತಲ್ಲೂರು ಗ್ರಾಮ ಪಂಚಾಯತ್‌ ತಲ್ಲೂರು, ಉಪ್ಪಿನಕುದ್ರು 2 ಗ್ರಾಮಗಳನ್ನು ಹೊಂದಿದೆ. ತಲ್ಲೂರಿನಲ್ಲಿ  ಕೋಟೆಬಾಗಿಲು, ಪಾರ್ತಿಕಟ್ಟೆ, ಹೊಸ್ಮಠ, ಹೊರ್ಲಿಬೆಟ್ಟು, ರಾಜಾಡಿ, ನಟ್ಟಿಬೈಲು, ಪಿಂಗಾಣಿಗುಡ್ಡೆ, ಚಿತ್ತೇರಿಮಕ್ಕಿ, ಕಡಮಾರು, ನಾಯರಬಾಳು, ಬೆಂಡೆಹಿತ್ಲು, ಮಾರನಮನೆ ಮುಂತಾದ ಸಣ್ಣ ಸಣ್ಣ ಕೇರಿಗಳಿವೆ.

ಉಪ್ಪಿನಕುದ್ರುವಿನಲ್ಲಿ ಸುತ್ತಲೂ ನೀರಿನಿಂದ ಆವೃತವಾದ ಗ್ರಾಮ. ಆಲ್ಕುದ್ರು, ಉಪ್ಪಿನಕುದ್ರು ಎಂದು 2 ಭಾಗಗಳಾಗಿದ್ದು, ಶಿವಾಜಿಬೆಟ್ಟು, ಮೊಳಸಾಲುಬೆಟ್ಟು, ಸಂಕ್ರಿಬೆಟ್ಟು, ದುಗ್ಗನಬೆಟ್ಟು, ಉಡುಪರ ಬೆಟ್ಟು, ಬಾಳೆಬೆಟ್ಟು, ಅಕ್ಸಾಲಿಬೆಟ್ಟು, ಗಾಳಿ ಬೆಟ್ಟು, ಮೈಯ್ಯರಬೆಟ್ಟು, ಅಂಗಡಿಬೆಟ್ಟು ಮುಂತಾದ ಸಣ್ಣ ಸಣ್ಣ ಬೆಟ್ಟುಗಳಿವೆ. 

ಸುತ್ತಲೂ ನೀರು
ಲವಣ ನೀರಿನಿಂದ ಕೂಡಿರುವ ಈ ಗ್ರಾಮವು ಉಪ್ಪಿನಕುದ್ರು ಹೆಸರಿನ ಜತೆ ಸುಂದರ ದ್ವೀಪದಂತೆ ಕಾಣುವ ಈ ಊರಿಗೆ ಲವಣಪುರ ಎಂದೂ ಕರೆ ಯುತ್ತಾರೆ. ಗ್ರಾಮದ ಸುತ್ತಲೂ ಪಂಚಾವಳಿ ನದಿಗಳಿಂದ ಕೂಡಿರುತ್ತದೆ. ಸೌಪರ್ಣಿಕಾ, ಚಕ್ರಾನದಿ,  ಕುಬಾjನದಿ, ವಾರಾಹಿ ನದಿ, ದಾಸನಕಟ್ಟೆ ನದಿಗಳು ಒಂದಾಗಿ ಹರಿಯುತ್ತದೆ. ಪಶ್ಚಿಮ ಭಾಗದಲ್ಲಿ ಹೊಳೆಗೆ ಅಂಟಿಕೊಂಡು ಅರಬ್ಬೀ ಸಮುದ್ರವಿದೆ. ಆದರೆ ಕುಡಿ ಯಲು ಹನಿನೀರಿಲ್ಲ.

ಟ್ಯಾಂಕಿ ತುಂಬುತ್ತಿಲ್ಲ
ಈ ಬಾರಿ ನೀರಿನ ಸಮಸ್ಯೆ ಈಗಲೇ ಕಾಣಿಸಿ ಕೊಳ್ಳತೊಡಗಿದೆ. 4-5 ತಾಸಿನಲ್ಲಿ ತುಂಬುವ ಟ್ಯಾಂಕಿ ಈಗ 8-10 ತಾಸು ತೆಗೆದುಕೊಳ್ಳುತ್ತದೆ. ಟ್ಯಾಂಕಿ ಭರ್ತಿಯಾಗದೇ ಉಪ್ಪಿನಕುದ್ರು ಕೊನೆ ಪ್ರದೇಶಕ್ಕೆ ನೀರು ಹರಿಯುವುದಿಲ್ಲ. ಬೇಡರಕೊಟ್ಟಿಗೆ, ಶಂಕ್ರಿಬೆಟ್ಟು ಮೊದಲಾದೆಡೆ ಸಮಸ್ಯೆ ಇದೆ. ಉಪ್ಪಿನಕುದ್ರುವಿಗೆ ಪೈಪ್‌ಲೈನ್‌ ನೀರೇ ಆಧಾರ. ತಲ್ಲೂರಿನ ಕೋಟೆಬಾಗಿಲು ಎಂಬಲ್ಲಿ ಈವರೆಗೆ ಸಮಸ್ಯೆ ಇದ್ದರೂ ಈ ಬಾರಿ ಗೇಟ್‌ವಾಲ್‌Ì ಅಳವಡಿಸಿದ ಕಾರಣ ಸಮಸ್ಯೆ ತಲೆದೋರುವ ಸಾಧ್ಯತೆ ಕಡಿಮೆ. 

