Advertisement

ರೋಶಿನಿ ವಿದ್ಯಾರ್ಥಿ ಕಲಿಕಾ ಕಿಟ್‌ ಬಿಡುಗಡೆ

06:40 AM Jan 05, 2019 | |

ಬೆಂಗಳೂರು: ಬಿಬಿಎಂಪಿ ರೋಶಿನಿ ಯೋಜನೆಯಡಿ ಕಲಿಕೆಗೆ ಸಂಬಂಧಿಸಿದ 300ಕ್ಕೂ ಹೆಚ್ಚಿನ ಕಾರ್ಯಕ್ರಮಗಳಿರುವ “ವಿದ್ಯಾರ್ಥಿ ಕಲಿಕಾ ಕಿಟ್‌’ ಅನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಶುಕ್ರವಾರ ಬಿಡುಗಡೆಗೊಳಿಸಿದರು.

Advertisement

ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಮೈಕ್ರೋಸಾಫ್ಟ್ ಹಾಗೂ ಟೆಕ್‌ಅವಾಂತ್‌ ಸಂಸ್ಥೆಗಳು ಪಾಲಿಕೆಯ ಎಲ್ಲ 156 ಶಾಲಾ-ಕಾಲೇಜು ಮಕ್ಕಳಿಗೆ ವಿದ್ಯಾರ್ಥಿ ಕಲಿಕಾ ಕಿಟ್‌ ನೀಡಲಿವೆ. ಕಿಟ್‌ನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ 300 ಕಾರ್ಯಕ್ರಮಗಳಿರುವ ಪೆನ್‌ ಡ್ರೈವ್‌ ನೀಡಲಾಗುತ್ತದೆ. ಅದರಲ್ಲಿರುವ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳನ್ನು ಹಲವಾರು ವಿಷಯಗಳನ್ನು ಸುಲಭವಾಗಿ ತಿಳಿಯಬಹುದಾಗಿದೆ ಎಂದರು.

ಪಾಲಿಕೆಯಿಂದ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೆ ಟ್ಯಾಬ್‌ ನೀಡಲಾಗುತ್ತದೆ. ಆ ಹಿನ್ನೆಲೆಯಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿಗಳು ಕಲಿಕಾ ಕಿಟ್‌ ನೀಡಲು ಮುಂದಾಗಿದ್ದು ಕಿಟ್‌ನಲ್ಲಿರುವ ಕಾರ್ಯಕ್ರಮಗಳನ್ನು ಟ್ಯಾಬ್‌ನಲ್ಲಿ ಅಥವಾ ಮನೆಯಲ್ಲಿರುವ ಕಂಪ್ಯೂಟರ್‌ನಲ್ಲಿ ಅಳವಡಿಕೆ ಮಾಡಿಕೊಳ್ಳಬಹುದಾಗಿದೆ. ಪಾಲಿಕೆಯಿಂದ ಪ್ರಮಾಣೀಕರಿಸಿದ ವಿದ್ಯಾರ್ಥಿಗಳು ಮಾತ್ರವೇ ಆ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬಹುದಾಗಿದ್ದು, ಬೇರೆಯವರಿಗೆ ದೊರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೇಯರ್‌ ಗಂಗಾಂಬಿಕೆ, ಉಪಮೇಯರ್‌ ಭದ್ರೇಗೌಡ, ಆಡಳಿತ ಪಕ್ಷ ನಾಯಕ ಎಂ.ಶಿವರಾಜು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next