Advertisement

ಹಗರಣ;CBIನಿಂದ ಮತ್ತೊಬ್ಬ ಟಿಎಂಸಿ ಸಂಸದನ ಬಂಧನ, BJP ಕಚೇರಿ ಮೇಲೆ ದಾಳಿ

05:21 PM Jan 03, 2017 | Sharanya Alva |

ಕೋಲ್ಕತಾ:60 ಸಾವಿರ ಕೋಟಿ ರೂಪಾಯಿಯ ರೋಸ್ ವ್ಯಾಲಿ ಚಿಟ್‌ಫ‌ಂಡ್‌ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಸಂಸದ ಸುದೀಪ್ ಬಂಡೋಪಾಧ್ಯಾಯ ಅವರನ್ನು ಮಂಗಳವಾರ ಸಿಬಿಐ ಬಂಧಿಸಿದ್ದಾರೆ. ಏತನ್ಮಧ್ಯೆ ಬಂಡೋಪಾಧ್ಯಾಯ ಬಂಧನದಿಂದ ಕೆರಳಿರುವ ಟಿಎಂಸಿ ಕಾರ್ಯಕರ್ತರು ಕೋಲ್ಕತಾದಲ್ಲಿನ ಬಿಜೆಪಿ ಕೇಂದ್ರ ಕಚೇರಿಗೆ ನುಗ್ಗಿ ದಾಳಿ ನಡೆಸಿದ್ದಾರೆ.

Advertisement

ಕೋಲ್ಕತಾದಲ್ಲಿ ಇಂದು ಬಂಡೋಪಾಧ್ಯಾಯ ಕಚೇರಿಯಲ್ಲಿ ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ಬಂಧಿಸಿದ್ದರು. ರೋಸ್ ವ್ಯಾಲಿ ಹಗರಣದ ಸಂಬಂಧ ಕಳೆದ ವಾರವಷ್ಟೇ ಟಿಎಂಸಿಯ ಸಂಸದ ತಪಾಸ್ ಪಾಲ್ ಅವರನ್ನು ಸಿಬಿಐ ಬಂಧಿಸಿತ್ತು. ಇದೀಗ ಟಿಎಂಸಿ 2ನೇಯ ಸಂಸದನ ಬಂಧನವಾದಂತಾಗಿದೆ.

ಹಗರಣದ ಹೆಸರಲ್ಲಿ ಪಕ್ಷದ ಸಂಸದರನ್ನು ಬಂಧಿಸುತ್ತಿರುವುದಾಗಿ ಟಿಎಂಸಿ ವರಿಷ್ಠೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next