Advertisement

ಸಿಹಿನೀರಿಲ್ಲ
ಇಡೀ ತಲ್ಲೂರು ಗ್ರಾಮದಲ್ಲಿ ತಲ್ಲೂರಿನಿಂದ ಪಾರ್ಪಿಕಟ್ಟೆಯ 1 ಕಿಮೀ. ಪ್ರದೇಶದಲ್ಲಿ ಮಾತ್ರ ಸಿಹಿನೀರು ದೊರೆಯುವುದು. ಇದು ಪಂಚಾಯತ್‌ನ 6 ಸಾವಿರ ಜನಸಂಖ್ಯೆಗೆ ಪೂರೈಕೆಯಾಗಬೇಕು. ಸಬ್ಲಾಡಿ, ಕೋಟೆಬಾಗಿಲು ಸೇರಿದಂತೆ ಇತರ ಎಲ್ಲ ಕಡೆ ಉಪ್ಪುನೀರು. ತಲ್ಲೂರಿನಲ್ಲಿ 200, ಉಪ್ಪಿನಕುದ್ರುವಿನಲ್ಲಿ 300ರಷ್ಟು ನಳ್ಳಿ ಸಂಪರ್ಕಗಳಿವೆ. ನೀರು ಸರಬರಾಜಿಗಾಗಿ 6 ಬೃಹತ್‌ ಟ್ಯಾಂಕಿಗಳಿವೆ.  

ಮನವಿ ಮಾಡಿದ್ದೇವೆ
ಎರಡೂ ಗ್ರಾಮಗಳಿಗೆ ಒಂದೇ ಕಡೆಯ ಕೊಳವೆಬಾವಿಗಳಿಂದ ನೀರು ಕೊಡಬೇಕು. ಶಾಶ್ವತ ಪರಿಹಾರಕ್ಕೆ ಶಾಸಕರಿಗೆ, ಪುರಸಭೆಗೆ ಕೂಡ ಮನವಿ ಮಾಡಿದ್ದೇವೆ. ಸ್ಪಂದನೆ ಸಿಗಲಿಲ್ಲ, ಇನ್ನೊಮ್ಮೆ ಪುರಸಭೆಗೆ ಮನವಿ ಮಾಡಲಾಗುವುದು. ಬಜೆಟ್‌ನಲ್ಲಿ ಘೋಷಣೆಯಾದ ಸೌಕೂರು ಸಿದ್ದಾಪುರ ಏತ ನೀರಾವರಿ ಯೋಜನೆಯಿಂದ ಈ ಭಾಗಕ್ಕೂ ಪ್ರಯೋಜನ ದೊರೆಯಲಿದೆ ಎಂಬ ಆಶಯ ನಮ್ಮದು. 
– ಆನಂದ ಬಿಲ್ಲವ, ಅಧ್ಯಕ್ಷರು 

ಈ ವರ್ಷ ಬೇಗ 
ಈ ವರ್ಷ ಬೇಗನೇ ನೀರು ಆರುತ್ತಿದೆ. ಆದ್ದರಿಂದ ಬೇಗನೇ ಟ್ಯಾಂಕರ್‌ ನೀರು ಕೊಡಬೇಕಾದೀತು. ಕಳೆದ ವರ್ಷ ಮೇ ತಿಂಗಳಲ್ಲಷ್ಟೇ ಟ್ಯಾಂಕರ್‌ ನೀರು ಪೂರೈಸಿದ್ದೆವು. ಸಮಸ್ಯೆ ಆಗದಂತೆ ಕ್ರಮ ವಹಿಸಲಾಗುತ್ತಿದೆ. ಹಾಗಿದ್ದರೂ ಉಪ್ಪಿನಕುದ್ರುವಿಗೆ ಹೊರಗಿನ ನೀರೇ ಅನಿವಾರ್ಯ.
– ನಾಗೇಂದ್ರ ಜೆ. ಪಿಡಿಒ

– ಲಕ್ಷ್ಮೀ ಮಚ್ಚಿನ  

Advertisement

Udayavani is now on Telegram. Click here to join our channel and stay updated with the latest news.

Next