ಮುಂಬಯಿ: ಕೋವಿಡ್ ಸಂದರ್ಭದಲ್ಲಿ ಸರಕಾರದ ನಿಯಮಾವಳಿಯನ್ನು ಪಾಲಿಸಿ ತೀಯಾ ಸಮಾಜ ಮುಂಬಯಿಯ ಪಶ್ಚಿಮ ವಲಯ ಸ್ಥಳೀಯ ಸಮಿತಿಯು ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯನ್ನು ನೆರವೇರಿಸಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲೂ ಸ್ಥಳೀಯ ಸಮಿತಿಯು ಧಾರ್ಮಿಕ ಕಾರ್ಯವನ್ನು ನಡೆಸಿ ಯುವಜನಾಂಗದಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವಂತೆ ಮಾಡುತ್ತಿರುವುದು ನಿಜಕ್ಕೂ ಅಭಿನಂದನೀಯ ಎಂದು ತೀಯಾ ಸಮಾಜ ಮುಂಬಯಿಯ ಉಪಾಧ್ಯಕ್ಷ, ಉದ್ಯಮಿ ರೂಪೇಶ್ ವೈ. ರಾವ್ ಅಭಿಪ್ರಾಯಪಟ್ಟರು.
ಜ. 17ರಂದು ಜೋಗೇಶ್ವರಿ ಪಶ್ಚಿಮದ ಬಾಂದ್ರೇಕರ್ ವಾಡಿಯ ಶ್ರೀ ಸಿದ್ಧಿವಿನಾಯಕ ಮಂದಿರದ ಸಭಾಗೃಹದಲ್ಲಿ ತೀಯಾ ಸಮಾಜ ಪಶ್ಚಿಮ ವಲಯದ ವತಿಯಿಂದ ಜರಗಿದ 19ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸಮಾಜದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂತಹ ಧಾರ್ಮಿಕ ಕಾರ್ಯಗಳು ಪೂರಕವಾಗಲಿವೆ ಎಂದರು.
ಇದನ್ನೂ ಓದಿ:ಮುರುಡೇಶ್ವರ ಮಹಾ ರಥೋತ್ಸವ
ತೀಯಾ ಸಮಾಜ ಮುಂಬಯಿಯ ಪಶ್ಚಿಮ ವಲಯದ ಕಾರ್ಯಾಧ್ಯಕ್ಷ ಸುಧಾಕರ ಉಚ್ಚಿಲ್ ಅವರ ನೇತೃತ್ವದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಾಜದ ಮಾಜಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ಮಾಜಿ ಕೋಶಾಧಿಕಾರಿ ರಮೇಶ್ ಉಳ್ಳಾಲ ಪಶ್ಚಿಮ ವಲಯದ ಮಾಜಿ ಕಾರ್ಯಾಧ್ಯಕ್ಷ ಐಲ್ ಬಾಬು, ಸುಂದರ್ ಬಿ. ಐಲ್, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರಾದ ದಿವ್ಯಾ ಆರ್. ಕೊಟ್ಯಾನ್, ಚಂದ್ರಾ ಸುವರ್ಣ, ತೀಯಾ ಸಮಾಜದ ಜತೆ ಕೋಶಾಧಿಕಾರಿ ವಿಶ್ವಥ್ ಬದ್ದೂರು, ಸಮಾಜದ ಸಾಂಸ್ಕೃತಿಕ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ, ಚಿತ್ರನಟಿ ಚಂದ್ರಾ ವಸಂತ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ವಾಸುದೇವ ಪಾಲನ್, ಶೈಲೇಶ್ ಬಂಗೇರ, ಮಹಿಳಾ ವಿಭಾಗದ ಕಾರ್ಯದರ್ಶಿ ಶಶಿಪ್ರಭಾ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.
ಪೂಜಾ ವಿಧಿಯನ್ನು ನರಹರಿ ತಂತ್ರಿ ಅವರು ನೆರವೇರಿಸಿದ್ದು, ಪೂಜೆಯಲ್ಲಿ ರವಿಚಂದ್ರ ಸುವರ್ಣ ಮತ್ತು ದಿವ್ಯಾ ಸುವರ್ಣ ದಂಪತಿ ಭಾಗವಹಿಸಿದ್ದರು. ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ ಬಾಬು ಕೋಟ್ಯಾನ್, ಕಾರ್ಯದರ್ ಪದ್ಮನಾಭ ಸುವರ್ಣ, ಕೋಶಾಧಿಕಾರಿ ರಾಮಚಂದ್ರ ಎನ್. ಕೋಟ್ಯಾನ್ ಮತ್ತು ಕಾರ್ಯಕಾರಿ ಸಮಿತಿ, ಉಪಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು ಪೂಜಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಪ್ರಸಾದ ವಿತರಣೆ ಅನಂತರ ಲಘು ಉಪಹಾರ ನಡೆಯಿತು.